ಐಪಿಸಿ ಸೆಕ್ಷನ್ 306 ಮತ್ತು 498ಎ ಅಡಿಯಲ್ಲಿ ಪ್ರಕರಣ ದಾಖಲು
ಕೋಝಿಕ್ಕೋಡ್ (ವಿಶ್ವ ಕನ್ನಡಿಗ ನ್ಯೂಸ್) : ಯೂಟ್ಯೂಬ್ ವ್ಲಾಗರ್ ರಿಫಾ ಅವರ ಪತಿ ಮೆಹನಾಜ್ ವಿರುದ್ಧ ನಗರದ ಕಾಕೂರ್ ಪೋಲಿಸ್ ಪ್ರಕರಣ ದಾಖಲಿಸಿದ್ದಾರೆ. ಮಾನಸಿಕ ಮತ್ತು ದೈಹಿಕ ಚಿತ್ರಹಿಂಸೆಯು ರಿಫಾಳ ಸಾವಿಗೆ ಕಾರಣವಾಯಿತು ಎಂದು ಕಾಕೂರ್ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಇದರ ನಂತರ, ಐಪಿಸಿಯ ಸೆಕ್ಷನ್ 306 ಮತ್ತು 498 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪತಿ ವಿರುದ್ಧ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾದ ಅಪರಾಧಗಳನ್ನು ಹೊರಿಸಲಾಗಿದೆ.
ಕೋಝಿಕ್ಕೋಡ್ ಬಾಲುಸ್ಸೆರಿ ನಿವಾಸಿ ರಿಫಾ (20) ಮಾರ್ಚ್ 1 ರಂದು ದುಬೈನ ಜಫಾಲಿಯಾದಲ್ಲಿರುವ ತನ್ನ ಫ್ಲ್ಯಾಟ್ನಲ್ಲಿ ಶವವಾಗಿ ಪತ್ತೆಯಾಗಿದ್ದಳು. ರಿಫಾ ಅವರ ದೇಹವನ್ನು ಮನೆಗೆ ತಂದು ಅಂತ್ಯಸಂಸ್ಕಾರ ಮಾಡಿದ ನಂತರ ಅವರ ಕುಟುಂಬವು ದೂರು ದಾಖಲಿಸಿತು.
ರಿಫಾ ಸಾವಿನಲ್ಲಿ ನಿಗೂಢತೆ ಇರುವುದರಿಂದ ಅವಳ ಪತಿ ಮೆಹನಾಜ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ರಿಫಾ ಅವರ ತಂದೆ, ತಾಯಿ ಮತ್ತು ಸಹೋದರ ಗ್ರಾಮಾಂತರ ಎಸ್ಪಿ ಎ.ಶ್ರೀನಿವಾಸ್ ಅವರಿಗೆ ದೂರು ನೀಡಿದ್ದರು. ಎಸ್ಪಿ ಸೂಚನೆ ಮೇರೆಗೆ ಪ್ರಾಥಮಿಕ ತನಿಖೆ ನಡೆಸಿದ ನಂತರ ಕಾಕೂರು ಪೊಲೀಸರು ಮೆಹನಾಜ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಈ ಜೋಡಿ ಮೂರು ವರ್ಷಗಳ ಹಿಂದೆ Instagram ನಲ್ಲಿ ಪರಿಚಯವಾಗಿ ಮದುವೆಯಾಗಿತ್ತು. ದಂಪತಿಗೆ ಎರಡು ವರ್ಷದ ಮಗನಿದ್ದಾನೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.