(www.vknews.in) : ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ನವಿಲೇಹಾಳ್ ಗ್ರಾಮದ ಶ್ರೀ. ಷಂಷು ಕೆ ಬಿ ಮತ್ತು ಪರ್ವೀನ್ ಹೆಚ್ ದಂಪತಿಯ ಪುತ್ರರಾದ ಡಾ. ಷಕೀಬ್ ಎಸ್ ಕಣದ್ಮನೆ ಇವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಇವರಿಗೆ ದಿನಾಂಕ: 15-04-2022 ರ ಶುಕ್ರವಾರದಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ ಹ ದೇಶಪಾಂಡೆ ಸಂಭಾಂಗಣದಲ್ಲಿ ಅಯೋಜಿಸಲಾಗಿತ್ತು.
ಧಾರವಾಡ ಜಿಲ್ಲೆಯ ಅಕ್ಷರ ದೀಪ ಫೌಂಡೇಶನ್, ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇಧಿಕೆ ಧಾರವಾಡ-ಬೆಂಗಳೂರು ಹಾಗೂ ಕರ್ನಾಟಕ ಸೋಶಿಯಲ್ ಕ್ಲಬ್ ಹುಬ್ಬಳ್ಳಿ ಮತ್ತು ಗದಗವಾಣಿ ದಿನ ಪತ್ರಿಕೆ ಇವರ ಸಹಯೋಗದಲ್ಲಿ ನಡೆದ (ದ ರಾ ಬೇಂದ್ರೆ) ವರಕವಿಗೊಂದು ಕಾವ್ಯ ನಮನ ಯುಗಾದಿ ಸಂಭ್ರಮ ಸಮಾರಂಭದಲ್ಲಿ ಪ್ರಸ್ತಕ ಸಾಲಿನ “ಸಾಧನ ಕೇರಿಯ ಸಾಧಕ ರತ್ನ” ರಾಜ್ಯ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತೆಂದು ಅಕ್ಷರ ದೀಪ ಫೌಂಡೇಶನ್, ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇಧಿಕೆಯ ಅಧ್ಯಕ್ಷರಾದ ಪ್ರವೀಣಕುಮಾರ ಕನ್ಯಾಳರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.