ಜೆದ್ದಾ(www.vknews.in): ಸೌದಿ, ಯುಎಇ ಸೇರಿದಂತೆ ಬಹುತೇಕ ಗಲ್ಫ್ ರಾಷ್ಟ್ರಗಳಲ್ಲಿ ದೈನಂದಿನ ಕೊವಿಡ್ ಸೋಂಕಿತರ ಸಂಖ್ಯೆ ಗಣನೀಯ ಏರಿಕೆಯಾಗುತ್ತಿದ್ದು, ಜನರಲ್ಲಿ ಆತಂಕ ಹೆಚ್ಚುತ್ತಿದೆ.
ಸೌದಿ ಹಾಗೂ ಯುಎಇಯಲ್ಲಿ 50ಕ್ಕಿಂತಲೂ ಕಡಿಮೆಯಾಗಿದ್ದ ದೈನಂದಿನ ಕೊವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಗಮನಾರ್ಹವಾಗಿ ಏರುತ್ತಿದೆ. ಈ ಎರಡೂ ರಾಷ್ಟ್ರಗಳ ಇಂದಿನ ಸೋಂಕಿತರ ಸಂಖ್ಯೆ ಕ್ರಮವಾಗಿ 222 ಹಾಗೂ 452 ಕ್ಕೆ ಏರಿಕೆಯಾಗಿದೆ. ಓಮಿಕ್ರಾನ್ ರೂಪಾಂತರ ನಂತರ ಕಂಡು ಬಂದಿರುವ ಈ ಏರಿಕೆ ಜನರಲ್ಲಿ ಆತಂಕವನ್ನುಂಟು ಮಾಡಿದ್ದು, ಈ ಎರಡೂ ರಾಷ್ಟ್ರಗಳಲ್ಲಿ ಇದೀಗ ಚಳಿಗಾಳ ಪ್ರಾರಂಭವಾಗಿದ್ದು, ಶೀತ ಹವಾಮಾನದಿಂದಾಗಿ ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.