ಮೂಡಿಗೆರೆ (www.vknews.com) : ಪವಿತ್ರ ಸಮಸ್ತ ಉಲಮಾ ಒಕ್ಕೂಟದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುನ್ನಿ ಯುವಜನ ಸಂಘದ ಚಿಕ್ಕಮಗಳೂರು ಜಿಲ್ಲಾ ಘಟಕ ವಿಧ್ಯುಕ್ತವಾಗಿ ಆಸ್ತಿತ್ವಕ್ಕೆ ಬಂದಿದ್ದು ಮೂಡಿಗೆರೆ ಬದ್ರಿಯಾ ಮಸೀದಿಯ ಸಭಾಂಗಣದಲ್ಲಿ ಜಿಲ್ಲಾದ್ಯಂತ ಇರುವ ಮೊಹಲ್ಲಾಗಳಿಂದ ಆಗಮಿಸಿದ ಸಮಸ್ತದ ಹಿರಿಯ ಕಾರ್ಯಕರ್ತರ ಸಕ್ರಿಯ ಸಹಭಾಗಿತ್ವದೊಂದಿಗೆ ಎಸ್ ವೈ ಎಸ್ ಕರ್ನಾಟಕ ರಾಜ್ಯ ಕೋಆರ್ಡಿನೇಟರ್ ಹಾಜಿ ಯು ಕೆ ಮೌಲಾನ ಅಬ್ದುಲ್ ಅಝೀಜ್ ದಾರಿಮಿಯವರ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಮಸ್ತದ ಉರುಗೋಲು ಎಂದು ವಿಶ್ಲೇಷಿಸಲಾಗುತ್ತಿರುವ ಎಸ್ ವೈ ಎಸ್ ನ್ನು ಜಿಲ್ಲಾದ್ಯಂತ ಬಲಪಡಿಸುವ ಜವಾಬ್ದಾರಿಯನ್ನು ನೂತನ ಸಮಿತಿ ಕೈಗೆತ್ತಿಗೊಳ್ಳಬೇಕೆಂದು ಅವರು ಸಲಹೆ ನೀಡಿದರಲ್ಲದೇ ಸಮಸ್ತದ ಪೂರ್ವಕಾಲ ಕಾರ್ಯಕರ್ತರನ್ನು ನಾವು ಸದಾ ಅಭಿನಂದಿಸುವ ಪರಿಪಾಠ ಬೆಳೆಸಿ ಕೊಳ್ಳಬೇಕೆಂದರು.
ಸಭೆಯನ್ನು ಎಸ್ ವೈ ಎಸ್ ಕೇಂದ್ರೀಯ ಸದಸ್ಯ ಹಾಜಿ ಎಸ್ ಬಿ ಮುಹಮ್ಮದ್ ದಾರಿಮಿ ಉದ್ಘಾಟಿಸಿ ಇಂದು ಸಂಘಟನಾ ಯುಗವಾಗಿದ್ದು ಪ್ರತಿಯೊಂದು ಕ್ಷೇತ್ರದಲ್ಲಿ ಬೇರೆ ಬೇರೆ ಸಂಘಟನೆಗಳನ್ನು ಹುಟ್ಟು ಹಾಕಲಾಗುತ್ತಿದೆ. ಕಾಲ ಬದಲಾದಂತೆ ಧರ್ಮದ ಚೌಕ್ಕಟ್ಟಿನಲ್ಲಿದ್ದು ಕೊಂಡು ನಮ್ಮ ಯೋಜನೆ, ಯೋಚನೆಗಳು ಬದಲಾಗ ಬೇಕೆಂದು ಕರೆನೀಡಿ ಮಲೆನಾಡು ಪ್ರದೇಶದಲ್ಲಿ ಸಮಸ್ತ ಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದರು.
ಬದ್ರಿಯಾ ಮಸೀದಿ ಅದ್ಯಕ್ಷ ಸಿ ಕೆ ಇಬ್ರಾಹಿಂ ಹಾಜಿ ಪ್ರಾಸ್ತಾವಿಕವಾಗಿ ಮಾತನಾಡಿ ಸಮಸ್ತದ ಯಾವುದೇ ಕಾರ್ಯಚಟುವಟಿಕೆಗಳಿಗೆ ನಮ್ಮಿಂದಾದ ಸಹಕಾರ ಇದೆ ಎಂದರಲ್ಲದೇ ಸಮಸ್ತದ ಉಲಮಾಗಳ ಸರಳತೆಯನ್ನು ಕೊಂಡಾಡಿದರು.
ಸುಲೈಮಾನ್ ಉಸ್ತಾದ್ ಸ್ವಾಗತಿಸಿ ಜಮಾಲ್ ಪೈಝಿ ಅಣಜೂರು ವಂದಿಸಿದರು.ವಿಶೇಷ ಅತಿಥಿಯಾಗಿ ಎಸ್ ವೈ ಎಸ್ ಕೇಂದ್ರ ಕೌನ್ಸಿಲರ್ ಹಕೀಮ್ ಪರ್ತಿಪ್ಪಾಡಿ ಆಗಮಿಸಿದ್ದರು.ಸ್ಥಳೀಯ ಖತೀಬ್ ಯಾಕೂಬ್ ದಾರಿಮಿ ದುಹಾ ನೆರವೇರಿಸಿದರು
ನೂತನ ಸಾರಥಿಗಳು
ಅಧ್ಯಕ್ಷರು; ಸಿ ಕೆ ಇಬ್ರಾಹಿಂ ಹಾಜಿ ಮೂಡಿಗೆರೆ.ಉಪಾಧ್ಯಕ್ಷರುಗಳು.
ಮುಹಮ್ಮದ್ ಹಾಜಿ ಹಿರೆಬೈಲು.ಎ ಸಿ ಅಯೂಬ್ ಹಾಜಿ ಚಕ್ಕಮಕ್ಕಿಸಾದಿಕ್ ನಾರ್ವೆಅಬ್ದುಲ್ ಖಾದರ್ ಆಲ್ದೂರುಎಮ್ ಎಸ್ ಮುಹಮ್ಮದ್ ಚೀಕನಹಳ್ಳಿ.ಇಬ್ರಾಹಿಂ ಹಾಜಿ ಹಾಂದಿ.ಪ್ರಧಾನ ಕಾರ್ಯದರ್ಶಿ;ಸುಲೈಮಾನ್ ಮುಸ್ಲಿಯಾರ್ ಹ್ಯಾಂಡ್ ಪೋಸ್ಟ್.ಕಾರ್ಯದರ್ಶಿ ಗಳು;ಎಮ್ ಎಚ್ ಇಸ್ಮಾಯಿಲ್ ಮೂಡಿಗೆರೆಇಸ್ಮಾಯಿಲ್ ಹಾಜಿ ಮೂಡಿಗೆರೆ.ಜಮಾಲ್ ಫೈಝಿ ಅಣಜೂರುಕರೀಮ್ ಅಣಜೂರುಅಬ್ದುಲ್ ರಹ್ಮಾನ್ ಬೀಜುವಳ್ಳಿಸಂಘಟನಾ ಕಾರ್ಯದರ್ಶಿ:ಇಸ್ಮಾಯಿಲ್ ಫೈಝಿ ಚಿಕ್ಕಮಗಳೂರುಅಬೂಬಕ್ಕರ್ ಕೃಷ್ಣಾ ಪುರಖಜಾಂಚಿ; ನಝೀರ್ ಹಾಜಿ ಗಬಗಲ್
ಸಲಹೆಗಾರರುಇಬ್ರಾಹಿಂ ಹಾಜಿ ಚಕ್ಕಮಕ್ಕಿಇಸ್ಮಾಯಿಲ್ ಆಝಾದ್ ಮೂಡಿಗೆರೆಅಬ್ದುಲ್ ಖಾದರ್ ಮೂಡಿಗೆರೆಎಮ್ ಎಸ್ ಲತೀಫ್ ಬಿಳಗುಳ.
ಸದಸ್ಯರುಗಳು
ಯಾಕೂಬ್ ದಾರಿಮಿ.ಯಾಕೂಬ್ ಫೈಝಿಸಿನಾನ್ ಫೈಝಿಖಲಂದರ್ ದಾರಿಮಿಮುಹಮ್ಮದ್ ಅಲಿಮುಹಮ್ಮದ್ ಅಶ್ರಫ್ಸಲೀಮ್ ಹಿರೆಬೈಲುಅಬ್ದುಲ್ ಖಾದರ್ಪಿ ಕೆ ಅಬ್ದುಲ್ಲಾಎಸ್ ಎಮ್ ಅಬ್ದುರ್ರಹ್ಮಾನ್ಮುಹಮ್ಮದ್ ಚಕ್ಕಮಕ್ಕಿಅಬ್ದುಲ್ ಹಮೀದ್ಫಾರೂಕ್ ಮೂಡಿ ಗೆರೆಅಬ್ದುಲ್ ಅಝೀಝ್ ಮೂಡಿಗೆರೆಶಿಹಾಬುದ್ದೀನ್ಅಬ್ದುಲ್ ವಾಹೀದ್ಹನೀಫ್ಹಮ್ಮಬ್ಬಅಶ್ರಫ್ಅಬೂಬಕ್ಕರ್ ಕೆ ಪುರ.ಟಿ ಎಚ್ ಶರೀಫ್ಇಸ್ಮಾಯಿಲ್ ಹಾಜಿ ನಾರ್ವೆದಾವೂದ್ ಹಾಜಿ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.