ಕೋಲಾರ (ವಿಶ್ವಕನ್ನಡಿಗ ನ್ಯೂಸ್): ಮಾಜಿ ಕೇಂದ್ರ ಸಚಿವ ಹಿರಿಯ ಮುತ್ಸದ್ದಿ ನೇರನುಡಿಯ ಆರ್.ಎಲ್ ಜಾಲಪ್ಪ ಅವರ ನಿಧನದಿಂದ ರದಿಂದ ರಾಜ್ಯ ಹಾಗೂ ಜಿಲ್ಲೆಗೆ ಅಪಾರ ನಷ್ಟವಾಗಿದ್ದ , ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಕಂಬನಿ ಮಿಡಿದಿದ್ದಾರೆ .
ಈ ಕುರಿತು ಮಾತನಾಡಿರುವ ಅವರು , ಜಾಲಪ್ಪ ಅವರು ಕೋಲಾರದಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸ್ಥಾಪಿಸುವ ಮೂಲಕ ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದಾರೆ , ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅವರ ಪ್ರಯತ್ನ ಅಪಾರವಾಗಿದೆ ಎಂದು ತಿಳಿಸಿದ್ದಾರೆ . ಅವರು ಸ್ಥಾಪಿಸಿರುವ ಆಸ್ಪತ್ರೆ ಇಂದು ಜಿಲ್ಲೆ ಮಾತ್ರವಲ್ಲ ಪಕ್ಕದ ಗಡಿ ರಾಜ್ಯಗಳ ರೋಗಿಗಳಿಗೂ ಸೇವೆ ನೀಡಿದ್ದಾರೆ . ಅವರ ಜನಪರ ಕಾಳಜಿ ಇಂದು ಸಮಾಜಕ್ಕೆ ಮಾದರಿಯಾಗಿದ್ದು , ಅವರ ನಿಧನ ತುಂಬಲಾರದ ನಷ್ಟ ಎಂದು ತಿಳಿಸಿದ್ದಾರೆ .
ಗೃಹ , ಸಹಕಾರ , ಕಂದಾಯ ಸಚಿವರಾಗಿ ಅವರು ಮಾಡಿರುವ ಸೇವೆ ಮರೆಯಲಾಗದು , ಸಹಕಾರಿ ಸಚಿವರಾಗಿದ್ದಾಗ ಬಡ್ಡಿ ಮನ್ನಾ ಮೂಲಕ ಬಡ ರೈತರ ನೆರವಿಗೆ ನಿಂತವರು ಅವರು ಎಂದು ತಿಳಿಸಿದ್ದಾರೆ .
ನೇರ ನಿಷ್ಟೂರ ನುಡಿಯ ಜಾಲಪ್ಪ ನುಡಿದಂತೆ ನಡೆದವರು , ಅವರ ಹಠ.ಛಲ ಸಮಾಜದ ಏಳೆಗಾಗಿ ಮಾತ್ರ ಅವರ ಮಾರ್ಗದರ್ಶನವನ್ನು ನಾವು ಸದಾ ಬಯಸಿದ್ದೆವು ಅಂತಹ ದೀಮಂತ ನಾಯಕನನ್ನು ಕಳೆದುಕೊಂಡು ಜಿಲ್ಲೆಯ ರಾಜಕಾರಣ ಬಡವಾಗಿದೆ ಎಂದು ದುಃಖಿಸಿದ್ದಾರೆ .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.