ಶ್ರೀನಿವಾಸಪುರ ( ವಿಶ್ವಕನ್ನಡಿಗ ನ್ಯೂಸ್ ) ಶಾಸಕ ಕೆ.ಆರ್. ರಮೇಶ್ ಕುಮಾರ್ ಮಗ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ಹಣ ಕಳೆದುಕೊಂಡಿರುವ ಬಗ್ಗೆ ಜೆಡಿಎಸ್ ನಾಯಕರು ಸಾಬೀತು ಮಾಡಿದರೆ ರಮೇಶ್ ಕುಮಾರ್ ಅವರಿಂದ ರಾಜಕೀಯ ನಿವೃತ್ತಿ ಕೊಡಿಸುತ್ತೆವೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜು ತಿಳಿಸಿದರು.
ಪಟ್ಟಣದ ಪ್ರವಾಸ ಮಂದಿರ ದಲ್ಲಿ ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ , ಶ್ರೀನಿವಾಸಪುರದಲ್ಲಿ ನಡೆದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ , ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹಾಗೂ ಜೆಡಿಎಸ್ ಪಕ್ಷದ ಜಿಲ್ಲಾಧ್ಯಾಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಮಾಡಿರುವ ಆರೋಪಗಳನ್ನು ಸಾಬೀತು ಪಡೆಸಲಿ , ಸಾಬೀತಾದರೆ ನಮ್ಮ ಶಾಸಕರಿಂದ ರಾಜಕೀಯ ನಿವೃತ್ತಿ ಗೊಳಿಸುತ್ತೇವೆ. ಇಲ್ಲ ಈ ಮೂವರು ವ್ಯಕ್ತಿಗಳು ರಾಜಕೀಯ ನಿವೃತ್ತಿ ಪಡೆಯುತ್ತಿರ ಎಂದು ಸವಾಲು ಹಾಕಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಇತ್ತೀಚಿಗೆ ನಡೆದ ಜನತಾ ಜಲಧಾರೆ ಸಭೆಯಲ್ಲಿ ಶಾಸಕರ ಮಗನ ಬಗ್ಗೆ ಮಾತನಾಡಿ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಅಲ್ಲ ಸ್ವಾಮಿ ಕ್ರಿಕೆಟ್ ಬೆಟ್ಟಿಂಗ್ ನಡೆಸ ಬೇಕೆಂದರೆ ಮೊಬೈಲ್ನಲ್ಲಿ ಆಪ್ ಇರಬೇಕು. ಇಲ್ಲವೇ ಇವರ ಬ್ಯಾಂಕ್ ಅಕೌಂಟ್ನಿಂದ ಬೇರೆಯವರ ಅಕೌಂಟಿಗೆ ಹಣ ಸಂದಾಯವಾಗಿರಬೇಕು. ಅಂತಹ ಯಾವುದೇ ರೀತಿಯಾದ ಘಟನೆ ನಡೆದಿಲ್ಲ ಎಂದರು. ರಮೇಶ್ ಕುಮಾರ್ ಬುದ್ದಿ ಕಲಿಯಬೇಕಾಗಿಲ್ಲ . ಇಬ್ರಾಹಿಂ ರವರು ಸಮಯಕ್ಕೆ ತಕ್ಕಂಗೆ ಪಕ್ಷಗಳನ್ನು ಬದಲಾವಣೆ ಮಾಡುತ್ತಾರೆ . ತಿಂದ ಮನೆಗೆ ದ್ರೋಹ ಬಗೆಯುವ ಕೆಲಸ ಮಾಡುತ್ತಿದ್ದಾರೆ . ನೀರಾವರಿ ಯೋಜನೆಗಳ ಬಗ್ಗೆ ಜನತೆಗೆ ತಿಳಿಸಲು ಬಂದವರು ರಮೇಶ್ ಕುಮಾರ್ ಗುರಿ ಮಾಡಿಕೊಂಡಿರುವುರು ಹೊಟ್ಟೆ ತುಂಬುತ್ತದೆಯೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಮುಖಂಡ ಗಾಂಡ್ಲಹಳ್ಳಿ ದರ್ಶನ್ ಮಾತನಾಡಿ , ಎತ್ತಿಹೊಳೆ ಕಾಮಾಗಾರಿ ಕಾಂಗ್ರೆಸ್ ಸರ್ಕಾರದಲ್ಲಿ ಮಿಂಚಿನ ವೇಗದಲ್ಲಿ ಸಾಗುತ್ತಿತ್ತು . ಆದರೆ ಈಗಿನ ಬಿಜೆಪಿ ಸರ್ಕಾರ ಬಂದ ಮೇಲೆ ಕಾಮಗಾರಿ ನಿಂತುಹೋಗಿದೆ. ಇದನ್ನು ವೆಂಕಟಶಿವಾರೆಡ್ಡಿ ಆಪ್ತರಾದ ಆರೋಗ್ಯ ಸಚಿವ ಸುಧಾಕರ್ರವರಿಗೆ ಪ್ರಶ್ನೆ ಮಾಡಿಲ್ಲ. ನಿಮಗೆ ಬೇಕಾಗಿರುವದು ರಾಜಕೀಯ ಲಾಭ ಮಾತ್ರ ನೀರು ತರಬೇಕಾದ ಕಳಿ ಕಳಿ ಇಲ್ಲ . ಅದು ಇರುವುದು ಕೇವಲ ರಮೇಶ್ ಕುಮಾರ್ರವರಿಗೆ ಮಾತ್ರ ಎಂದರು. ಕಾಂಗ್ರೆಸ್ ಕಾರ್ಯಕರ್ತ ರಾದ ವೇಣು , ಹರೀಶ್ಯಾದವ್ , ಗೋಪಾಲ್ , ಶಿವ ರಾಜ್ , ಮುಂತಾದವರು ಹಾಜರಿದ್ದರು .
ವರದಿ ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.