ಕೋಲಾರ (ವಿಶ್ವಕನ್ನಡಿಗ ನ್ಯೂಸ್): ಸಾರ್ವಜನಿಕ ಶಿಕ್ಷಣ ಇಲಾಖೆ ನೂತನ ಉಪನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ರೇವಣಸಿದ್ದಪ್ಪ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ವೆಂಕಟರಾಮರೆಡ್ಡಿ ಅವರನ್ನು ಜಿಲ್ಲಾ ಪೌಢಶಾಲಾ ಮುಖ್ಯಶಿಕ್ಷಕರ ಸಂಘದಿಂದ ಆತ್ಮೀಯವಾಗಿ ಸನ್ಮಾನಿಸಿ ಸ್ವಾಗತಿಸಲಾಯಿತು.
ಸಂಗದ ಅಧ್ಯಕ್ಷ ರುದ್ರಪ್ಪ ಮಾತನಾಡಿ , ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ತಮ್ಮ ಮಾರ್ಗದರ್ಶನದಲ್ಲಿ ನಾವು ನಡೆಯಲಿದ್ದು , ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆಗೆ ಹೊಸ ಆಯಾಮ ಸಿಗಲಿ ಎಂದು ಆಶಿಸಿದರು .
ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ , ಮುಖ್ಯಶಿಕ್ಷಕರ ಜಿಲ್ಲಾ ಸಂಘದ ಕಾರ್ಯಾಧ್ಯಕ್ಷ ಶಂಕರೇಗೌಡ , ಕಾರ್ಯದರ್ಶಿ ರವಿ , ತಾಲ್ಲೂಕು ಸಂಘದ ಅಧ್ಯಕ್ಷ ದಾಸಪ್ಪ , ಉಪಾಧ್ಯಕ್ಷ ಗಾಯಿತಮ್ಮ , ಖಜಾಂಚಿ ವಿಜಯಾನಂದ , ಮಹದೇವ ನಾಯಕ್ ಮುಂತಾದವರು ಹಾಜರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.