ಕೆಜಿಎಫ್ ( ವಿಶ್ವ ಕನ್ನಡಿಗ ನ್ಯೂಸ್ ):- ಪೊಲೀಸ್ ಉಪ ವಿಭಾಗದ ನೂತನ ಡಿವೈಎಸ್ಪಿ ಆಗಿ ಪಿ.ಮುರಳೀಧರ್ ಅವರು ಸೋಮವಾರದಂದು ಸಂಜೆ ಅಧಿಕಾರ ವಹಿಸಿಕೊಂಡರು. ಹಾಲಿ ಕೆಜಿಎಫ್ ಉಪವಿಭಾಗದ ಪ್ರಭಾರದಲ್ಲಿದ್ದ ಡಿವೈಎಸ್ಪಿ ಬಿ.ಕೆ.ಉಮೇಶ್ ಅವರಿಗೆ ಕೋಲಾರದ ಡಿ.ಸಿ.ಆರ್.ಇ. ವಿಭಾಗಕ್ಕೆ ವರ್ಗಾವಣೆಯಾಗಿರುತ್ತದೆ.
ನೂತನ ಡಿವೈಎಸ್ಪಿ , ಪಿ.ಮುರಳೀಧರ್ ಅವರಿಗೆ ಪ್ರಸ್ತುತ ಬೆಂಗಳೂರು ಎಸ್.ಟಿ.ಎಫ್ ನಿಂದ ಕೆಜಿಎಫ್ಗೆ ವರ್ಗವಾಗಿದ್ದು , ಅವರು ಈ ಹಿಂದೆ ಬಳ್ಳಾರಿ ಡಿವೈಎಸ್ಪಿ , ಡಿಸಿಆರ್ ಬೆಂಗಳೂರು ವಿಭಾಗ , ಬೆಂಗಳೂರು ನಗರದ ಬನಶಂಕರಿ , ಚಿಕ್ಕಜಾಲ ಸಂಚಾರ ಮತ್ತು ಕಾನೂನು ಸುವ್ಯವಸ್ಥೆ ಮೊದಲಾದೆಡೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ.
ನೂತನ ಡಿವೈಎಸ್ಪಿ ಪಿ.ಮುರಳೀಧರ ಅವರನ್ನು ಎಸ್ಪಿ ಇಲಕ್ಕಿಯಾ ಕರುಣಾಕರನ್ ಮತ್ತು ಪೊಲೀಸ್ ಅಧಿಕಾರಿ , ಸಿಬ್ಬಂದಿಗಳು ಹಾರ್ಥಿಕವಾಗಿ ಸ್ವಾಗತಿಸಿ , ನಿಕಟಪೂರ್ವ ಡಿವೈಎಸ್ಪಿ ಬಿ.ಕೆ.ಉಮೇಶ್ ಅವರನ್ನು ಆತ್ಮೀಯವಾಗಿ ಬಿಟ್ಟರು . ನೂತನ ಡಿವೈಎಸ್ಪಿ ಆಗಿ . ಪಿ.ಮುರಳೀಧರ್ ಅವರಿಗೆ ಹಾಲಿ ಕೆಜಿಎಫ್ ಉಪವಿಭಾಗದ ಪ್ರಭಾರದಲ್ಲಿದ್ದ ಡಿವೈಎಸ್ಪಿ ಬಿ.ಕೆ.ಉಮೇಶ್ ಅವರು ಪಭಾರವನ್ನು ಹಸ್ತಾಂತರಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.