ಇಸ್ಲಾಂ ಧರ್ಮವು ತಪ್ಪಿತಸ್ಥರನ್ನು ಸಹ ಕ್ಷಮಿಸುವ ಇತಿಹಾಸವನ್ನು ಹೊಂದಿದೆ..
ಕೋಯಿಕ್ಕೋಡ್ (ವಿಶ್ವ ಕನ್ನಡಿಗ ನ್ಯೂಸ್) : ಇಸ್ಲಾಂ ಧರ್ಮವು ತಪ್ಪಿತಸ್ಥರನ್ನು ಸಹ ಕ್ಷಮಿಸುವ ಇತಿಹಾಸವನ್ನು ಹೊಂದಿದೆ ಆದರೆ ಹಿಂಸೆಯನ್ನು ಮಾಡುವುದು ಇಸ್ಲಾಮಿನ ಮಾರ್ಗವಲ್ಲ. ಕುರಾನ್ ಯಾರಿಗೂ ಕೊಲ್ಲಲು ಕಲಿಸಿಲ್ಲ. ಕೆಲವರು ಹಾಗೆಂದು ಹೇಳುತ್ತಾರೆ ಎಂದು ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಹೇಳಿದರು.
ಕುರಾನ್ ಬಗ್ಗೆ ತಿಳುವಳಿಕೆ ಇಲ್ಲದವರೊಂಡಿಗೆ ನಾನು ಮಾತನಾಡಲು ಸಿದ್ಧನಿದ್ದೇನೆ. ಪ್ರವಾದಿಯ ಇತಿಹಾಸವೇನೆಂದರೆ, ಮೆಕ್ಕಾದ ವಿಜಯದ ನಂತರ, ಅವರು ತನ್ನ ಶತ್ರುಗಳನ್ನು ಕ್ಷಮಿಸಿದರು. ಇದನ್ನು ಮರೆಯಬಾರದು ಎಂದು ಕಾಂತಪುರಂ ಉಸ್ತಾದ್ ಹೇಳಿದರು. ಕೋಯಿಕ್ಕೋಡ್ ನ ಮರ್ಕಜ್ ಕಾಂಪ್ಲೆಕ್ಸ್ ಮಸೀದಿಯಲ್ಲಿ ಶುಕ್ರವಾರದ ಜುಮಾ ನಮಾಝ್ ನ ನಂತರ ಅವರು ಮಾತನಾಡುತ್ತಿದ್ದರು.
ಬದ್ರ್ ಇಸ್ಲಾಂನಲ್ಲಿ ಐತಿಹಾಸಿಕ ಮಹತ್ವದ ಯುದ್ಧವಾಗಿದೆ. ಪ್ರವಾದಿಯವರ ಮೇಲೆ ತೀವ್ರವಾದ ಆಕ್ರಮಣ ನಡೆದಾಗ ಮಾತ್ರ ಯುದ್ಧ ನಡೆಯಿತು. ಆದರೆ ಮುಸ್ಲಿಮರು ಅಂತಿಮವಾಗಿ ಮೆಕ್ಕಾವನ್ನು ಗೆದ್ದಾಗ, ಅವರು ದೀರ್ಘಕಾಲದವರೆಗೆ ದಾಳಿ ಮಾಡಿದವರನ್ನು ಕ್ಷಮಿಸಿದರು” ಎಂದು ಕಾಂತಪುರಂ ಉಸ್ತಾದ್ ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.