(ವಿಶ್ವ ಕನ್ನಡಿಗ ನ್ಯೂಸ್) : ಜಮ್ಮು ಮತ್ತು ಕಾಶ್ಮೀರದ ಯುವ ವೇಗಿ ಉಮ್ರಾನ್ ಮಲಿಕ್ ಐಸಿಸಿ ಟಿ 20 ವಿಶ್ವಕಪ್ 2021 ಕ್ಕೆ ಭಾರತ ತಂಡಕ್ಕೆ ನೆಟ್ ಬೌಲರ್ ಆಗಿ ಸೇರಿಕೊಳ್ಳಲಿದ್ದಾರೆ. ಯುಎಇಯಿಂದ ಹಿಂದಿರುಗದಂತೆ ಈ ಯುವ ವೇಗದ ಬೌಲರ್ ಗೆ ಸೂಚಿಸಲಾಗಿದೆ ಎಂದು ಸನ್ ರೈಸರ್ಸ್ ಹೈದರಾಬಾದ್ ತಂಡವು ತಿಳಿಸಿದೆ.
ಉಮ್ರಾನ್ ಮಲಿಕ್ ಅವರು ಸನ್ ರೈಸರ್ಸ್ ಹೈದರಾಬಾದ್ ಗಾಗಿ ಆಡಿದ ಮೂರು ಪಂದ್ಯಗಳಲ್ಲಿ ಸತತವಾಗಿ 150 ಕಿಲೋಮೀಟರ್ ವೇಗದಲ್ಲಿ ಬೌಲ್ ಮಾಡಿದ್ದರು. ಸನ್ ರೈಸರ್ಸ್ ಹೈದರಾಬಾದ್ ನ ಐಪಿಎಲ್ ಅಭಿಯಾನವು ಅಕ್ಟೋಬರ್ 8 ರಂದು ಕೊನೆಗೊಂಡ ಬಳಿಕ ಬಿಸಿಸಿಐ ಮಲಿಕ್ ಗೆ ನೆಟ್ ಬೌಲರ್ ಆಗಿ ಸೇರಿಕೊಳ್ಳುವಂತೆ ತಿಳಿಸಿದೆ.
ಗ್ರೂಪ್ 2 ರಲ್ಲಿ ಸ್ಥಾನ ಪಡೆದಿರುವ ಭಾರತ, ಅಕ್ಟೋಬರ್ 24 ರಂದು ಪಾಕಿಸ್ತಾನದ ವಿರುದ್ಧ ಟಿ 20 ವಿಶ್ವಕಪ್ ನ ಮೊದಲ ಪಂದ್ಯ ಆಡಲಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.