ಕಲ್ಲಡ್ಕ(www.vknews.com): ಒಂದು ಶೈಕ್ಷಣಿಕ ವರ್ಷದಲ್ಲಿ ನಡೆದ ಪೂರ್ತಿ ಪಾಠಗಳನ್ನು ಕೇವಲ ಮೂರು ಗಂಟೆಗಳಲ್ಲಿ ಬರೆದು ಮುಗಿಸುವ ಮಕ್ಕಳ ಮೆದುಳಿನಲ್ಲಿನ ಶಕ್ತಿ ನಿಜಕ್ಕೂ ಅತ್ಯದ್ಭುತ. ಈ ಮಧ್ಯೆ ಹೆತ್ತವರು ಆ ಮೆದುಳಿಗೆ ಇನ್ನೂ ಹೆಚ್ಚಿನ ಒತ್ತಡ ತುಂಬದಿರಿ ಎಂದು ಕಲ್ಲಡ್ಕ ಜುಮಾ ಮಸೀದಿ ಖತೀಬ್ ಶೇಖ್ ಮಹಮ್ಮದ್ ಇರ್ಫಾನಿ ಅಭಿಪ್ರಾಯ ವ್ಯಕ್ತಪಡಿಸಿದರು. ದಿನಾಂಕ 14.7.2021 ರ ಬುಧವಾರ ನಡೆದ ಕಲ್ಲಡ್ಕ ಮುಹಿಯ್ಯುದ್ದೀನ್ ಜುಮ್ಮಾ ಮಸೀದಿ ಆಡಳಿತ ಸಮಿತಿ ವಿದ್ಯಾರ್ಥಿಗಳಿಗೆ ಆಯೋಜಿಸಿದ ಪರೀಕ್ಷಾ ಪೂರ್ವ ಸಿದ್ದತೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳೇ ನೀವು ಅಸಾಧ್ಯ ಎಂಬ ಪದದಿಂದ ‘ಅ’ ಎಂಬ ಪದವನ್ನು ಅಳಿಸಿದರೆ ಮತ್ತೆ ಇರುವ ಪದ ಸಾಧ್ಯ ಈ ಮಾತು ನಿಮಗೆ ಅನ್ವಯಿಸುತ್ತದೆ ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಜವಾಝ್ ಕಲ್ಲಡ್ಕ ಮಾತಾಡಿ, ಇಂದಿನ ಮಕ್ಕಳೆ ಮುಂದಿನ ಜನಾಂಗ ನೀವು ಮುಂದೆ ನಾಯಕತ್ವ ವಹಿಸಿಕೊಂಡು ದೇಶವನ್ನು ಮುನ್ನಡೆಸಲಿದ್ದೀರಿ ಎಂದು ಶುಭಹಾರೈಸಿದರು. ಮುನೀರುಲ್ ಇಸ್ಲಾಂ ಮದ್ರಸ ಸದರ್ ಉಸ್ತಾದ್ ಬಿ.ಟಿ.ಇಕ್ಬಾಲ್ ದಾರಿಮಿ ಸ್ವಾಗತಿಸಿದರು. ಆಡಳಿತ ಸಮಿತಿ ಸದಸ್ಯ ಖಾಸಿಂ ಉಪಸ್ಥಿತಿತರಿದ್ದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಕಲ್ಲಡ್ಕ ಮುಹಿಯ್ಯುದ್ದೀನ್ ಜುಮ್ಮಾ ಮಸೀದಿ ಕಾರ್ಯದರ್ಶಿ ಅಬೂಬಕ್ಕರ್ ಸಾಹೇಬ್ ವಹಿಸಿದ್ದರು. ಆಡಳಿತ ಸಮಿತಿ ಸದಸ್ಯ ಅಬ್ದುಲ್ ಹಮೀದ್ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.