ಕೋಲಾರ (ವಿಶ್ವಕನ್ನಡಿಗ ನ್ಯೂಸ್):- ವಕೀಲರು ಹಾಗೂ ಸಾಹಿತಿಗಳೂ ಆದ ಬಿ.ಆರ್ . ರವೀಂದ್ರ ( ರಾಣಾ ) ರವರಿಗೆ ತುಮಕೂರಿನಲ್ಲಿ ನಡೆಯಲಿರುವ ಪ್ರಥಮ ರಾಜ್ಯ ಗುರುಕುಲ ಸಾಹಿತ್ಯ ಸಮ್ಮೇಳನದಲ್ಲಿ ಬಿ.ಆರ್ . ರವೀಂದ್ರ ರವರು ರಚನೆ ಮಾಡಿರುವ ಯಕ್ಷಪ್ರಸಂಗ ನಾಟಕಕ್ಕೆ ಗುರುಕುಲ ಸಾಹಿತ್ಯ ಶರಭ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಗುರುಕುಲ ಸಾಹಿತ್ಯ ಪ್ರತಿಷ್ಠಾನ ( ರಿ ) ದ ರಾಜ್ಯಾಧ್ಯಕ್ಷರಾದ ಹುಲಿಯೂರು ದುರ್ಗ ಲಕ್ಷ್ಮಿನಾರಾಯಣ ಹಾಗೂ ಕಾರ್ಯಾಧ್ಯಕ್ಷರಾದ ಶಿವರಾಮೇಗೌಡ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿ.ಆರ್.ರವೀಂದ್ರ ರವರು ಹಲವಾರು ವರ್ಷಗಳಿಂದ ರಾಣಾ ಕಾವ್ಯನಾಮದಿಂದ ಹಲವಾರು ಕಥೆ , ಕವನ , ಲೇಖನ , ಹನಿಗವನ , ಚುಟುಕು ಗಝಲ್ ಗಳನ್ನು ರಚನೆ ಮಾಡಿದ್ದು , ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ . ಇವರ ಸಾಹಿತ್ಯ ಕೃಷಿಯನ್ನು ಗಮನಿಸಿ , ಇವರ ಎರಡನೆಯ ಪ್ರಕಟಿತ ಕೃತಿಯಾದ ಯಕ್ಷಪ್ರಸಂಗ ನಾಟಕಕ್ಕೆ ಗುರುಕುಲ ಸಾಹಿತ್ಯ ಶರಭ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.