ಉಪ್ಪಿನಂಗಡಿ (ವಿಶ್ವ ಕನ್ನಡಿಗ ನ್ಯೂಸ್) : ತಾನು ಸಾಕುತ್ತಿದ್ದ ಕರುವನ್ನು ಮನೆಗೆ ತಗೊಂಡು ಹೋಗುತ್ತಿರುವ ಸಂದರ್ಭ ಮಾರಕ ಆಯುಧಗಳೊಂದಿಗೆ ಬಂದ ಬಜರಂಗದಳದ ಕಾರ್ಯಕರ್ತರು ಮಹಿಳೆಯ ಬಟ್ಟೆಯನ್ನು ಹರಿದು ಹಲ್ಲೆಮಾಡಿ, ಮಾಂಗಲ್ಯಸರ ಹಾಗೂ ಕಿವಿಯೋಲೆಯನ್ನು ಕಿತ್ತು ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿ ವ್ಯಾಪ್ತಿಯಿಂದ ವರದಿಯಾಗಿದೆ.
ಬೊಲೆರೋ ಮತ್ತು ಕಾರಿನಲ್ಲಿ ಬಂದ ತಂಡ ಮಹಿಳೆ ಮತ್ತು ಜೊತೆಗಿದ್ದ ಕೆಲಸಗಾರನಿಗೂ ಚಾಕು ಮತ್ತು ಸೈಕಲ್ ರಾಡ್ ನಿಂದ ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಮಹಿಳೆಯ ಬಟ್ಟೆ ಹರಿದು ಹಾಕಿ ಧೌರ್ಜನ್ಯ ನಡೆಸಿದ್ದಾರೆ ಎಂದು ಮಹಿಳೆ ದೂರಿಕೊಂಡಿದ್ದಾರೆ.
ಕೊಕ್ಕಡದ ಮಹೇಶ ಮತ್ತು ತಂಡದವರು ಕೃತ್ಯ ನಡೆಸಿದ್ದಾಗಿ ಮಹಿಳೆ ತಿಳಿಸಿದ್ದಾರೆ ಪೊಲೀಸರಿಗೆ ಕರೆ ಮಾಡುತ್ತಿದ್ದಂತೆಯೇ ಅರೋಪಿಗಳು ಸ್ಥಳದಿಂದ ಪರಾರಿ ಆಗಿದ್ದರೆ ಎನ್ನಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.