ಅಧ್ಯಕ್ಷರು ಮುಹಮ್ಮದ್ ಸಖಾಫಿ. ಪ್ರಧಾನ ಕಾರ್ಯದರ್ಶಿ ನಿಝಾರ್ ಸಖಾಫಿ, ಕೋಶಾಧಿಕಾರಿ ಇಬ್ರಾಹಿಂ ಸಖಾಫಿ
(www.vknews.com) : ಸುನ್ನೀ ಜಂಇಯ್ಯತ್ತುಲ್ ಮುಅಲ್ಲಿಮೀನ್ ಎಸ್ ಜೆ ಎಂ ಸುಳ್ಯ ರೇಂಜ್ ಸಮಿತಿಯ ವಾರ್ಷಿಕ ಮಹಾ ಸಭೆಯು ರೇಂಜ್ ಅಧ್ಯಕ್ಷರಾದ ಅಬ್ದುಲ್ ಲತೀಫ್ ಸಖಾಫಿ ಮಾಡನ್ನೂರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಗಾಂಧಿನಗರ ಜುಮಾ ಮಸೀದಿ ಸಹಾಯಕ ಖತೀಬ್ ಶೌಕತ್ತಲಿ ಅಲ್ ಅಮಾನಿ ಉದ್ಘಾಟಿಸಿದರು. ಹನೀಫ್ ಸಖಾಫಿ ಬೆಳ್ಳಾರೆ ಖಿರಾಅತ್ ಪಠಿಸಿದರು. ಎಸ್ ಎಂ ಎ ಸುಳ್ಯ ರೀಜಿನಲ್ ಅಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ ಶುಭಕೋರಿದರು . ಪ್ರಧಾನ ಕಾರ್ಯದರ್ಶಿ ನಿಝಾರ್ ಸಖಾಫಿ ಮುಡೂರ್ ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ಇಸ್ಮಾಯಿಲ್ ಸಖಾಫಿ ಪೈಂಬಚ್ಚಾಲ್ ಲೆಕ್ಕ ಪತ್ರ ಮಂಡಿಸಿದರು.
ಎಸ್ ಜೆ ಎಂ ರಾಜ್ಯ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಪುಂಡೂರ್ ಆನ್ಲೈನ್ ತರಗತಿ ಎಂಬ ವಿಷಯದಲ್ಲೂ ಎಸ್ ಎಮ್ ಅಬೂಬಕ್ಕರ್ ಮುಸ್ಲಿಯಾರ್ ಪಬ್ಲಿಕ್ ಪರೀಕ್ಷೆ ಅನುಭವ ಎಂಬ ವಿಷಯದಲ್ಲೂ ಅವಲೋಕನ ನಡೆಸಿದರು.ಝುಬೈರ್ ಹಿಮಮಿ ಪ್ರಬಂದ ಮಂಡಿಸಿ , ಕರೀಂ ಸಖಾಫಿ ನ್ಯೂಸ್ ರೀಡಿಂಗ್ ನಡೆಸಿದರು. ಮುನೀರ್ ಹನೀಫಿ ಆಲಾಪಿಸಿದರು. ನಿಝಾರ್ ಸಖಾಫಿ ಸ್ವಾಗತಿಸಿ ಅಬ್ದುಲ್ ಖಾದರ್ ಮುಸ್ಲಿಯಾರ್ ವಂದಿಸಿದರು.ನಿರ್ಗಮನ ಅಧ್ಯಕ್ಷ ಅಬ್ದುಲ್ ಲತೀಫ್ ಸಖಾಫಿ ಕಾವು ರವರನ್ನು ಎಸ್ ಎಂ ಎ ಅಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ ಶಾಲು ಹೊದಿಸಿ ಗೌರವಿಸಿದರು.
ಈ ಸಂದರ್ಭ ಸಮಿತಿಯಲ್ಲಿ ಕೆಲವೊಂದು ಬದಲಾವಣೆ ಗೈದು ನೂತನ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು.
ಮುಹಮ್ಮದ್ ಸಖಾಫಿ ಮೊಗರ್ಪಣೆ (ಅಧ್ಯಕ್ಷರು) ನಿಝಾರ್ ಸಖಾಫಿ ಮುಡೂರ್ (ಪ್ರಧಾನ ಕಾರ್ಯದರ್ಶಿ) ಇಬ್ರಾಹಿಂ ಸಖಾಫಿ ಪುಂಡೂರ್(ಕೋಶಾಧಿಕಾರಿ)
ಉಪಾಧ್ಯಕ್ಷರುಗಳು ಮುಹಮ್ಮದ್ ಅಲಿ ಸಖಾಫಿ ಮಾದಾಪುರ (ವೆಲ್ಫೇರ್) ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ (ಮಿಷನರಿ) ಬಶೀರ್ ಸಅದಿ ಸುಣ್ಣಮೂಲೆ (ಟ್ರೈನಿಂಗ್) ಸೂಫಿ ಮುಸ್ಲಿಯಾರ್ (ಎಕ್ಸಾಮಿನೇಶನ್) ಮುಹಿಯುದ್ದೀನ್ ಲತೀಫಿ(ಮ್ಯಾಗಝೀನ್)
ಕಾರ್ಯದರ್ಶಿಗಳು ಅಬ್ದುಲ್ ಖಾದರ್ ಮುಸ್ಲಿಯಾರ್ (ವೆಲ್ಫೇರ್) ಕರೀಂ ಸಖಾಫಿ (ಮಿಷನರಿ) ಮುನೀರ್ ಹನೀಫಿ (ಟ್ರೈನಿಂಗ್) ಅಬೂಬಕ್ಕರ್ ಮುಸ್ಲಿಯಾರ್ (ಎಕ್ಸಾಮ್) ಝುಬೈರ್ ಹಿಮಮಿ(ಮ್ಯಾಗಝೀನ್)
ಎಕ್ಸಾಮೀನೇಶನ್ ಸದಸ್ಯರುಗಳು ಹನೀಫ್ ಸಖಾಫಿ ,ಶಾಫಿ ಮಿಸ್ಬಾಹಿ , ಶಾಹುಲ್ ಹಮೀದ್ ಸಖಾಫಿ ಇವರನ್ನು ಆರಿಸಲಾಯಿತು.
ಸಭೆಯಲ್ಲಿ ಸರಕಾರದ ವಕ್ಫ್ ಗೌರವ ಧನ ಅನುದಾನದಲ್ಲಿ ಹಾಗೂ ಕೋವಿಡ್ ವಾಕ್ಸಿನ್ ಆದ್ಯತಾ ಪಟ್ಟಿಯಲ್ಲಿ ಮದ್ರಸ ಅಧ್ಯಾಪಕರನ್ನು ಒಳಪಡಿಸಬೇಕೆಂದು ಸಂಬಂಧ ಪಟ್ಟವರಲ್ಲಿ ಆಗ್ರಹಪಡಿಸಲಾಯಿತು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.