ತುಂಬೆ(ವಿಶ್ವಕನ್ನಡಿಗ ನ್ಯೂಸ್): ಇತ್ತೀಚಿಗೆ ಬೆಂಗಳೂರಿನಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಸ್ವೀಕರಿಸಿದ ಸಮಾಜ ಸೇವಕಿ, ಬಡವರ ಬಂದು ‘ ಲಯನ್ಸ್ ಡಿ ಸಿ ಡಾ ಸುಮತಿ ಎಸ್ ಹೆಗ್ಡೆ” ಮತ್ತು ಪ್ರಶಸ್ತಿ ಪುರಸ್ಕ್ರತ ಪತ್ರಕರ್ತ ಇಂತಿಯಾಜ್ ಶಾ ತುಂಬೆ ರವರಿಗೆ ತುಂಬೆ ಫ್ರೆಂಡ್ಸ್ ಸರ್ಕಲ್ ವತಿಯಿಂದ ಗೌರವ ಅಭಿನಂದನಾ ಕಾರ್ಯಕ್ರಮ ತುಂಬೆ ಜಂಕ್ಷನ್ ನಲ್ಲಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ತುಂಬೆ ಗ್ರಾಮ ಪಂಚಾಯತ ಅಧ್ಯಕ್ಷರಾದ ಪ್ರವೀಣ್ ಬೊಳ್ಳಾರಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಇಶಾಕ್ ತುಂಬೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೊಯಲ್ ಗ್ರೂಪ್ ಬೆಂಗಳೂರು ಮಾಲಕರಾದ ಅದಂ ಸಾಲಂ ಉಚ್ಚಿಲ, ಸದಾಶಿವ ಹೆಗ್ಡೆ ಮಂಗಳೂರು,ತುಂಬೆ ಗ್ರಾಮ ಪಂಚಾಯತ್ ಸದಸ್ಯರುಗಳಾದ ಝಹೂರು ತುಂಬೆ ಅಬ್ದುಲ್ ಅಝೀಝ್, ಜೆಡಿಎಸ್ ಯುವ ನಾಯಕ ಮುಹಮ್ಮದ್ ಅಲ್ತಾಫ್ ತುಂಬೆ, ಮುದಸ್ಸರ್ ‘ ಎಸ್ ಎಸ್ ಎಫ್ ತುಂಬೆ ವಲಯ ಕಾರ್ಯದರ್ಶಿ ಶಾಕಿರ್ ಬಂಟ್ವಾಳ ಯುವ ಜೆಡಿಎಸ್ ಅಧ್ಯಕ್ಷ ಸವಾಜ್ ಬಂಟ್ವಾಳ ಉಪಸ್ಥಿರಿದ್ದರು ಕಾರ್ಯಕ್ರಮದಲ್ಲಿ ಹರ್ಷಿತಾ ಸ್ವಾಗತಿಸಿ ಪ್ರಿಯಾ ಧನ್ಯವಾದ ಅರ್ಪಿಸಿದರು ಚಂದ್ರಶೇಖರ್ ಮಂಗಳಾದೇವಿ ಕಾರ್ಯಕ್ರಮ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.