(www.vknews.com) ; ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಬಂದಿದೆ. ಅಭಿನಂದನೆಗಳು.
ಹಾಜಬ್ಬರಿಗೆ ಸಿಕ್ಕಿದ ಪದ್ಮಶ್ರೀ ನಮಗೆ ಕಲಿಸುವ ಪಾಠಗಳು
(ಹೃದಯದ ಶ್ರೀಮಂತಿಕೆಯೇ ಶ್ರೇಷ್ಠ ಶ್ರೀಮಂತಿಕೆ ಎಂಬ ಪ್ರವಾದಿವರ್ಯರ (ಸ) ವಚನವನ್ನು ಹಾಜಬ್ಬರು ನಿಜವಾಗಿಸಿದ್ದಾರೆ)
(ಎರಡಕ್ಷರ ಮಾತ್ರ ಗೊತ್ತಿರುವ ಹರೇಕಳ ಹಾಜಬ್ಬರು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳ ಕೈಯಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು)
(ಮಧ್ಯಾಹ್ನ ಊಟವೇ ಮಾಡದೆ ತನ್ನ ಹೊಟ್ಟೆಯನ್ನು ಕಟ್ಟಿ ಊರವರ ಮಕ್ಕಳಿಗೆ ಶಾಲೆ ಕಟ್ಟಿದ ಪುಣ್ಯಾತ್ಮ ಹಾಜಬ್ಬ)
(ಅಂದು ಶಾಲೆಗಾಗಿ ಕಚೇರಿಯಿಂದ ಕಚೇರಿ, ದಾನಿಗಳ ಮನೆಬಾಗಿಲಿಗೆ ಹೋಗುವಾಗ ಹಾಜಬ್ಬರು ಏಕಾಂಗಿ. ಇಂದು ಹಾಜಬ್ಬರ ಜೊತೆ ಇರುವುದು, ಸೆಲ್ಫಿ ತೆಗೆಯುವುದು ನಮಗೆ ಗೌರವ)
(ಎರಡಕ್ಷರ ಮಾತ್ರ ಗೊತ್ತಿರುವ ಹಾಜಬ್ಬರ ಬಗ್ಗೆ 3 ಯುನಿವರ್ಸಿಟಿಯ ಪಠ್ಯಪುಸ್ತಕದಲ್ಲಿ ಪಾಠವಿದೆ.)
(ಸಹಾಯಕ್ಕೆ ಕೇಳಲು ಹಾಜಬ್ಬರು ಮನೆಗೆ ಹೋದಾಗ ನಾಯಿ ಬಿಟ್ಟು ಓಡಿಸಿದವರು ಇದ್ದಾರೆ).
(ಪ್ರಶಸ್ತಿ ಪ್ರದಾನದ ಬಗ್ಗೆ ಘನತೆವೆತ್ತ ರಾಷ್ಟ್ರಪತಿಗಳ ಟ್ವೀಟಿಗೆ ಅತಿ ಹೆಚ್ಚು ಲೈಕ್ ಪಡೆದವರು ಹರೇಕಳ ಹಾಜಬ್ಬರು)
(ಹರೇಕಳ ಹಾಜಬ್ಬ ಅಂದರೆ ಯಾರು ಎಂದು ಅರಿಯದ ಅಂದು ಅವರು ಹೇಗಿದ್ದಾರೋ,ಇಂದೂ ಹಾಗೆಯೇ ಇದ್ದಾರೆ. ಅವರ ವ್ಯಕ್ತಿತ್ವ, ಉಡುಪು, ಮಾತು, ವಿನಮ್ರತೆ, ಸರಳತೆ ಮತ್ತು ಜೀವನ ಶೈಲಿಯಲ್ಲಿ ಒಂದಿಷ್ಟು ಬದಲಾವಣೆ ಇಲ್ಲ)
(ಹಾಜಬ್ಬರಿಗೂ ತನ್ನ ಮಗಳಿಗೆ ಮದುವೆಯಾಗಿಲ್ಲ ಎಂಬ ಚಿಂತೆ ಒಳಗೊಳಗೆ ಸುಡುತ್ತಿದೆ).
(ಹಾಜಬ್ಬರಿಗೆ ಅಂದಿನಿಂದ ಇಂದಿನವರೆಗೆ ಮಾಡಿದ ಸಹಾಯ ಎಷ್ಟೆ ಚಿಕ್ಕದಾಗಲಿ, ದೊಡ್ಡದಾಗಲಿ ಅವರನ್ನು ಸದಾ ನೆನಪಿಸುತ್ತಾರೆ)
(ಹಾಜಬ್ಬರಿಗೆ ಜಾಗತಿಕ ಮನ್ನಣೆಯ ಹಿಂದೆ ಮಾಧ್ಯಮದ ಪ್ರತಿನಿಧಿಗಳು ನೀಡಿದ ಸಹಕಾರ ಅಪೂರ್ವವಾದುದು)
(ಹಾಜಬ್ಬರನ್ನು ಜಾತಿ, ಮತ, ಧರ್ಮ ಭೇದವಿಲ್ಲದೆ ಸರ್ವಧರ್ಮೀಯರು ಇಷ್ಟಪಡುತ್ತಾರೆ ಮತ್ತು ಗೌರವಿಸುತ್ತಾರೆ).
ಕೊನೆಯದಾಗಿಹಾಜಬ್ಬರಿಗೆ ಈ ದೇಶದ ನಾಲ್ಕನೇ ಅತ್ಯುನ್ನತ ಪ್ರಶಸ್ತಿ ಪದ್ಮಶ್ರೀ ಬಂದಿದೆ. ಇನ್ನೂ ಅವರಿಗೆ ಸಾರ್ವಜನಿಕ ಸನ್ಮಾನಗಳು ಸಾಕು ಎಂದು ನನ್ನ ಅನಿಸಿಕೆ. ಅವರ ಮಗಳ ಮದುವೆಯ ಕಾರ್ಯಕ್ಕೆ ನಾವೆಲ್ಲ ಪ್ರಯತ್ನಿಸೋಣ. ಅದುವೇ ನಾವು ಅವರಿಗೆ ಮಾಡುವ ಸನ್ಮಾನ.
ನೂರಾರು ಹಾಜಬ್ಬರು ನಮ್ಮ ನಡುವೆ ಎಲೆಮರೆ ಕಾಯಿಯಂತೆ ಇದ್ದಾರೆ. ಅವರನ್ನು ಹುಡುಕಿ ಗುರುತಿಸುವ ಕೆಲಸವಾಗಬೇಕು. ಅಂಥವರನ್ನು ಸನ್ಮಾನಿಸಬೇಕು. ಬೆಳೆಸಬೇಕು. ಅರಳಿಸಬೇಕು.
Construction is better than felicitation
ಸನ್ಮಾನಕ್ಕಿಂತ ನಿರ್ಮಾಣ ಉತ್ತಮವಾದುದು.
ಹಾಜಬ್ಬರ ಬಲುದಿನದ ಪ್ರಾರ್ಥನೆ ನೆರವೇರಲಿ.ನಮ್ಮ ನಡುವೆ ನೂರಾರು ಹಾಜಬ್ಬರು ಹುಟ್ಟಿ ಬರಲಿ.
✒️ ರಫೀಕ್ ಮಾಸ್ಟರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.