ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಮಂಡಳಿ ಇದರ ನೂತನ ಅಧ್ಯಕ್ಷಕಾಗಿ ಹಿರಿಯ ವಿದ್ವಾಂಸರಾದ ಎನ್ ಕೆ ಎಂ ಶಾಫಿ ಸಅದಿ ಅವರು ಆಯ್ಕೆಯಾಗಿದ್ದಾರೆ.
ಈ ಹಿಂದೆ ಅಧ್ಯಕ್ಷರಾಗಿದ್ದ ಡಾ. ಮುಹಮ್ಮದ್ ಯೂಸುಫ್ ರವರ ಮರಣದಿಂದ ತೆರವಾಗಿದ್ದ ಸ್ಥಾನಕ್ಕೆಇಂದು ಬೆಳಿಗ್ಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆದಿತ್ತು. ಇಬ್ಬರು ನಾಮಪತ್ರ ಸಲ್ಲಿಸಿದ್ದು, ಅಂತಿಮವಾಗಿ ಚುನಾವಣೆಯಲ್ಲಿ ಹೆಚ್ಚು ಮತಗಳಿಂದ ಶಾಫಿ ಸಅದಿ ಯವರು ಆಯ್ಕೆಯಾಗಿದ್ದಾರೆ.
ಶಾಫಿ ಸಅದಿಯವರು ಎರಡು ಬಾರಿ ರಾಜ್ಯ ಎಸ್ಸೆಸ್ಸೆಫ್ ಇದರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು ಹಾಗೂ ರಾಜ್ಯ ವಕ್ಫ್ ಇದರ ಸದಸ್ಯರಾಗಿದ್ದು, ಸದ್ಯ ಇವರು ರಾಜ್ಯ ಮುಸ್ಲಿಮ್ ಜಮಾಅತ್ ಇದರ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.