(www.vknews.com) ; ಚರಿತ್ರೆ ಪ್ರಸಿದ್ಧ ಗುರುಪುರ ಫಾಲ್ಗುಣಿ ನದಿ ತೀರದಲ್ಲಿ ಸಾಲೆ ಕೇಂದ್ರ ಜುಮಾ ಮಸೀದಿ ಉಳಾಯಿಬೆಟ್ಟು ಇದರ ವಠಾರದಲ್ಲಿ ಅಂತ್ಯ ವಿಶ್ರಮದಲ್ಲಿರುವ ಹಝ್ರತ್ ಅಸ್ಸಯ್ಯದ್ ಶುಹೂದ್ ವಲಿಯುಲ್ಲಾಹಿ (ಖ.ಸಿ) ರವರ ಹೆಸರಿನಲ್ಲಿ 3 ವರ್ಷಕೊಮ್ಮೆ ನಡೆಸಿಕೊಂಡು ಬರುವು ಉರೂಸ್, ದಿನಾಂಕ 13-02-2022 ರಿಂದ 20-02-2022 ರವರಗೆ ನಡೆಯಲಿದೆ .
ಉರೂಸ್ ಪ್ರಯುಕ್ತ 11-02-2022 ರಂದು ಶುಕ್ರವಾರ ಜುಮಾ ನಮಾಜ್ ನಂತರ ಧ್ವಜಾರೋಹಣ ನೆರವೇರಲಿದೆ. ದಿನಾಂಕ 13-02-2022 ರಂದು ಕಾರ್ಯಕ್ರಮ ಉದ್ಘಾಟನೆ ಹಾಗೂ ವಾರಕೊಮ್ಮೆ ನಡೆಸಿಕೊಂಡು ಬರುವ ಸ್ವಲತ್ ಇದರ ವಾರ್ಷಿಕ ಹಾಗೂ 14-02-2022 ರಿಂದ 19-02-2022 ರವರೆಗೆ ಪ್ರತಿದಿನ ಇಶಾ ನಮಾಜಿನ ನಂತರ ಧಾರ್ಮಿಕ ಮತಪ್ರಭಾಷಣ ನಡೆಯಲಿದ್ದು, ದಿನಾಂಕ 17-02-2022 ರಂದು ಮಗ್ರಿಬ್ ನಮಾಜ್ ನಂತರ ತಿಂಗಳಿಗೊಮ್ಮೆ ನಡೆಸುವ ಮಜ್ಲೀಸುನ್ನೂರ್ ಇದರ ವಾರ್ಷಿಕ ಕಾರ್ಯಕ್ರಮ ನಡೆಯಲಿದೆ.
ದಿನಾಂಕ 18 -02-2022 ರ ಶುಕ್ರವಾರದಂದು ಬೆಳಿಗ್ಗೆ 10 ರಿಂದ ಮದ್ಯಾಹ್ನ 3 ರವರೆಗೆ ಬ್ರಹತ್ ರಕ್ತದಾನ ಶಿಬಿರ ನಡೆಯಲಿದ್ದು, ಕಾರ್ಯಕ್ರಮದ ಸಮಾರೋಪ ಹಾಗೂ ಉದಾಯಸ್ತಮಾನ ಉರೂಸ್ 20-02-2022 ರಂದು ಬೆಳಿಗ್ಗೆ 9 ರಿಂದ ಆರಂಭಗೊಳ್ಳಲಿದ್ದು ಹಾಗೂ ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಉಲಮಾ ಉಮರಾ , ಧಾರ್ಮಿಕ, ರಾಜಕೀಯ, ಸಾಮಾಜಿಕ ನೇತಾರರ ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮವು ನಡೆಲಿದ್ದು. ಸಂಜೆ 6 ಗಂಟೆಗೆ ಕಾರ್ಯಕ್ರಮವು ಸಮಾಪ್ತಿಗೊಳ್ಳಲಿದೆ.
ಒಂದು ವಾರಗಳ ಕಾಲ ನಡೆಯುವ ಉರೂಸ್ ಕಾರ್ಯಕ್ರಮಕ್ಕೆ ಸರ್ವಾ ಬಾಂಧವರನ್ನು ಸ್ವಾಗತಿಸುತ್ತಿದ್ದೇವೆ. ಎಂದು ಉರೂಸ್ ಕಮಿಟಿಯು ಹಾಗೂ ಆಡಳಿತ ಕಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.