ಕೆದಿಲ(www.vknews.in): ಪಾಟ್ರಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್ ಕೆಜಿ ತರಗತಿ ಪ್ರಾರಂಭವಾಗಿದ್ದು, ಪಾಟ್ರಕೊಡಿಯ ಹಿರಿಯ ದಾನಿ, ಮಾಜಿ ಕೆದಿಲ ಪಂಚಾಯತ್ ಸದಸ್ಯರಾದ ರಾಬರ್ಟ್ ಲಸ್ರದೊ ರವರು ತರಗತಿ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲಾಭಿವೃಧಿ ಸಮಿತಿಯ ಅಧ್ಯಕ್ಷರಾದ ಅಶ್ರಪ್ ತಾರಿಪಡ್ಪು, ಪಂಚಾಯತ್ ಉಪಾಧ್ಯಕ್ಷರಾದ ಉಮೇಶ್ ಮುರುವ, ಸದಸ್ಯರಾದ ಹಬೀಬ್ ಮುಹ್ಸಿನ್, ಶಾಲಾಭಿವೃಧಿ ಸಮಿತಿಯ ಮಾಜಿ ಅಧ್ಯಕ್ಷರಾದ ಶರೀಫ್, ಜಬ್ಬರ್,
ಶಾಲಾಭಿವೃಧಿ ಸಮಿತಿಯ ಉಪಾಧ್ಯಕ್ಷರಾದ ಬದ್ರುನ್ನಿಸ ಪಾಟ್ರಕೊಡಿ, ಸದಸ್ಯರಾದ ಹರೀಶ್ ಕುದುಂಬ್ಲಾಡಿ ಹಾಗು ಶಾಲಾ ಶಿಕ್ಷಕರು, ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಭಾಗವಹಿಸಿದರು.
ಶಾಲಾ ಮುಖ್ಯ ಗುರುಗಳಾದ ಶಾರಣಪ್ಪ ಸರ್ ರವರು ಸ್ವಾಗತಿಸಿ ಕೊನೆಯಲ್ಲಿ ಧನ್ಯವಾದಗಳನ್ನು ಅರ್ಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.