ಕುಂದಾಪುರ :(ವಿಶ್ವ ಕನ್ನಡಿಗ ನ್ಯೂಸ್ ): ಸತತ ಐದು ಬಾರಿ ಕುಂದಾಪುರ ಶಾಸಕರಾಗಿ ಗೆದ್ದ ,ನೇರ ನಿಸ್ವಾರ್ಥ ರಾಜಕಾರಣಿ ,ಕರಾವಳಿಯ ವಾಜಪೇಯಿ ಎಂದೇ ಜನಜನಿತರಾದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಯವರಿಗೆ ಈ ಬಾರಿಯಾದರೂ ಸಂಪುಟದಲ್ಲಿ ಸಚಿವ ಸ್ಥಾನ ಸಿಗುತ್ತಾ ಎಂಬ ಪ್ರಶ್ನೆ ಕ್ಷೇತ್ರದಾದ್ಯಂತ ಹರಿದಾಡುತ್ತಿದ್ದೂ ,ಈ ಬಾರಿ ಸಚಿವ ಸ್ಥಾನ ಸಿಗಲೇ ಬೇಕು ಎಂದು ಸಾಮಾಜಿಕ ತಾಣದಲ್ಲಿ ಹಾಲಾಡಿ ಅಭಿಮಾನಿಗಳು ಅಭಿಯಾನ ಆರಂಭಸಿದ್ದಾರೆಬೆಳವಣಿಗೆಗೆ ಪ್ರತಿಕ್ರಿಯೆಸಿದ ಹಾಲಾಡಿ “ನನಗೆ ಸಚಿವ ಸ್ಥಾನ ಕೊಡಿ ಎಂದು ಯಾವತ್ತೂ ನಾಯಕರ ಮುಂದೆ ನಾನು ಬೇಡಿಕೆ ಇಟ್ಟವನಲ್ಲ. ಸಚಿವ ಸ್ಥಾನ ಕೇಳಿ ಪಡೆಯುವುದು ಪ್ರಜಾಪ್ರಭುತ್ವ ವ್ಯವಸ್ಥೆ ಅಲ್ಲ. ಸಚಿವ ಸ್ಥಾನಕ್ಕಾಗಿ ಯಾರ ಕಾಲಿಗೂ ಬೀಳೋದಿಲ್ಲ. ರಾಜಕೀಯದಲ್ಲಿ ಸಮತೋಲನ ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ. ನಾನು ಸಚಿವ ಸ್ಥಾನವನ್ನು ಯಾರ ಬಳಿಯೂ ಕೇಳಲು ಹೋಗುವುದಿಲ್ಲ. ರಾಜಕೀಯ ಲಾಬಿ ಜಾತಿವಾದಿತನ ನಾನು ಮಾಡುವುದಿಲ್ಲ. ಯಾರ ಕಾಲಿಗೆ ಬಿದ್ದು ನಾನು ಕೆಲಸ ತೆಗೆದುಕೊಳ್ಳುವುದಿಲ್ಲ. ಕೆಲಸ ಕೊಟ್ಟರೆ ನಾನು ಅದನ್ನು ನಿಭಾಯಿಸುತ್ತೇನೆ.”ಎಂದು ಹೇಳಿದ್ದಾರೆ .ಒಟ್ಟಾರೆ ಈ ಬಾರಿ ಮಂತ್ರಿಯಾಗಲಿ ಎಂಬ ಆಶಯ ಕ್ಷೇತ್ರ ಮತದಾರರದ್ದು . ಯಾವುದಕ್ಕೂ ಕಾದು ನೋಡಬೇಕಾಗಿದೆ .
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.