ಕೋಲಾರ (ವಿಶ್ವಕನ್ನಡಿಗ ನ್ಯೂಸ್): ಶಿಕ್ಷಣ ತೇರು ನಿರಂತರವಾಗಿ ಸಾಗಲು ಶ್ರಮಿಸುವ ಮೂಲಕ ಜಿಲ್ಲೆಯಲ್ಲಿ ರಾಜ್ಯಕ್ಕೆ ಮಾದರಿಯಾದ ಸುಸಜ್ಜಿತ ಗುರುಭವನ ನಿರ್ಮಾಣಕ್ಕೆ ತಾವೇ ನೇತೃತ್ವ ವಹಿಸುವುದಾಗಿ ವಿಧಾನಪರಿಷತ್ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ಭರವಸೆ ನೀಡಿದರು.
ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಡಾ.ವೈ.ಎ.ಎನ್ ಅಭಿಮಾನಿಗಳ ಬಳಗ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ , ಈ ಸಂಬಂಧ ಮುಂದಿನವಾರವೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಗುರುಭವನ ಹಾಗೂ ನೌಕರರ ಭವನಗಳ ನಿರ್ಮಾಣದ ಸಂಬಂಧ ಚರ್ಚ ನಡೆಸುವುದಾಗಿ ತಿಳಿಸಿದರು.
ಗುರುಭವನ ನಿರ್ಮಾಣ ಹಾಗೂ ನೌಕರರ ಭವನಕ್ಕೆ ಜಮೀನು ಒದಗಿಸುವ ಸಂಬಂಧ ಜಿಲ್ಲಾಧಿಕಾರಿಗಳ ಸ್ಪಂದಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು , ನಿಮಗಾಗಿ ಸ್ಪಂದಿಸುವ ಡಿಸಿ ಇದ್ದಾರೆ , ಈ ಕಾರ್ಯವನ್ನು ನಡೆಸಲು ಇದು ಸಕಾಲವಾಗಿದ್ದು , ತಮ್ಮ ಶಾಸಕರ ನಿಧಿ ಹಾಗೂ ಜಿಲ್ಲೆಯ ಕೈಗಾರಿಕೆಗಳ ಸಿಎಸ್ಆರ್ ನಿಧಿ ಪಡೆಯಲು ಪ್ರಯತ್ನ ನಡೆಸುವುದಾಗಿ ತಿಳಿಸಿದರು.
ನೌಕರರ ಭವನಕ್ಕೆ ಜಮೀನು ಮೀಸಲುನೌಕರರ ಭವನಕ್ಕೆ ಗುರುತಿಸಿ ಪ್ರಸ್ತಾವನೆ ಸಲ್ಲಿಕೆಯಾಗಿರುವ ಸಂಬಂಧಿತ ಜಮೀನು ಮೀಸಲಿಡುವ ಕುರಿತು ಡಿಸಿ ಒಳ್ಳೆಯ ಮನಸ್ಸಿನಿಂದ ಒಪ್ಪಿದ್ದಾರೆ , ಅವರಿಗೆ ಗುರುಭವನ ನಿರ್ಮಿಸುವ ಆಶಯವಿದ್ದು , ಈಗಾಗಲೇ ಗುರುಭವನ ಸಮಿತಿಗಳನ್ನು ರಚಿಸಿದ್ದಾರೆ ಎಂದರು.
ಜಿಲ್ಲೆಗೆ ಶಿಕ್ಷಣ ಪ್ರೇಮಿ , ಭ್ರಷ್ಟಾಚಾರ ರಹಿತ ಪ್ರಾಮಾಣಿಕ ಡಿಡಿಪಿಐ ರೇವಣಸಿದ್ದಪ್ಪ , ರಾಜ್ಯದಲ್ಲೇ ಉತ್ತಮ ಬಿಇಒ ಎಂದು ಪ್ರಶಸ್ತಿ ಗಳಿಸಿರುವ ವೆಂಕಟರಾಮರೆಡ್ಡಿ ಅವರನ್ನು ಇಲ್ಲಿಗೆ ಬರುವಂತೆ ಮಾಡಿದ್ದೇನೆ , ಇದರಿಂದ ಜಿಲ್ಲೆಯಲ್ಲಿ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಚುನಾವಣಾ ನೀತಿ ಸ೦ಹಿತೆ ಅಡ್ಡಿಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ವಿಧಾನಪರಿಷತ್ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿದ್ದು , ಇದಾದ ನಂತರ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಸ್ಪಂದನೆ ನೀಡುವುದಾಗಿ ಭರವಸೆ ನೀಡಿದರು.
ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿಗಳ ಸಮಸ್ಯೆಗೆ ಪರಿಹಾರ ನೀಡಲಾಗಿದೆ , ಸಹಶಿಕ್ಷಕರಿಗೆ ಮುಖ್ಯಶಿಕ್ಷಕರಾಗಿ ಬಡ ನೀಡುವ ಕುರಿತು ೨೦೦ ಮಂದಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು . ವೃತ್ತಿ ಶಿಕ್ಷಕರ ವೇತನ ತಾರತಮ್ಯದ ಕುರಿತು ಮುಂದಿನ ವಾರವೇ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು , ಹೆಲ್ತ್ಕಾರ್ಡ್ , ಕಾಲ್ಪನಿಕ ವೇತನ ಮತ್ತಿತರ ಸಮಸ್ಯೆಗಳ ಕುರಿತು ಕ್ರಮವಹಿಸುವುದಾಗಿ ತಿಳಿಸಿದರು.
ಜಿಲ್ಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ , ಗುರುಭವನ , ಸರ್ಕಾರಿ ನೌಕರರ ಭವನ ನಿರ್ಮಾಣ ಕಾರ್ಯಕ್ಕೆ ತಾವೇ ಮುಂದಾಳತ್ವ ವಹಿಸಿ , ತಮ್ಮ ಶಾಸಕರ ನಿಧಿಯ ಜತೆಗೆ ಕಂಪನಿಗಳಿಂದ ಸಿಎಸ್ಆರ್ ನಿಧಿ ಕೊಡಿಸಲು ಸಭೆ ನಡೆಸಿ ಕ್ರಮವಹಿಸಲು ಮನವಿ ಮಾಡಿ , ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ವೈಎಎನ್ ಅವರ ಕಾರ್ಯಕ್ಕೆ ಧನ್ಯವಾದ ಸಲ್ಲಿಸಿದರು.
ಪ್ರ : ಜಿಲ್ಲಾ ಪಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಪಯ್ಯಗೌಡ , ಮುಂದಿನ ೫೦ ವರ್ಷಗಳ ಭವಿಷ್ಯದ ದೃಷ್ಟಿಯಿಂದ ಸುಂದರ ಮತ್ತು ಸುಸಜ್ಜಿತ ಗುರುಭವನ ನಿರ್ಮಾಣಕ್ಕೆ ಸಹಕಾರ ನೀಡಲು ಮನವಿ ಮಾಡಿದರು.
ಮುಖ್ಯ ಶಿಕ್ಷಕರ ಸಂಘದ ರುದ್ರಪ್ಪ , ಮುಖ್ಯಶಿಕ್ಷಕರಿಗೆ ಎಕ್ಸಗೇಷಿಯಾ ಕೊಡಿಸಿ ಎಂದು ಮನವಿ ಮಾಡಿದರೆ , ನಾಗರಾಜ್ , ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳ ಸಮಸ್ಯೆಯನ್ನು ಗಮನಕ್ಕೆ ತಂದರು.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್ , ನೌಕರರ ಸಂಘದ ಜಂಟಿ ಕಾರ್ಯದರ್ಶಿ ಶ್ರೀನಿವಾಸಲು , ಕಾರ್ಯಕಾರಿ ಸದಸ್ಯ ಬಿ.ಎ.ಕವಿತಾ , ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಮುರಳಿಮೋಹನ್ , ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ್ , ಮಾರ್ಕಂಡೇಯ , ಆಂಜನೇಯ ಶಿಕ್ಷಕರ ಸಮಸ್ಯೆಗಳನ್ನು ಗಮನಕ್ಕೆ ತಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯಶಿಕ್ಷಕ ನರಸಿಂಹಯ್ಯ ಸರ್ಕಾರಿ ವಕೀಲ ಎಂ.ಪಿ.ನಾರಾಯಣಸ್ವಾಮಿ , ಉರ್ದು ಶಿಕ್ಷಕರು ಯೂನುಸ್ ಖಾನ್ ನೂರುದ್ದೀನ್, ವಿಜಯಕುಮಾರ್ , ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಮಂಜುನಾಥ್ , ಶಿಕ್ಷಕರ ಸಂಘದ ವಿವಿಧ ತಾಲ್ಲೂಕು ಅಧ್ಯಕ್ಷರಾದ ರವಿ , ನರಸಿಂಹ , ವಿನೋದ್ಬಾಬು , ಕಾರ್ಯದರ್ಶಿ ಎಸ್.ನಾರಾಯಣಸ್ವಾಮಿ , ಗೌರವಾಧ್ಯಕ್ಷ ಆರ್.ನಾಗರಾಜ್ ಜಿಲ್ಲಾ ಉಪಾಧ್ಯಕ್ಷ ಓಬಳರೆಡ್ಡಿ , ಮುಖ್ಯಶಿಕ್ಷಕರ ತಾಲ್ಲೂಕು ಅಧ್ಯಕ್ಷ ದಾಸಪ್ಪ , ಸಹಶಿಕ್ಷಕರ ಸಂಘದ ಮೋಹನಾಚಾರಿ , ಮುಕುಂದ , ಶರಣಪ್ಪ ,ಬಡ್ತಿ ಶಿಕ್ಷಕರ ಸಂಘದ ನಾರಾಯಣರೆಡ್ಡಿ , ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.