(www.vknews.com) ; ಬೆಂಗಳೂರಿನಲ್ಲಿ ಎರಡು ದಿನಗಳ ಮೊದಲು ಕೆಲ ಮಸಿದಿಗಳ ಮೈಕ್ ಗಳನ್ನು ತೆಗೆಯಲಾಗಿತ್ತು.ಆ ಕೂಡಲೇ ವಕ್ಫ್ ಬೋರ್ಡ್ ಹಲವಾರು ದೂರು ಬಂದ ಹಿನ್ನೆಲೆಯಲ್ಲಿ ಯಾವುದೇ ವಿವರ ನೋಟೀಸ್ ನೀಡದೆ ಪೋಲಿಸ್ನವರು ಮಸೀದಿಗೆ ಅಕ್ರಮ ಪ್ರವೇಶಿಸಿ ಧ್ವನಿವರ್ಧಕ ತೆಗೆದ ವಿಷಯ ಸಂಭಂದಿಸಿ ಇನ್ನು ಯಾವುದೇ ಮಸೀದಿಯ ಧ್ವನಿವರ್ಧಕ ತೆಗೆಯಬಾರದು ತೆಗೆದದ್ದನ್ನು ತಕ್ಷಣ ಪುನರ್ ಸ್ಥಾಪಿಸಬೇಕೆಂದು ಕರ್ನಾಟಕ ವಕ್ಫ್ ಬೋರ್ಡ್ ಅಧ್ಯಕ್ಷರಾದ ಮೌಲಾನಾ ಶಾಫಿ ಸಅದಿಯವರ ನೇತ್ರತ್ವದ ವಕ್ಫ್ ಮಂಡಳಿ ಖಡಕ್ಕ್ ಆದೇಶ ನೀಡಿದ್ದರಿಂದ ವಶ ಪಡಿಸಲಾದ ಮಸೀದಿಯ ಅಝಾನ್ ಮೈಕ್ಗಳನ್ನು ಪುನ ಸ್ಥಾಪಿಸಲು ಪೋಲಿಸರು ಒಪ್ಪಿದ್ದಾರೆ.
ಸಿದ್ದಾಪುರದ ಎಲ್ಲ ಮಸೀದಿಗಳ ಸಮಿತಿ ಮತ್ತು ಜಯನಗರ ಮುಸ್ಲಿಮ್ ಸಂಘಟನೆಗಳ ಸಮಿತಿ ಈ ಕುರಿತು ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಕುರಿತು ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿತ್ತು. ಪೊಲೀಸರಿಗೆ ತಮ್ಮ ತಪ್ಪಿನ ಅರಿವಾಗಿದ್ದು, ಮೈಕ್ ಗಳನ್ನು ವಾಪಾಸ್ ಕೊಡುವುದಾಗಿ ಹೇಳಿದ್ದಾರೆ.
ವದಂತಿಗಳಿಗೆ ಕಿವಿಗೊಡದೆ ಜನರು ಶಾಂತಿ ಕಾಪಾಡಬೇಕೆಂದು ಕರ್ನಾಟಕ ವಕ್ಫ್ ಬೋರ್ಡ್ ಅಧ್ಯಕ್ಷರಾದ ಮೌಲಾನಾ ಶಾಫಿ ಸಅದಿ ಉಸ್ತಾದ್ ಜನರಿಗೆ ಮನವಿ ಮಾಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.