ಬಿ.ಸಿ.ರೋಡ್(www.vknews.in):ಇಲ್ಲಿಗೆ ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡಂಗೆಯಲ್ಲಿ ಸೈಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿಗಳಾದ ಲೆಸ್ವಿನ್ ಪಿಂಟೊ,ಲೆನ್ಸನ್ ಸಾಲ್ಡಾನಾ,ರೊನ್ಸಾನ್ ಮೆಂಡೋನ್ಸಾ ಹಾಗು ಅನ್ವಿತ್ ರಾಜ್ ಜೈನ್ ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡಂಗೆಯ ತರಗತಿ ಕೊಠಡಿಗೆ ಸುಣ್ಣ ಮತ್ತು ಬಣ್ಣ ಬಳಿದು ಕಲಿಕೆಗೆ ಪೂರಕವಾದ ಕೊಠಡಿಯಾಗಿ ಮಾರ್ಪಡಿಸಿದರು. ಅಷ್ಟೇ ಅಲ್ಲದೆ ಈ ನಾಲ್ವರು ವಿದ್ಯಾರ್ಥಿಗಳು ಶಾಲಾ ಆವರಣವನ್ನು ಸ್ವಚ್ಛಗೊಳಿಸಿದರು.ಬೆಳಿಗ್ಗೆ 8:00 ಗಂಟೆಯಿಂದ ಸಂಜೆ 5:00 ಗಂಟೆ ತನಕ ಉಚಿತವಾಗಿ ಕೆಲಸ ಮಾಡುವುದರ ಮೂಲಕ ತಮ್ಮ ಅಮೂಲ್ಯವಾದ ಸಮಯವನ್ನು ಇಲ್ಲಿ ವಿನಿಯೋಗಿಸಿದರು. ಶ್ರೀಯುತ ನೊವೆಲ್ ಪಿಂಟೊರವರು ಈ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.ಶಾಲಾಭಿವೃದ್ದಿ ಸಮಿತಿ ಕೊಡಂಗೆ ಅಧ್ಯಕ್ಷರು ಮತ್ತು ಸದಸ್ಯರು,ಶಾಲೆಯ ಮುಖ್ಯ ಶಿಕ್ಷಕರು ಹಾಗು ಅಧ್ಯಾಪಕ ವೃಂದ ಮತ್ತು ಪರ್ಲಿಯ ಎಜುಕೇಶನಲ್ ಟ್ರಸ್ಟ್(ರಿ)ನ ಸದಸ್ಯರುಗಳು ಈ ವಿದ್ಯಾರ್ಥಿಗಳ ಕೆಲಸ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಧನ್ಯವಾದ ಸಮರ್ಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.