ತಾಜಾ ತರಕಾರಿ ಆರೋಗ್ಯಕ್ಕೆ ಹಾನಿಕಾರಕ…?
ಆರೋಗ್ಯವೇ ಭಾಗ್ಯ – ಈ ವಾಕ್ಯವನ್ನು ನಾವು ನಮ್ಮ ಸಂಭಾಷಣೆಗಳಲ್ಲಿ ಬಳಸುವುದುಂಟು. ಆರೋಗ್ಯವಾಗಿರಲು ಏನೆಲ್ಲಾ ಮಾಡುತ್ತೇವೆ. “ವ್ಯಾಯಾಮ ಮಾಡಿ. ಒಳ್ಳೆಯ ಆಹಾರವನ್ನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ” ನಮ್ಮ ಹಿತೈಷಿಗಳಿಂದ ಈ ಉಪದೇಶ ನಮ್ಮ ಕಿವಿಗಳ ಮೇಲೆ ಬೀಳುತ್ತಲೇ ಇರುತ್ತದೆ. ಹಸಿರು ತರಕಾರಿ ಆರೋಗ್ಯಕ್ಕೆ ಒಳ್ಳೆಯದು. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಅದೇ ತರಕಾರಿ ನಮ್ಮ ಆರೋಗ್ಯಕ್ಕೆ ಹಾನಿ ಉಂಟು ಮಾಡಬಹುದು..! ಕೆಲ ವ್ಯಾಪಾರಿಗಳು ತರಕಾರಿ, ಹಣ್ಣು ಹಂಪಲು ಮಾರುಕಟ್ಟೆಗೆ ತರುವ ಮುನ್ನ ಅದಕ್ಕೆ ಬಣ್ಣದ ಲೇಪನವನ್ನು ಮಾಡುತ್ತಾರೆ. ತರಕಾರಿಯನ್ನು ಬಣ್ಣದ ನೀರಿನಲ್ಲಿ ಮುಳುಗಿಸಿ ತಾಜಾ ತರಕಾರಿಯಂತೆ ಕಾಣುವ ಹಾಗೆ ಪರಿವರ್ತಿಸುತ್ತಾರೆ. ಆ ಬಣ್ಣದ ನೀರು ವಿಷಕಾರಕ. ತಕ್ಷಣ ಅದರ ಪರಿಣಾಮ ನಮ್ಮ ಆರೋಗ್ಯದ ಮೇಲೆ ಗೋಚರವಾಗದೇ ಹೋದರೂ ದೀರ್ಘಕಾಲದಲ್ಲಿ ಅನೇಕ ರೋಗಗಳಿಗೆ ಬುನಾದಿಯಾಗುವ ಸಾಧ್ಯತೆಗಳುಂಟು. ಜನಸಾಮಾನ್ಯರು ದಿನನಿತ್ಯ ಉಪಯೋಗಿಸುವಂತಹ ತರಕಾರಿ ಹಣ್ಣುಹಂಪಲು ವಿಷಕಾರಿಯಾಗಿ ಹೋದರೆ ದೇಶದ ಮುಂದಿನ ಪೀಳಿಗೆ ಆರೋಗ್ಯಕರವಾಗಿ ಬದುಕಲು ಸಾಧ್ಯವೇ? ವ್ಯಾಪಾರಿಗಳಲ್ಲಿ ವಿನಂತಿ ದಯವಿಟ್ಟು ನಂಬಿಕೆದ್ರೋಹ ಮಾಡಬೇಡಿ, ಸ್ವಸ್ಥ ದೇಶ ಕಟ್ಟಲು ಸ್ವಸ್ಥ ಆಹಾರ ಒದಗಿಸಿ. ತಿನ್ನುವ ಯಾವುದೇ ಆಹಾರವಿರಲಿ ಕಲಬೆರಿಕೆ ಕೆಲಸ ಮಾಡಬೇಡಿ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಮಾತ್ರವಲ್ಲ, ಧರ್ಮವೂ ಹೌದು.
Zabiulla Khan
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.