ಮಾಲೂರು (ವಿಶ್ವ ಕನ್ನಡಿಗ ನ್ಯೂಸ್):
ಸಂಜಿವೀನಿ ಚಾರಿಟಬಲ್ ಟ್ರಸ್ಟ್, ಬಿಜೆಪಿ ರಾಜ್ಯ ಫಲಾನುಭಾವಿಗಳ ಪ್ರಕೋಷ್ಟದ ರಾಜ್ಯ ಸದಸ್ಯರು, ಹಾಗೂ ಸಮಾಜ ಸೇವಕರಾದ ಹೂಡಿ ವಿಜಯ್ ಕುಮಾರ್ ರವರ ಸಾರಥ್ಯದಲ್ಲಿ ಶುದ್ದ ಕುಡಿಯುವ ನೀರು ಹಾಗೂ ಕ್ಯಾನ್ ಗಳ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಕೂಗಿಟಿಗಾನಹಳ್ಳಿ ಗ್ರಾಮದಿಂದ ಪ್ರಾರಂಭ ಮಾಡಿದ ಹೂಡಿ ವಿಜಯ್ ಕುಮಾರ್ ರವರು ಮಾತನಾಡುತ್ತಾ “ಗ್ರಾಮೀಣ ಪ್ರದೇಶದಲ್ಲಿನ ಜನರಿಗೆ ಶುದ್ದ ಕುಡಿಯುವ ನೀರು, ಕ್ಯಾನ್ ಗಳನ್ನು ವಿತರಣೆ ಮಾಡುವ ಮೂಲಕ ಹಳ್ಳಿ ಜನರಿಗೆ ಉಪಯುಕ್ತತೆಯ ಕಾರ್ಯವನ್ನು ಮಾಡುತ್ತಿದ್ದು, ಗ್ರಾಮೀಣ ಜನರ ಜೀವನಾಡಿಯಾಗಿ ಸದಾ ಸೇವೆ ಮಾಡುವ ಹಾದಿಯಲ್ಲಿ ಅವರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಜನಮುಖಿ ಕೆಲಸ ಮಾಡುವ ಮೂಲಕ ಅವರ ಭಾವನೆಗಳಿಗೆ ಸ್ಪಂದಿಸುವುದೇ ನಮ್ಮ ಮೂಲ ಆಶಯ” ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ಹನುಮಪ್ಪ ರವರು ಮಾತನಾಡಿ “ಗ್ರಾಮೀಣ ಪ್ರದೇಶದ ಜನರ ಮೂಲ ಸಮಸೈಗಳಿಗೆ ದನಿಯಾಗುವ ಮೂಲಕ ಬಿಜೆಪಿ ಮುಖಂಡ ಹೂಡಿ ವಿಜಯ್ ಕುಮಾರ್ ಸೇವೆ ಮಾಡುತ್ತಿದ್ದು ಈ ಬಾರಿ ಬಿಜೆಪಿ ಪಕ್ಷ ಬೆಂಬಲಿಸಿ ಅವರ ಕೈ ಬಲಪಡಿಸುವ ಮೂಲಕ ಜನ” ಎಂದರು.
ಬಿಜೆಪಿ ಮುಖಂಡ ಆರ್.ಪ್ರಭಾಕರ್ ಮಾತನಾಡಿ “ಜನ ಸಂಪರ್ಕದ ಮೂಲಕ ಹಳ್ಳಿ ಜನರಿಗೆ ಸದಾ ಸ್ಪಂದನೆ, ಮೂಲಭೂತ ಸೌಕರ್ಯಗಳ ನೀಡಿಕೆ ಬಹಳ ಪ್ರಮುಖ ಆ ಹಾದಿಯಲ್ಲಿ ಉತ್ತಮ ಸಮಾಜ ಸೇವೆ ಮಾಡುತ್ತಿರುವ ಸಮಾಜ ಸೇವಕ ಹೂಡಿ ವಿಜಯ್ ಕುಮಾರ್ ರವರನ್ನು ಬೆಂಬಲಿಸಿ, ಇಂದಿನ ಶುದ್ದ ಕುಡಿಯುವ ನೀತು ಹಾಗೂ ಕ್ಯಾನ್ ಗಳ ಜೊತೆಗೆ ಇನ್ನೂ ಉತ್ತಮ ಸೇವೆ ಮಾಡುವ ಗುರಿ ಹೊಂದಿದ್ದರೆ” ಎಂದರು.
ಹಿರಿಯ ಬಿಜೆಪಿ ಮುಖಂಡರಾದ ಬಿ.ವಿ.ರಾಜಾರಾಮ್ ರವರು ಮಾತನಾಡಿ “ಮೋದಿಜೀ ರವರ ಆಶಯದಂತೆ ಬಿಜೆಪಿ ನಡಿಗೆ ಹಳ್ಳಿಯ ಕಡೆಗೆ ಎಂಬ ಘೋಷವಾಕ್ಯದ ಮೂಲಕ ನಮ್ಮ ಕೆಲಸ ಮಾಡುತ್ತಿರುವುದು ಬಹಳ ಅಭಿನಂದನೀಯವಾದ ವಿಚಾರ, ಜನರ ಸಮಸೈಗಳಿಗೆ ಸ್ಪಂದಿಸುವುದೇ ನಮ್ಮ ಪ್ರಮುಖ ಗುರಿ” ಎಂದರು.
ಕಾರ್ಯಕ್ರಮದಲ್ಲಿ ಬಿ.ಜೆ.ಪಿ ಹಿರಿಯ ಮುಖಂಡರಾದ ಹನುಮಪ್ಪ, ರಾಜಾರಾಮ್, ಸುಬ್ರಮಣ್ಯರೆಡ್ಡಿ, ಹುಣಸಿಕೋಟೆ ಸೋಣ್ಣಪ್ಪ, ಕೆ.ಜಿ.ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಅರುಣಶ್ರೀನಿವಾಸ್,ನೊಟವೆ ವೆಂಕಟೇಶ್ ಗೌಡ, ಮಾಜಿ ಬಿಜೆಪಿ ಅಧ್ಯಕ್ಷ ಬಿ.ಆರ್. ವೆಂಕಟೇಶ್, ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಅಮರಾವತಿ, ಮಾಜಿ ಪುರಸಭಾ ಸದಸ್ಯ ಶ್ರೀವಳ್ಳಿ, ಶ್ರೀಮತಿ ಸುಮ, ಹರೀಶ್ ಗೌಡ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾದ ರಾಮಸ್ವಾಮಿರೆಡ್ಡಿ, ಮುಖಂಡರಾದ ಲಗುಮಯ್ಯ ನಾಯಕ್, ಹುಲಿಧೇನಹಳ್ಳಿ ಗೋಪಾಲ್, ಗುಟ್ಲಪ್ಪ ನಾಯಕ್, ಡಿ.ಕೆ.ಗೋಪಾಲ್, ಕೃಷ್ಣಕಾಂತ್, ದೊಡ್ಡಿ ರಾಜಪ್ಪ, ಸಂಜಿವೀನಿ ಚಾರಿಟಬಲ್ ಟ್ರಸ್ಟ್ ನ ವೆಂಕಟೇಶ್, ವಿನೋದ್, ಬಿ.ಜೆ.ಪಿ ಮುಖಂಡರು, ಹಾಗೂ ಊರಿನ ಗ್ರಾಮಸ್ಥರು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.