ಮೂಡುಬಿದಿರೆ (www.vknews.com) : ಭಾರತೀಯ ಜೈನ್ ಮಿಲನ್ ವಲಯ-8 ರ ಮಂಗಳೂರು ವಿಭಾಗದ ಜಿನ ಭಜನಾ ಸ್ಪರ್ಧೆ ಸೀಸನ್ -5 ಇತ್ತೀಚೆಗೆ ಶಿರ್ಲಾಲು ನಲ್ಲಿ ಶಿರ್ಲಾಲು ಜೈನ್ ಮಿಲನ್ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು.
ಈ ಸ್ಪರ್ಧೆ ಯಲ್ಲಿ 37 ತಂಡಗಳು ಭಾಗವಹಿಸಿದ್ದವು. ಮೂಡುಬಿದಿರೆ ಜೈನ್ ಮಿಲನ್ ನಾ ತ್ರಿಭುವನ್ ಜಿನ ಭಜನಾ ತಂಡ ಪ್ರಥಮ ಸ್ಥಾನ ಗಳಿಸಿದೆ. ಹಾಗೂ ನಗದು ಬಹುಮಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆ ಗೆ ಆಯ್ಕೆಯಾಗಿದ್ದಾರೆ.
ತಂಡದಲ್ಲಿ ಸೃಜನಪದ್ಮ , ನಿಧಿ ಜೈನ್, ಸುಶ್ರಾವ್ಯ, ಅರ್ಪಿತಾ ಜೈನ್, ನೇಹಾ ಜೈನ್ ಭಾಗವಹಿಸಿದ್ದರು.
ಮೂಲ ವೈಷ್ಣವ ಜನತೋ ಹಾಡಿನ ರಾಗಕ್ಕೆ ನಿತೇಶ್ ಬಲ್ಲಾಳ್ ಉಳಿಯಬೀಡು ಸಾಹಿತ್ಯ ರಚಿಸಿದ್ದಾರೆ, ವಿದ್ವಾನ್ ಯಶವಂತ್ ಎಂ.ಜಿ ತಂಡವನ್ನು ಸಂಯೋಜನೆ ಮಾಡಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.