✳️ ಪ್ರತಿಭೆಗಳ ಬೆಳವಣಿಗೆಗೆ ಅಭಿನಂದನಾ ಕಾರ್ಯಕ್ರಮಗಳು ಪೂರಕ -ಬಹು ಬುರ್ಹಾನ್ ತಂಙಳ್
✳️ ಅರಳಿದ ಪ್ರತಿಭೆಗಳು ಸಮಾಜಕ್ಕೆ ಬೆಳಕು ನೀಡುವಂತಾಗಲಿ-ಕೆ.ಕೆ.ಇಬ್ರಾಹೀಂ ಹಾಜಿ
✳️ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಅವರನ್ನು ಸಾಧಕರನ್ನಾಗಿಸುವ ಮದ್ರಸ ಅಧ್ಯಾಪಕರ ಶ್ರಮ ಅಭಿನಂದನೀಯ-ಬುಶ್ರಾ ಅಬ್ದುಲ್ ಅಝೀಝ್
ಮಾಡನ್ನೂರು (www.vknews.com)
ಶಂಸುಲ್ ಉಲಮಾ ಕಲ್ಚರಲ್ ಸೆಂಟರ್ ವತಿಯಿಂದ ಕ್ಯಾಶ್ ಅವಾರ್ಡ್: ವಿಜೇತ ವಿದ್ಯಾರ್ಥಿಗಳಿಗೆ ಕಲ್ಚರಲ್ ಸಮಿತಿ ಅಧ್ಯಕ್ಷರೂ ಜಮಾಅತ್ ಕಮಿಟಿ ಉಪಾಧ್ಯಕ್ಷರೂ ಆದ ಬಿ.ಎಂ.ಅಬ್ದುಲ್ಲಾ ಚಾಲ್ಕೆರೆ ಹಾಗೂ ಪದಾಧಿಕಾರಿಗಳು ನಗದು ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ಅಧ್ಯಾಪಕರಿಗೆ ಕ್ಯಾಶ್ ಅವಾರ್ಡ್: ವಿದ್ಯಾರ್ಥಿಗಳ ಸಾಧನೆಗೆ ಸೂಕ್ತ ಮಾರ್ಗದರ್ಶನಗಳನ್ನು ನೀಡಿದ ಮದ್ರಸ ಅಧ್ಯಾಪಕರಿಗೆಜಮಾಅತ್ ಕಮಿಟಿ ಅಧ್ಯಕ್ಷರಾದ ಕೆ.ಕೆ.ಇಬ್ರಾಹೀಂ ಹಾಜಿ ಉಪಾಧ್ಯಕ್ಷರಾದ ಸಿ.ಹೆಚ್.ಅಬ್ದುಲ್ ಅಝೀಝ್,ಸಲಾಹುದ್ದೀನ್ ಸಖಾಫಿ ಪ್ರಾಯೋಜಕತ್ವದಲ್ಲಿ ನಗದು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಯಂಗ್ ಮೆನ್ಸ್ ನಿಂದ ಡಿವಿಷನ್ ಚಾಂಪಿಯನ್ ಅಭಿನಂದನಾ ಫಲಕ: ಸ್ಪರ್ಧಾ ಕೂಟದಲ್ಲಿ ಮೂರು ವಿಭಾಗೀಯ ಚಾಂಪಿಯನ್ ಪ್ರಶಸ್ತಿ ಪಡೆದದ್ದನ್ನು ಪ್ರತ್ಯೇಕ ಅಭಿನಂದಿಸಿದ ಸ್ಥಳೀಯ ಖುವ್ವತುಲ್ ಇಸ್ಲಾಂ ಯಂಗ್ ಮೆನ್ಸ್ ಎಸೋಸಿಯೇಶನ್ ಅಧ್ಯಕ್ಷರಾದ ಹಿರಾ ಶಾಫಿ ಹಾಗೂ ಪದಾಧಿಕಾರಿಗಳು ಅಭಿನಂದನಾ ಫಲಕ ನೀಡಿ ಸನ್ಮಾನಿಸಿದರು.
SKSSFನಿಂದ ಸನ್ಮಾನ: ಸಮಿತಿಯ ಪ್ರಧಾನ ಕಾರ್ಯದರ್ಶಿ ಎ.ಜಿ.ಯೂಸುಫ್ ಹಾಗೂ ಪದಾಧಿಕಾರಿಗಳು ಸಮಿತಿಯ ವತಿಯಿಂದ ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಕಲಾಪ್ರತಿಭೆಗಳಿಗೆ ವಿಶೇಷ ಕ್ಯಾಶ್ ಅವಾರ್ಡ್: ವೈಯಕ್ತಿಕ ಅತ್ಯಧಿಕ ಅಂಕಗಳಸಿ ಕಲಾ ಪ್ರತಿಭೆ ಗಳಾಗಿ ಹೊರಹೊಮ್ಮಿದ ಅನಸ್ ಮತ್ತು ಜುನೈದ್ ಎಂಬಿಬ್ಬರು ವಿದ್ಯಾರ್ಥಿಗಳಿಗೆ ಅರೆಯಲಾಡಿ ಈಗಲ್ ಸ್ಟಾರ್ವತಿಯಿಂದ ಸಾರಥಿ ಗಳಾದ ಬಶೀರ್ ಸಿ.ಹೆಚ್.,ಅಝ್ಹರ್ ಹಾಗೂ ಸ್ಥಳೀಯ ಪಂಚಾಯತ್ ಸದಸ್ಯರಾದ ಅಬ್ದುರ್ರಹ್ಮಾನ್ ಬಿ.ಕೆ.ಮತ್ತು ನಿವ್ರತ್ತ ಎ ಎಸ್ ಐ ಹಸೈನಾರ್ ಎಂ.ಡಿ.ತಮ್ಮ ವೈಯುಕ್ತಿಕ ನಗದು ಸ್ಮರಣಿಕೆಯನ್ನು ನೀಡಿದರು.
ಸಮಾರಂಭದಲ್ಲಿ ಮಸೀದಿ ಕೋಶಾಧಿಕಾರಿ ಯೂಸುಫ್ ಹಾಜಿ ಅರೆಯಲಾಡಿ, ಹಿರಿಯರಾದ ಇಸ್ಮಾಯಿಲ್ ಹಾಜಿ ಹಿರಾ, ಮದ್ರಸ ಉಸ್ತುವಾರಿ ಸದಸ್ಯರಾದ ಮೊಯ್ದು ಎಂ.ಡಿ., ಮಸೀದಿ ಉಸ್ತುವಾರಿ ಸದಸ್ಯರಾದ ಖಾಲಿದ್ ಬಿ.ಎಂ.,ಹಸನ್ ಬಾಖವಿ, ಅಬ್ದುಲ್ ಅಝೀಝ್ ಮುಸ್ಲಿಯಾರ್ ,ಮದ್ರಸ ಅಧ್ಯಾಪಕರಾದ ಇಬ್ರಾಹೀಂ ಝುಹ್ರಿ, ಇಬ್ರಾಹೀಂ ಸಅದಿ, ಅಬೂಬಕರ್ ಮುಸ್ಲಿಯಾರ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.ಮದ್ರಸದ ಪ್ರಭಾರ ಮುಖ್ಯೋಪಾಧ್ಯಾಯರಾದ ಇಮ್ರಾನ್ ದಾರಿಮಿ ವಲ್ ಹೈತಮಿ ಧನ್ಯವಾದ ಸಮರ್ಪಿಸಿದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಂಪೂರ್ಣ ಸಹಕಾರ ನೀಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.