ಮಾಲೂರು (ವಿಶ್ವ ಕನ್ನಡಿಗ ನ್ಯೂಸ್):
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಪಟ್ಟಣ್ಣದ ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಡಿಸೆಂಬರ್ 30 ರಂದು ಚುನಾವಣೆ ನಡೆಸಲು ಚುನಾವಣಾಧಿಕಾರಿಗಳು ದಿನಾಂಕ ನಿಗದಿ ಮಾಡಿ ಪುರಸಭೆಯ ಸದಸ್ಯರಿಗೆ ಚುನಾವಣಾ ಸಭೆಗೆ ಹಾಜರಾಗಲು ಜ್ಞಾಪನ ಪತ್ರ ನೀಡಿದ್ದಾರೆ.
ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ಆಯೋಗ ಮೊದಲ ಅವಧಿಗೆ ಪರಿಶಿಷ್ಟ ಜಾತಿ ಸಾಮಾನ್ಯ ಅಭ್ಯರ್ಥಿ ಮೀಸಲು ನಿಗದಿಯಾಗಿತ್ತು. ಆ ಹಾದಿಯಲ್ಲಿ ಮೊದಲನೆ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಎ.ವಿ.ಮುರಳಿಧರ್ ಅವರು ಅಧ್ಯಕ್ಷರಾಗಿ ಒಂದು ವರ್ಷ ಆಡಳಿತ ನೀಡಿದ್ದರು. ಕಾಂಗ್ರೆಸ್ ಪಕ್ಷದ ಒಳಒಪ್ಪಂದದಂತೆ ಶಾಸಕರಾದ ಕೆ.ವೈ.ನಂಜೇಗೌಡ ಅವರ ಸೂಚನೆ ಮೇರೆಗೆ ಎನ್.ವಿ.ಮುರಳಿಧರ್ ರವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಪ್ರಭಾರಿಯಾಗಿ ಉಪಾಧ್ಯಕ್ಷರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆ ಮುಗಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಪುರಸಭೆಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ದಂಡಾಧಿಕಾರಿಗಳನ್ನು ಚುನಾವಣಾಧಿಕಾರಿಗಳಾಗಿ ನೇಮಿಸಿ ಆದೇಶಿಸಿದ್ದಾರೆ. ಡಿಸೆಂಬರ್ 30 ರಂದು ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ದಿನಾಂಕ ನಿಗದಿಪಡಿಸಿ ಎಲ್ಲಾ ಸದಸ್ಯರಿಗೂ ಜ್ಞಾಪನ ಪತ್ರ ಜಾರಿ ಮಾಡಿದ್ದಾರೆ. ಪಟ್ಟಣ್ಣದ ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷದಿಂದ 11 ಮಂದಿ ಸದಸ್ಯರು, ಬಿಜೆಪಿ ಪಕ್ಷದಿಂದ 10 ಮಂದಿ ಸದಸ್ಯರು, ಜೆಡಿಎಸ್ 1 ಸದಸ್ಯರು ಬಲಾ ಬಲ ಹೊಂದಿದ್ದು, 5 ಮಂದಿ ಪಕ್ಷೇತರ ಸದಸ್ಯರಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ 11 ಮಾಮ್ದಿ ಸದಸ್ಯರ ಜೊತೆ ಪಕ್ಷೇತರ ಇಬ್ಬರು ಸದಸ್ಯರು ಜೆಡಿಎಸ್ ಸದಸ್ಯರು ಸೇರಿದಂತೆ ಒಟ್ಟು 14 ಮಂದಿ ಗುರ್ತಿಸಿಕೊಂಡಿದ್ದಾರೆ. ಬಿಜೆಪಿ ಪಕ್ಷದಿಂದ 10 ಮಂದಿ ಆಯ್ಕೆಯಾಗಿದ್ದು 3 ಮಂದಿ ಪಕ್ಷೇತರ ಸದಸ್ಯರು ಗುರ್ತಿಸಿಕೊಂಡಿದ್ದು ಒಟ್ಟು 13 ಮಂದಿ ಸದಸ್ಯರಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ 25 ನೇ ವಾರ್ಡನಿಂದ ಮಂಜುನಾಥ್, 1 ನೇ ವಾರ್ಡನಿಂದ ಶಂಕರ್ ಆಕಾಂಕ್ಷಿಸಿಗಳಾಗಿದ್ದು, ಶಾಸಕರಾದ ಕೆ.ವೈ.ನಂಜೇಗೌಡ ಹಾಗೂ ಕಾಂಗ್ರೆಸ್ ಪಕ್ಷದ ಸದಸ್ಯರ ಸಹಕಾರ ಪಡೆದವರು ಅಧ್ಯಕ್ಷರಾಗಿ ಮಾಲೂರು ಪುರಸಭೆಯ ಗದ್ದುಗೆ ಹಿಡಿಯಲಿದ್ದಾರೆ.
ಬಿಜೆಪಿಯಲ್ಲಿನ ಪಕ್ಷೇತರ ಸದಸ್ಯರು ಸೇರಿದಂತೆ 13 ಮಂದಿ ಸದಸ್ಯರಾಗಿದ್ದು ಅಧ್ಯಕ್ಷರ ಗದ್ದುಗೆ ಗೆಲ್ಲಲ್ಲು ಒಬ್ಬ ಸದಸ್ಯರ ಅವಶ್ಯಕತೆ ಇದ್ದು ಇದೇ ಡಿಸೆಂಬರ್ 30 ರ ಚುನಾವಣೆಯಲ್ಲಿ ವಿಜಯಲಕ್ಷ್ಮಿ ಯಾರ ಕೊರಳಿಗೆ ಒಲುಯುವುದೋ ಕಾದು ನೋಡಬೇಕಾಗಿದೆ.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.