ಜೆದ್ದಾ(www.vknews.in): ವಾಟ್ಸಾಪ್ ಗ್ರೂಪ್ನಿಂದ ಸದಸ್ಯರನ್ನು ತೆಗೆದುಹಾಕಿದರೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು ಎಂದು ಸೌದಿ ಕಾನೂನು ತಜ್ಞ ಅಹ್ಮದ್ ಅಜಬ್ ಎಚ್ಚರಿಸಿದ್ದಾರೆ.
ಗ್ರೂಪ್ ನಿಂದ ಹೊರಗಿಡುವುದರಿಂದ ತನಗೆ ತೊಂದರೆಯಾಗಿದೆ ಎಂದು ರಿಮೂವ್ ಮಾಡಲ್ಪಟ್ಟ ಸದಸ್ಯ ದೂರು ನೀಡಿದರೆ ಮಾತ್ರ ಅಂತಹ ಶಿಕ್ಷೆಗೆ ಇಲಾಖೆ ಅವಕಾಶ ಕಲ್ಪಿಸುತ್ತದೆ.
ಅಂತಹ ದೂರು ದಾಖಲಿಸಿ ಅದು ಸಮರ್ಥನೀಯವೆಂದು ಕಂಡುಬಂದರೆ, ಆ ಸದಸ್ಯನನ್ನು ರಿಮೂವ್ ಮಾಡಿದ ವ್ಯಕ್ತಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ.ವರೆಗೆ ದಂಡ ವಿಧಿಸಬಹುದು.
ಅಂತಹ ವ್ಯಕ್ತಿಯನ್ನು ಹೊರಗಿಡುವುದು ಸಾರ್ವಜನಿಕವಾಗಿ ಅವನನ್ನು ಅವಮಾನಿಸಿ ಅವರ ಸ್ಥಾನವನ್ನು ಕೀಳಾಗಿಸುವುದಕ್ಕೆ ಸಮಾನವಾಗಿದೆ ಎಂದು ಕಾನೂನಿನನಲ್ಲಿ ಉಲ್ಲೇಖಿಸಲಾಗಿದೆ.
ಮಾಹಿತಿ ತಂತ್ರಜ್ಞಾನದ ಮೂಲಕ ಇತರರನ್ನು ಅವಮಾನಿಸುವುದು ಅಥವಾ ಕಿರುಕುಳ ನೀಡುವುದನ್ನು ತಡೆಯಲು ಪ್ರಯತ್ನಿಸುವ ಸೈಬರ್ ಅಪರಾಧ ತಡೆ ಕಾಯಿದೆಯ ಆರ್ಟಿಕಲ್ 3 ಪ್ಯಾರಾಗ್ರಾಫ್ 5 ರ ಅಡಿಯಲ್ಲಿ ಇದು ಶಿಕ್ಷಾರ್ಹವಾಗಿದೆ.
ಒಂದು ವೇಳೆ ಹೊರಗಿಡಬೇಕಾದ ಪರಿಸ್ಥಿತಿ ಬಂದರೆ ಅದನ್ನು ರಾಜಿ ಸಂಧಾನದ ಮೂಲಕ ನಿಭಾಯಿಸಬೇಕು ಎಂದೂ ಅಹಮದ್ ಅಜಬ್ ಹೇಳಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.