ಕೋಲಾರ ( ವಿಶ್ವ ಕನ್ನಡಿಗ ನ್ಯೂಸ್ ) :- ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೇ ರಾಷ್ಟ್ರ ಭಾರತ . ಜನ ಸಂಖ್ಯೆ ಹೆಚ್ಚಾದರೆ ಸಾಮಾಜಿಕ , ಆರ್ಥಿಕ ಹಾಗೂ ಆರೋಗ್ಯಕರ ಸಮಾಜದ ಮೇಲೆ ಯಾವ ರೀತಿ ದೃಷ್ಟರಿಣಾಮ ಬೀರುತ್ತದೆ ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸಿ , ಜನಸಂಖ್ಯೆ ನಿಯಂತ್ರಿಸಲು ಕುಟುಂಬ ಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಿ ಎಂದು ಜಿಲ್ಲಾಧಿಕಾರಿಗಳಾದ ಡಾ | ಆರ್ , ಸೆಲ್ವಮಣಿ ಅವರು ತಿಳಿಸಿದರು. ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯೆ ನಿಯಂತ್ರಣ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿ ಸಮಾಜದಲ್ಲಿ ತಾಯಿ – ಮಗು ಆರೋಗ್ಯ ಕಾಪಾಡಬೇಕಾದರೆ ಕುಟುಂಬ ಕಲ್ಯಾಣ ಯೋಜನೆಗಳು ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಕುಟುಂಬ ಆರೋಗ್ಯಕರವಾಗಿದ್ದರೆ ದೇಶ ಆರೋಗ್ಯವಾಗಿರುತ್ತದೆ ಎಂದು ಅವರು ಹೇಳಿದರು.
ಸಮಾಜದಲ್ಲಿ ಬಾಲ್ಯವಿವಾಹ ಒಂದು ಪಿಡುಗಾಗಿ ಕಾಡುತ್ತಿದ್ದು ಬಾಲ್ಯವಿವಾಹ ಮತ್ತು ಬಾಲ್ಯ ಗರ್ಭಧಾರಣೆಯಿಂದ ಅಪೌಷ್ಟಿಕ ಮಕ್ಕಳ ಜನನವಾಗಿ ಮಹಿಳೆಯರು ಅನೇಕ ತೊಂದರೆಗಳನ್ನು ಅನುಭವಿಸುವುದರ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು . ಬಾಲ್ಯವಿವಾಹಗಳು ಕಂಡುಬಂದಲ್ಲಿ ಆಶಾ ಕಾರ್ಯಕರ್ತೆಯರು ಪ್ರಕರಣಗಳನ್ನು ದಾಖಲಿಸಿ ಎಂದು ಸೂಚಿಸಿದರು.
ಬಾಲ್ಯವಿವಾಹ ನಿರ್ಮೂಲನೆ ಮಾಡುವುದರಿಂದ ಒಳ್ಳೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಅವರು ತಿಳಿಸಿದರು , ಮಕ್ಕಳ ನಡುವಿನ ಅಂತರವನ್ನು ಕಾಪಾಡಿಕೊಳ್ಳಲು ಜನರಲ್ಲಿ ಅರಿವು ಮೂಡಿಸಿ , ಗರ್ಭಧಾರಣೆಯಲ್ಲಿ ಲಿಂಗಾನು ಪತ್ತೆಯ ಬಗ್ಗೆ ಸ್ಯಾನ್ ಸೆಂಟರ್ ಗಳಿಗೆ ತಾಲ್ಲೂಕು ವೈದ್ಯಾಧಿಕಾರಿಗಳು ಹಾಗೂ ಕುಟುಂಬ ಕಲ್ಯಾಣ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಭ್ರೂಣಹತ್ಯೆಯನ್ನು ತಡೆಯಿರಿ ಎಂದು ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕರಿಗಳಾದ ಡಾ || ಜಗದೀಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಕುಟುಂಬ ಕಲ್ಯಾಣ ಯೋಜನೆಗಳನ್ನು ಪ್ರಾರಂಭಿಸಲಾಯಿತು. ಜನಸಂಖ್ಯೆ ಹೆಚ್ಚಾಗುವುದರಿಂದ ಸಮಾಜದಲ್ಲಿ ಅನೇಕ ರೀತಿಯ ತೊಂದರೆಗಳು ಆಗುತ್ತದೆ. ಪ್ರತಿಯೊಬ್ಬರಿಗೂ ಆಹಾರ ಒದಗಿಸಲು ಈಗಿನ ಕಾಲದಲ್ಲಿ ಹೈಬ್ರಿಡ್ ಸಂಶೋಧನೆಗಳಿಂದ ಸಾಧ್ಯವಾಗುತ್ತಿದೆ . ಆದರೆ ವಸತಿ , ಆರೋಗ್ಯ , ಶುದ್ಧ ಕುಡಿಯುವ ನೀರಿನ ಕೊರತೆ ಉದ್ಭವಿಸುತ್ತಿದೆ ಎಂದು ಅವರು ತಿಳಿಸಿದರು.
ಆರೋಗ್ಯವಂತ ಮಗುವನ್ನು ಪಡೆದ ನಂತರ 3 ರಿಂದ 5 ವರ್ಷ ಮತ್ತೊಂದು ಮಗುವಿಗೆ ಅಂತರವಿರಬೇಕು. ಪ್ರತಿಯೊಬ್ಬರೂ ಎಲ್ಲಾ ಕುಟುಂಬ ನಿಯಂತ್ರಣಗಳನ್ನು ಅಳವಡಿಸಿಕೊಳ್ಳಬೇಕು , ನೋ ಸ್ಕಾಲ್ ಪೆಲ್ ವ್ಯಾಸೆಕ್ಕಾಮಿ ಬಳಸುವುದರಿಂದ ಪುರುಷರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ . ಕುಟುಂಬ ಕಲ್ಯಾಣ ಯೋಜನೆಗಳನ್ನು ಅಳವಡಿಸಿಕೊಂಡರೆ ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರು ಸೇವೆ ಸಲ್ಲಿಸಿದಂತಾಗುತ್ತದೆ ಜಿಲ್ಲೆಯ ಸವಾಂ ೯ ಗೀಣ ಅಭಿವೃದ್ಧಿಗೆ ಎಲ್ಲರೂ ಶ್ರಮಿಸೋಣ ಎಂದು ಅವರು ಹೇಳಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ಕಾರ್ಯಕ್ರಮದ ಅನುಷ್ಠಾನ ಅಧಿಕಾರಿಗಳಾದ ಡಾ | ಚಂದನ್ ಅವರು ಮಾತನಾಡಿ , ವಿಶ್ವದಲ್ಲಿ 780 ಕೋಟಿ ಜನಸಂಖ್ಯೆವಿದೆ , ಭಾರತದಲ್ಲಿ ಸುಮಾರು 140 ಕೋಟಿ ಜನಸಂಖ್ಯೆ ಹೊಂದಿದ್ದು ವಿಶ್ವದಲ್ಲಿ 2 ನೇ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದೆ . ಜನಸಂಖ್ಯೆ ಸ್ಫೋಟದಿಂದ ಸಂಭವಿಸುವ ಸಮಸ್ಯೆಗಳನ್ನು ತಡೆಯಲು ವಿಶ್ವಸಂಸ್ಥೆಯು 1987 ರಿಂದ ವಿಶ್ವ ಜನಸಂಖ್ಯೆ ದಿನಾಚರಣೆ ಯನ್ನು ಪ್ರತಿವರ್ಷ ಆಚರಿಸುವುದರ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು .
ಆರ್ಫ ವಿಶ್ವ ಜನಸಂಖ್ಯೆ ದಿನಾಚರಣೆ ಅಭಿಯಾನ 2021 ಸಾಲಿನಲ್ಲಿ “ ವಿಪತ್ತಿನಲ್ಲೂ ಕುಟುಂಬ ಯೋಜನೆ ಸೇವೆ , ಸ್ವಾವಲಂಬಿ ರಾಷ್ಟ್ರ ಮತ್ತು ಕುಟುಂಬಕ್ಕೆ ನಾಂದಿ ” ಎಂಬ ಘೋಷವಾಕ್ಯದೊಂದಿಗೆ ಜೂನ್ 27 ರಿಂದ ಜುಲೈ 10 ರವರೆಗೆ ಸಮುದಾಯ ಜಾಗೃತಿಕರಣ ಪಾಕ್ಷಿಕದಲ್ಲಿ ಆರೋಗ್ಯ ಸಿಬ್ಬಂದಿ ಹಾಗೂ ಆಶಾಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿ ದಂಪತಿಗಳಿಗೆ ಕುಟುಂಬ ಯೋಜನೆಯ ವಿಧಾನಗಳಾದ ಛಾಯ , ನಿರೋದ್ , ಐ.ಯು.ಸಿ.ಡಿ , ಪಿ.ಟಿ.ಐ.ಯು.ಸಿ.ಡಿ , ಅಂತರ ಚುಚ್ಚುಮದ್ದು , ಮಾಲಾ – ಎನ್ ಇತ್ಯಾದಿ ತಾತ್ಕಾಲಿಕ ವಿಧಾನಗಳ ಬಗ್ಗೆ ಪುರುಷ ಸಂತಾನಹರಣ ಶಸ್ತ್ರಚಿಕಿತ್ಸೆ ಮಹಿಳೆಯರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆಗಳ ಬಗ್ಗೆ ಮಾಹಿತಿ ಸೇವೆ ನೀಡುವರು ಹಾಗೂ ಜುಲೈ 11 ರಿಂದ ಜುಲೈ 24 ರವರೆಗೆ ಜನಸಂಖ್ಯಾ ಸ್ಥಿರೀಕರಣ ಪಾಕ್ಷಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಕುಟುಂಬ ಕಲ್ಯಾಣ ಸೇವೆಗಳು ಕೊರತೆಯಾದಲ್ಲಿ ಅನಗತ್ಯ ಗರ್ಭಧಾರಣೆ ಹಾಗೂ ಹದಿಹರೆಯದ ಹೆಣ್ಣುಮಕ್ಕಳು ಗರ್ಭಿಣಿಯಾದಾಗ ಕಡಿಮೆ ತೂಕದ ಮಕ್ಕಳು , ಗರ್ಭಪಾತ , ರಕ್ತಹೀನತೆ , ಅಪೌಷ್ಟಿಕತೆಗೆ ತುತ್ತಾಗುತ್ತಾರೆ . ಹೆಣ್ಣುಮಕ್ಕಳ ಮೇಲೆ ಅನೇಕ ರೀತಿಯ ದುಷ್ಪರಿಣಾಮ ಬೀರುತ್ತದೆ ಹಾಗೂ ತಾಯಿ ಮತ್ತು ಮಕ್ಕಳ ಮರಣ ಪ್ರಮಾಣ ಹೆಚ್ಚಾಗುತ್ತದೆ. ಒಂದು ಮಗುವಿಗೂ ಇನ್ನೊಂದು ಮಗುವಿಗೂ ಕನಿಷ್ಠ 3 ರಿಂದ 5 ವರ್ಷಗಳ ಅಂತರವಿದ್ದಾರೆ.
ಹೆಣ್ಣು ದೈಹಿಕ ಮಾನಸಿಕ ಸಾಮಾಜಿಕವಾಗಿ ಉತ್ತಮ ಆರೋಗ್ಯಕರ ಜೀವನ ನಡೆಸಬಲ್ಲರು ಎಂದು ಅವರು ಹೇಳಿದರು , ಜಿಲ್ಲೆಯಲ್ಲಿ ಒಟ್ಟು 17,14,417 ಜನಸಂಖ್ಯೆ ಹಾಗೂ 15 ರಿಂದ 49 ವರ್ಷದ ಅರ್ಹ ದಂಪತಿಗಳ ಸಂಖ್ಯೆ 2,57,162 ಹೊಂದಿದ್ದು ಕುಟುಂಬ ಕಲ್ಯಾಣ ಯೋಜನೆ ಅಡಿಯಲ್ಲಿ ಶಾಶ್ವತ ಮತ್ತು ತಾತ್ಕಾಲಿಕ ವಿಧಾನಗಳ ಬಗ್ಗೆ ಪ್ರತಿವರ್ಷ ಶಾಶ್ವತ ವಿಧಾನಗಳಾದ ಪುರುಷ ಸಂತಾನಹರಣ ಶಸ್ತ್ರಚಿಕಿತ್ಸೆ ಹಾಗೂ ಮಹಿಳೆಯರಿಗೆ ಸಂತಾನಹರಣ ಚಿಕಿತ್ಸೆ ಗುರಿಯನ್ನು 10,315 ಸಾಧಿಸಲಾಗುತ್ತಿದೆ.
ತಾತ್ಕಾಲಿಕ ವಿಧಾನಗಳಾದ ಪಿ.ಪಿ.ಐ.ಯು.ಸಿ.ಡಿ ಮತ್ತು ಐ.ಯು.ಸಿ.ಡಿ 9,880 , ನುಂಗುವ ಗುಳಿಗೆ 6,898 , ಅಂತರ ಚುಚ್ಚುಮದ್ದು 2,489 ನಿರೋದ್ 10,468 ಗುರಿಯನ್ನು ಸಾಧಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಎಲ್ಲಾ ಕುಟುಂಬ ಯೋಜನೆ ನಿಯಂತ್ರಣ ವಿಧಾನಗಳು ಎಲ್ಲಾ ಉಪಕೇಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರ ತಾಲ್ಲೂಕು ಆಸ್ಪತ್ರೆ ಜಿಲ್ಲಾ ಆಸ್ಪತ್ರೆಗಳಲ್ಲಿ ದೊರೆಯುತ್ತದೆ ತಾತ್ಕಾಲಿಕ ವಿಧಾನಗಳ ಸೇವೆಯು ಗ್ರಾಮ ಮಟ್ಟದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ನೀಡುವರು , ವಿಧಾನಗಳ ಆಯ್ಕೆಯ ಸ್ವಾತಂತ್ರ್ಯವೂ ದಂಪತಿಗಳಾದಗಿದೆ ಎಂದು ಅವರು ಹೇಳಿದರು , ಸಾಕು ಎಂದು ಬಾಲ್ಯವಿವಾಹ ಮತ್ತು ಬಾಲ್ಯ ಗರ್ಭಧಾರಣೆ ಬಗ್ಗೆ ಅರಿವು ಮೂಡಿಸಬೇಕು , ಹೆಣ್ಣು ಭ್ರೂಣಹತ್ಯೆ ತಡೆಯಬೇಕು.ಗಂಡಾಗಲಿ ಹೆಣ್ಣಾಗಲಿ ಆರೋಗ್ಯಕರವಾದ ಮಗು ಜನರಿಗೆ ಅರಿವು ಮೂಡಿಸಬೇಕು. ಸಮಾಜದಲ್ಲಿ ತಾಯಿ – ಮಗು ಆರೋಗ್ಯ ಕಾಪಾಡಬೇಕಾದರೆ ಕುಟುಂಬ ಕಲ್ಯಾಣ ಯೋಜನೆಗಳು ಪ್ರಮುಖ ಪಾತ್ರವಹಿಸಲಿವೆ ಎಂದು ಅವರು ತಿಳಿಸಿದರು. ಐ.ಇ.ಸಿ ಕಾರ್ಡ್ಗಳನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳಾದ ಡಾ || ಎಂ.ಕಮಲ , ಜಿಲ್ಲಾ ಕುಷ್ಠರೋಗ ಮತ್ತು ಅಂಧತ್ವ ನಿರ್ಮೂಲನಾಧಿಕಾರಿಗಳಾದ ಡಾ || ನಾರಾಯಣಸ್ವಾಮಿ , ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ || ವಿಜಯಕುಮಾರಿ , ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಎಂ.ಪ್ರೇಮ , ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ರೇಣುಕಾ ದೇವಿ.ಹೆಚ್ , ತಾಲ್ಲೂಕು ವೈದ್ಯಾಧಿಕಾರಿಗಳಾದ ರಮ್ಯ ದೀಪಿಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.