ಮಾಲೂರು (ವಿಶ್ವ ಕನ್ನಡಿಗ ನ್ಯೂಸ್):ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿಯ ಕಾರಂಗುಟ್ಟೆ ಗ್ರಾಮದಲ್ಲಿ ನೂತನ ಹೈ ಮಾಸ್ಟ ಲೈಟ್ ಅಳವಡಿಸಲು ಶಾಸಕರಾದ ಕೆ.ವೈ.ನಂಜೇಗೌಡ ರವರು ಇಂದು ಗುದ್ದಲಿ ಪೂಜೆ ನೆರೆವೇರಿಸಿದರು.
ಪೂಜೆ ನೆರೆವೇರಿಸಿದ ನಂತರ ಮಾತನಾಡಿದ ಮಾಲೂರು ಶಾಸಕ ಕೆ.ವೈ. ನಂಜೇಗೌಡ ರವರು ಮಾತನಾಡುತ್ತಾ “ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಮೂಲ ಆಶಯದಿಂದ ಕೆಲಸ ಮಾಡುತ್ತಿದ್ದು ಎಲ್ಲಾ ಜನತೆ ನಮ್ಮೊಂದಿಗೆ ಕೈ ಜೋಡಿಸುವ ಮೂಲಕ ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗಾಗಿ ಸಹಕಾರ ನೀಡಬೇಕು. ಇಂದು ಕಾರಂಗುಟ್ಟೆ ಗ್ರಾಮದಲ್ಲಿ ಹೈ ಮಾಸ್ಟ್ ದೀಪ ಆಳವಡಿಸುವ ಕಾರ್ಯದ ಗುದ್ದಲಿ ಪೂಜೆ ನೆರೆವೇರಿಸುವ ಮೂಲಕ ಗ್ರಾಮೀಣ ಪ್ರದೇಶಕ್ಕೆ ನನ್ನ ಒತ್ತು” ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಹೆಚ್.ಹನುಮಂತಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಗರ ಪ್ರಕಾಶ್, ಎ.ಪಿ.ಎಂ.ಸಿ ಸದಸ್ಯರಾದ ವೆಂಕಟೇಶ್ ಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ಉಮಾದೇವಿ ಮಾರ್ಕೊಂಡಪ್ಪ, ಚಂದ್ರು, ಮೂರ್ತಿ, ಸಂತೋಷ್ ಹಾಗೂ ಮುಖಂಡರಾದ ಎ.ಬಿ.ಪ್ರಸನ್ನ ಕುಮಾರ್, ವೆಂಕಟೇಶ್ , ಗ್ರಾಮದ ಮುಖಂಡರು ಹಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.