ಶ್ರೀನಿವಾಸಪುರ (ವಿಶ್ವಕನ್ನಡಿಗ ನ್ಯೂಸ್) ಪಟ್ಟಣದ ಹೊರವಲಯದಲ್ಲಿನ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದ ಟೊಮೆಟೊ ಮಂಡಿಯೊಂದರಲ್ಲಿ 10 ಟೊಮೆಟೊ ಬಾಕ್ ಕಳವು ಮಾಡಿರುವ ಘಟನೆ ನಡೆದಿದೆ . ಮಂಡಿಯಲ್ಲಿ ಸುಮಾರು ರೂ 10 ಸಾವಿರ ಮೌಲ್ಯದ 10 ಬಾಕ್ಸ್ ಟೊಮೆಟೊ ಮಾಡಲಾಗಿದೆ.
ಈ ಹಿಂದೆಯೂ ಕಳವು ರಾತ್ರಿ ಹೊತ್ತು ಟೊಮೆಟೊ ಬಾಕ್ಸ್ ಕಳವು ಮಾಡಲಾಗಿತ್ತು . ಕಳ್ಳರನ್ನು ಪತ್ತೆಹಚ್ಚುವ ಉದ್ದೇಶದಿಂದ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು . ಕಳವು ಮಾಡುತ್ತಿರುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಮಂಡಿ ಮಾಲೀಕ ದಿವಾಕರ್ ತಿಳಿಸಿದ್ದಾರೆ.
ಈಗ ಟೊಮೆಟೊಗೆ ದಾಖಲೆ ಬೆಲೆ ಬಂದಿದ್ದು , ಟೊಮೆಟೊ ಕಳವು ಪ್ರಕರಣಗಳು ಹೆಚ್ಚಿವೆ . ಗ್ರಾಮೀಣ ಪ್ರದೇಶದಲ್ಲಿ ಬೆಳೆಯಲಾಗಿರುವ ತೋಟಗಳಲ್ಲೂ ಕಾಯಿ ಕಳವು ಮಾಡಲಾಗುತ್ತಿದೆ. ರೈತರಿಗೆ ಚಳಿಯ ನಡುವೆ ರಾತ್ರಿ ಹೊತ್ತು ತೋಟ ಕಾಯಬೇಕಾದ ಅನಿವಾರ್ಯತೆ ಉಂಟಾಗಿದೆ .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.