ಕೋಲಾರ (ವಿಶ್ವಕನ್ನಡಿಗ ನ್ಯೂಸ್):2021-22ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ ಮೆಟ್ರಿಕ್ ಪೂರ್ವ , ಮೆಟ್ರಿಕ್ ನಂತರದ ಹಾಗೂ ಮೆರಿಟ್ ಕಂ ಮೀನ್ಸ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು , ಅರ್ಜಿ ಸಲ್ಲಿಸುವ ಅವಧಿಯನ್ನು ಡಿಸೆಂಬರ್ 15 ರವರೆಗೆ ವಿಸ್ತರಿಸಲಾಗಿದೆ .
ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಲು ಮತೀಯ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದವರಾಗಿದ್ದು ( ಮುಸ್ಲಿಂ , ಜೈನ್ , ಕ್ರಿಶ್ಚಿಯನ್ , ಸಿಖ್ , ಭೌದ್ಧ ಮತ್ತು ಪಾರ್ಸಿ ) ರಾಜ್ಯದ ನಿವಾಸಿಯಾಗಿರಬೇಕು . ಹಿಂದಿನ ವರ್ಷದ ತರಗತಿಯಲ್ಲಿ ವಾರ್ಷಿಕ / ಸೆಮಿಸ್ಟರ್ನಲ್ಲಿ ಶೇ .50 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು .
ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ಪೋಷಕರ ವಾರ್ಷಿಕ ಆದಾಯ ರೂ . 1.00 ಲಕ್ಷ ಮೀರಿರಬಾರದು . ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಪೋಷಕರ ವಾರ್ಷಿಕ ಆದಾಯ ರೂ .2.00 ಲಕ್ಷ ಮೀರಿರಬಾರದು . ಮೆರಿಟ್ ಕಂ ಮೀನ್ಸ್ ವಿದ್ಯಾರ್ಥಿವೇತನಕ್ಕೆ ಪೋಷಕರ ವಾರ್ಷಿಕ ಆದಾಯ ರೂ .2.50 ಲಕ್ಷ ಮೀರಿರಬಾರದು .
ವಿದ್ಯಾರ್ಥಿಯು ಕಡ್ಡಾಯವಾಗಿ ಆಧಾರ್ ಸಂಖ್ಯೆಯನ್ನು ಆನ್ – ಲೈನ್ ಅರ್ಜಿಯಲ್ಲಿ ನಮೂದಿಸಬೇಕು ಹಾಗೂ ಅರ್ಜಿಯ ಜೊತೆಯಲ್ಲಿ ಆಧಾರ್ ಕಾರ್ಡ್ನ ಪ್ರತಿಯನ್ನು ಕಡ್ಡಾಯವಾಗಿ ಲಗತ್ತಿಸಬೇಕು . ಮೆಟ್ರಿಕ್ ನಂತರದ ಹಾಗೂ ಮೆರಿಟ್ ಕಂ ಮೀನ್ಸ್ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಸಲ್ಲಿಸಿ ನಂತರ ಅದರ ಮೂಲಪ್ರತಿಗಳನ್ನು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಪ್ರಾಂಶುಪಾಲರಿಂದ ದೃಡೀಕರಿಸಿ , ಆನ್ – ಲೈನ್ನಲ್ಲಿ ಕಾಲೇಜು ಹಂತದಲ್ಲಿ ಪರಿಶೀಲಿಸಿದ ನಂತರ ಎಲ್ಲಾ ದಾಖಲೆಗಳ ( ಆದಾಯ ಪ್ರಮಾಣ ಪತ್ರ , ಹಿಂದಿನ ವರ್ಷದ ಅಂಕ ಪಟ್ಟಿ , ಶುಲ್ಕದ ಜೆರಾಕ್ಸ್ ಪ್ರತಿ , ಬ್ಯಾಂಕ್ ಖಾತೆ ವಿವರ , ಆಧಾರ್ ಕಾರ್ಡ್ , ಇತರೆ ದಾಖಲೆಗಳು ) ಸಮೇತ ಪೂರ್ಣ ಅರ್ಜಿಗಳನ್ನು ಆಯಾ ತಾಲ್ಲೂಕಿನ ತಾಲ್ಲೂಕು ಮಾಹಿತಿ ಕೇದ್ರಗಳಿಗೆ ಸಲ್ಲಿಸುವುದು .
ಅಪೂರ್ಣ ಅರ್ಜಿಗಳನ್ನು ಹಾಗೂ ಕಾಲೇಜು ಹಂತದಲ್ಲಿ ಆನ್ – ಲೈನ್ನಲ್ಲಿ ಪರಿಶೀಲನೆ ಮಾಡದೆ ಇರುವ ಅರ್ಜಿಗಳನ್ನು ತಾಲ್ಲೂಕು ಮಾಹಿತಿ ಕೇದ್ರಗಳಲ್ಲಿ ಸ್ವೀಕರಿಸಲಾಗುವುದಿಲ್ಲ . ಕೋಲಾರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಕಾಲೇಜುಗಳ ಸ್ವೀಕರಿಸಲಾಗುವುದು .
ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಂದ ಮಾತ್ರ ಅರ್ಜಿಗಳನ್ನು ನಲ್ಲಿ ಆನ್ಲೈನ್ ಮೂಲಕ ಇಲಾಖೆಯ ವೆಬ್ಸೈಟ್ ಅರ್ಹ ವಿದ್ಯಾರ್ಥಿಗಳು ವೆಬ್ ಸೈಟ್ https://scholarships.gov.in ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು . ಹೆಚ್ಚಿನ ಮಾಹಿತಿಗಾಗಿ www.gokdom.kar.nic.in ಹಾಗೂ ಜಿಲ್ಲಾ ಅಧಿಕಾರಿಗಳ ಕಾರ್ಯಾಲಯ , ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ , ಕೋಲಾರ ನೆಲ ಮಹಡಿ , ಮೌಲಾನಾ ಆಜಾದ್ ಭವನ , ಶ್ರೀ ದೇವರಾಜ್ ಅರಸು ಬಡಾವಣೆ , 2 ನೇ ಬ್ಲಾಕ್ , ಟಮಕ ವಾರ್ಡ್ ನಂ .1 , ಕೋಲಾರ ದೂರವಾಣಿ ಸಂ : 08152-295257 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.