ಮಾಲೂರು (ವಿಶ್ವ ಕನ್ನಡಿಗ ನ್ಯೂಸ್):
ಮಾಲೂರು ತಾಲ್ಲೂಕಿನ ದಾದಿನಾಯಕನದೊಡ್ಡಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ, ದಲಿತ ಸೂರ್ಯ ಡಾ// ಬಾಬಾ ಸಾಹೇಬ್ ಅಂಬೇಡ್ಕರ್ ರವರ 65ನೇ ಪರಿನಿರ್ವಾಣ ದಿನವನ್ನು ದೀಪ ಹಚ್ಚುವುದರ ಮೂಲಕ ದಲಿತ ಸೂರ್ಯನಿಗೆ ನವ ಚೇತನ ಡಾ//ಬಾಬಾ ಸಾಹೇಬ್ ಅಂಬೇಡ್ಕರ್ ಯುವ ಸಂಘದ ವತಿಯಿಂದ ನಮನಗಳನ್ನಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಉಪನ್ಯಾಸಕರಾದ ದೊಡ್ಡಿ ಮುನಿಯಪ್ಪ ರವರು ಮಾತನಾಡಿ” ವಿದ್ಯಾವಂತರು ವಿಚಾರವಂತರಾಗಬೇಕು,ವಿಚಾರವಂತರು ಸಮಾಜದ ಒಳತಿಗಾಗಿ ದುಡಿಯಬೇಕು ಎಂಬುವುದು ನಮ್ಮ ಮೂಲ ಉದ್ದೇಶವಾಗಿದೆ” ಎಂದರು.
ಕರವೇ ವಿದ್ಯಾರ್ಥಿ ಘಟಕ (ಹೆಚ್.ಶಿವರಾಮೇಗೌಡ ಸಾರಥ್ಯದ) ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ದೊಡ್ಡಿ ಪ್ರವೀಣ್ ರವರು ಮಾತನಾಡಿ “ನಮ್ಮ ಜನ ರಾಜಕೀಯದ ಚಟ್ಟವನ್ನೆರಿ ಸ್ವಾರ್ಥದ ಸಮಾಧಿಯಲ್ಲಿ ಮಲಗಿದ್ದಾರೆ, ಅವರು ಎದ್ದು ಹೋರಾಡುವ ತನಕ ಇನ್ನೊಬ್ಬರ ಬಳಿ ಬೇಡಿ ತಿನ್ನುವುದು ತಪ್ಪಲ್ಲ” ಎಂದರು.
ಈ ಸಂದರ್ಭದಲ್ಲಿ ಕೃಷ್ಣಪ್ಪ ಗ್ರಾಮ ಪಂಚಾಯತಿ ಸದಸ್ಯರು,ವಸಂತ್ ಕುಮಾರ್ ಟಿ. ಡಿ. ದಹಿಕ ಶಿಕ್ಷಕರು, ಆನಂದ್ ಬಾಲಕೃಷ್ಣ,ಅರ್ಜುನ್, ರಾಘವೇಂದ್ರ, ಪ್ರತಾಪ್,ನಂದವೀರ್ ಸೇನ್,ರವಿ ಡಿ. ಕೆ, ಸಂಜಯ್, ಶಿವರಾಜ್, ಸುನೀಲ್, ಸಂತೋಷ್,ತಿಲಕ್,ಲೋಕೇಶ್ ಯಶ್ವಂತ್,ದೊಡ್ಡಿ ಪ್ರವೀಣ್ ವಿ ಇತರರು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.