(www.vknews.com) ; ಧಾರ್ಮಿಕ ,ರಾಜಕೀಯ,ಸಾಮಾಜಿಕ ಹೀಗೆ ಪ್ರತಿಯೊಂದು ಕ್ಷೇತ್ರದ ಸಂಘಟನೆಯನ್ನು ಬಳಸಿಕೊಂಡು ಇಂದು ಅನ್ಯ ದಾರಿಯ ಮೂಲಕವೂ ಲಾಭಿ ನಡೆಸಿಯೂ ಸ್ಥಾನಮಾನ ಗಿಟ್ಟಿಸಿ ಕೊಂಡು ನಂತರ ಸ್ಥಾನಮಾನ ಪಡೆದದ್ದಕ್ಕಾಗಿ ಅಂತವರನ್ನು ಹೊಗಳಿ ಅಟ್ಟಕ್ಕೇರಿಸುವ ಸಂಸ್ಕ್ರತಿ ಜನರೆಡೆಯಲ್ಲಿ ಬೆಳೆದು ಬರುತ್ತಿದ್ದು ಇದು ಒಳ್ಳೆಯ ಬೆಳವಣಿಗೆಯಲ್ಲ. ನಿಜವಾಗಿಯೂ ವ್ಯಕ್ತಿಗಳು ಪಡೆದ ಸ್ಥಾನಮಾನವನ್ನು ಜನರಿಗೆ ಪ್ರಯೋಜನ ಆಗುವ ರೀತಿಯಲ್ಲಿ ಬಳಸಿಕೊಂಡು ಸಾಧನೆಗಳನ್ನು ಮಾಡಿದರೆ ಮಾತ್ರ ಅಂತವರನ್ನು ಪ್ರಶಂಸಿಸುವ ಪರಿಪಾಠ ಬೆಳೆಸಿಕೊಳ್ಳಬೇಕು.ಹಾಗೆ ಮಾಡಿದರೆ ಅದು ಜಗತ್ತಲ್ಲಿ ಇನ್ನಷ್ಟು ಒಳಿತು ಹೆಚ್ಚಲು ಸಹಕಾರಿ ಯಾಗುತ್ತದೆ ಎಂದು ಮುಲ್ಕಿ ಜುಮಾ ಮಸೀದೀಯ ಖತೀಬ್ ಎಸ್ ಬಿ ದಾರಿಮಿ ಜುಮಾ ಭಾಷಣದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ಸ್ಥಾನಮಾನಗಳನ್ನು ಕೇವಲ ಶೋಕಿಗಾಗಿ ಮತ್ತು ಹೆಸರಿಗಾಗಿ ಮಾತ್ರ ಬಳಸಿ ಕೊಂಡರೆ ಅದು ಅಲ್ಲಾಹನ ಬಳಿ ಪ್ರಶ್ನಿಸಲ್ಪಡುತ್ತದೆ. ಅನರ್ಹರಿಗೆ ಸ್ಥಾನ ನೀಡುವುದರಿಂದ ಜಗತ್ತಿನ ಬೆಳವಣಿಗೆ ಕುಂಠಿತ ಗೊಳ್ಳುತ್ತದೆ. ಅರ್ಹರು ಅವಕಾಶ ವಂಚಿತರಾಗಿ ಸಮಾಜಕ್ಕೆ ಅದರಿಂದ ನಷ್ಟಗಳು ಉಂಟಾಗುತ್ತದೆ ಎಂದು ವಿಶ್ಲೇಷಿಸಿದ ಅವರು ಅದೇ ವೇಳೆ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕರ್ತವ್ಯ ಕೂಡಾ ನಮ್ಮ ಮೇಲಿದ್ದು ಅದು ಸ್ವಂತ ಮನೆಮಂದಿಯಿಂದಲೇ ಆರಂಭಗೊಳ್ಳಬೇಕು ಎಂದರು.
ರುಚಿಯಾದ ಅಡಿಗೆ ಮಾಡಿದ ಪತ್ನಿಯನ್ನು ಅದಕ್ಕಾಗಿ ಪ್ರಶಂಸಿದರೆ ಇನ್ನೂ ಹೆಚ್ವು ಸ್ವಾದಿಷ್ಟಕರ ಅಡಿಗೆಯನ್ನು ನಿರೀಕ್ಷಿಸ ಬಹುದು. ಮಕ್ಕಳನ್ನು ಒಳ್ಳೆಯ ಮಾತುಗಳಿಂದ ಪ್ರೋತ್ಸಾಹಿಸಿದರೆ ಆ ಮಕ್ಕಳು ಉತ್ತಮವಾಗಿಯೇ ಬೆಳೆಯುತ್ತಾರೆ. ಹೀಗೇ ತಮ್ಮ ಒಡನಾಡಿಗಳನ್ನು ಎರಡು ಮಾತು ಬಳಸಿ ಉತ್ತಮ ಕಾರ್ಯಕ್ಕಾಗಿ ಪ್ರಶಂಸೆ ಮಾಡಿದರೆ ಅದರಿಂದ ಅದ್ಬುತ ರಿಝಲ್ಟ್ ನಿರೀಕ್ಷಿಸ ಬಹುದಾಗಿದೆಯಲ್ಲದೇ ಅದೆಷ್ಟೋ ಆತ್ಮಹತ್ಯೆಗಳನ್ನು ತಡೆಯಬಹುದಾಗಿದೆ ಎಂದ ಖತೀಬರು ಇತ್ತೀಚೆಗೆ ಕಂಪನಿಯೊಂದರಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದವ ಕಂಪನಿಯ ಮ್ಹಾಲಕ ಮತ್ತು ಜೊತೆಗಾರರು ತನ್ನ ಕೆಲಸವನ್ನು ಗುರುತಿಸದೇ ಹೋದದ್ದಕ್ಕಾಗಿ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆಯನ್ನು ಉಲ್ಲೇಖಿಸಿದರು.
ಪ್ರವಾದಿ ಸ ಅ ರವರು ತನ್ನ ಸಹಚರರನ್ನು ಉತ್ತಮ ಕೆಲಸ ನಿರ್ವಹಿಸಿದರೆ ಪ್ರಶಂಸಿಸುತ್ತಿದ್ದರು ಮತ್ತು ಸ್ವಂತ ಪತ್ನಿ ಮಕ್ಕಳನ್ನು ಕೂಡಾ ಪ್ರಶಂಸಿಸಿ ಮಾದರಿ ತೋರಿಸುತ್ತಿದ್ದರು ಎಂದ ಅವರು ಸಮಾಜವನ್ನು ಭಾದಿಸದ ವೈಯುಕ್ತಿಕ ಪ್ರಮಾದಗಳು ಉಂಟಾದರೆ ಅದನ್ನು ನಾಜೂಕಿನಿಂದ ನಿಭಾಯಿಸುತ್ತಿದ್ದರೆ ಸಮಾಜವನ್ನು ಭಾದಿಸುವ ತಪ್ಪಾದರೆ ಅದನ್ನು ಬಹಿರಂಗವಾಗಿಯೇ ಖಂಡಿಸುತ್ತಿದ್ದರು ಎಂದು ನುಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.