(www.vknews.in) : ಸಮಾಜ ಸೇವೆಯಲ್ಲಿ ನಿರಂತರ ಗುರುತಿಸಿ ಕೊಂಡಿರುವ ಇ-ಫೌಂಡೇಶನ್ (ಇ-ಫ್ರೆಂಡ್ಸ್) ವತಿಯಿಂದ ಪುತ್ತೂರು ಕೇಂದ್ರ ಜುಮಾ ಮಸೀದಿಯಲ್ಲಿ ಬೃಹತ್ ಇಫ್ತಾರ್ ಕೂಟ ನಡೆಯಿತು. ಪ್ರಮುಖವಾಗಿ ಸಂಸ್ಥೆಯ ಎಲ್ಲಾ ಕಾರ್ಯದಲ್ಲೂ ಕೈಜೋಡಿಸುತ್ತಿರುವ ದಾನಿಗಳು ಮತ್ತು ಸಾರ್ವಜನಿಕರಿಗಾಗಿ ಇ-ಫೌಂಡೇಶನ್ (ಇ-ಫ್ರೆಂಡ್ಸ್) ಸದಸ್ಯರು ಏರ್ಪಡಿಸಿದ ಈ ಇಫ್ತಾರ್ ಕೂಟದಲ್ಲಿ 600ಕ್ಕೂ ಅಧಿಕ ಮಂದಿ ಪಾಲ್ಗೊಂಡರು.
ಕಾರ್ಯಕ್ರಮವನ್ನು ಉದ್ದೇಶಿಸಿ ಜುಮಾ ಮಸೀದಿಯ ಖತೀಬರಾದ ಅಹ್ಮದ್ ಪೊಕೊಯ ತಂಗಳ್ ಅವರು ಮಾತನಾಡಿ ಇ-ಫ್ರೆಂಡ್ಸ್ ಯುವಕರು ತಾಲೂಕಿನಲ್ಲಿ ಬಡ ಜನರ ಕಷ್ಟ ಕಾರ್ಯಗಳಲ್ಲಿ ನಿರಂತರ ಸ್ಪಂದಿಸುತ್ತಿದ್ದು ಇದರ ಕಾರ್ಯವು ಶ್ಲಾಘನೀಯವಾಗಿದೆ, ಪ್ರತೀ ರಂಜಾನ್ ತಿಂಗಳಿನಲ್ಲಿ ಇವರು ನಡೆಸುತ್ತಿರುವ ಆಸ್ಪತ್ರೆಗಳಲ್ಲಿ ರೋಗಿಗಳ ಜೊತೆ ತಂಗುವ ಉಪವಾಸಿಗರಿಗೆ ಇಫ್ತಾರ್ ಮತ್ತು ಸಹರಿ ವ್ಯವಸ್ಥೆ ಬಹಳ ಪ್ರಯೋಜನಕಾರಿಯೂ ಮತ್ತು ಅಲ್ಲಾಹನ ಕಡೆಯಿಂದ ಅಪಾರ ಪ್ರತಿಫಲ ಸಿಗುವ ಕಾರ್ಯವು ಆಗಿದೆ. ಯಾವುದೇ ಊರುಗಳ ಆಸ್ಪತ್ರೆಗಳಿಗೆ ಹೋದರೆ ಅಲ್ಲಿ ನೀವೊಮ್ಮೆ ಭೇಟಿ ಕೊಟ್ಟು ಉಪವಾಸ ನಿರತರೊಂದಿಗೆ ಇಫ್ತಾರ್ ಮತ್ತು ಸಹರಿ ವ್ಯವಸ್ಥೆ ಕೇಳಿದರೆ ಬಡವರು, ಹಣವಂತರು ಹೇಳುವುದು ಒಂದೇ ಇಲ್ಲ, ಇಲ್ಲಿ ಅದರ ವ್ಯವಸ್ಥೆ ಇಲ್ಲ ಎಂದು, ಆದರೆ ಪುತ್ತೂರಿನ ಯಾವುದೇ ಆಸ್ಪತ್ರೆಗಳಲ್ಲಿ ನೀವು ಹೋಗಿ ಇಫ್ತಾರ್ ವ್ಯವಸ್ಥೆ ಬಗ್ಗೆ ಕೇಳಿದರೆ ಬಡವರು, ಎಲ್ಲಾ ವರ್ಗದವರು, ಎಷ್ಟೇ ದೂರದಿಂದ ಬಂದವರಾಗಿದ್ದರೂ ಹೇಳುವುದು ಇಲ್ಲ ಅದರ ಸಮಸ್ಯೆ ಇಲ್ಲ. ಎಲ್ಲವೂ ಬಂದು ನಮಗೆ ಪ್ರತೀ ದಿನ ಇ-ಫ್ರೆಂಡ್ಸ್ ಯುವಕರು ನೀಡುತ್ತಿದ್ದಾರೆ. ಒಬ್ಬ ಉಪವಾಸಿಗನಿಗೆ ಇಷ್ಟೆಲ್ಲಾ ವ್ಯವಸ್ಥೆಯನ್ನು ಕಲ್ಪಿಸುವುದು ಬಹಳ ಪುಣ್ಯದ ಕಾರ್ಯವಾಗಿದೆ, ಪ್ರತೀ ದಿನ ನೂರಾರು ಜನರಿಗೆ ನೀಡುವ ಈ ಯೋಜನೆಗೆ ಸಂಸ್ಥೆ ಅಪಾರ ಖರ್ಚು ವೆಚ್ಚ ತಗಲಬಹುದು, ಈ ಯುವಕರಿಗೆ ದಾನಿಗಳೆಲ್ಲರೂ ಇವರ ಜೊತೆ ಕೈಜೋಡಿಸಿ ಸಹಕರಿಸಬೇಕೆಂದು ಕರೆನೀಡಿದರು. ಇಂತಹ ಯುವಕರ ಕಾರ್ಯವು ಮುಂದಿನ ಮಕ್ಕಳಿಗೂ ಪ್ರೇರಣೆಯಾಗಬೇಕು ಎಂದು ಅಭಿಪ್ರಾಯ ಪಟ್ಟರು.
ಈ ಕಾರ್ಯಕ್ರಮದಲ್ಲಿ ಪುತ್ತೂರು ಅನ್ಸಾರುದ್ದೀನ್ ಜಮಾತ್ ಕಮೀಟಿ ಅಧ್ಯಕ್ಷ ಎಲ್.ಟಿ ರಜಾಕ್ ಹಾಜಿ, ಆಝಾದ್ ಅಬ್ದುಲ್ ರಹಿಮಾನ್ ಹಾಜಿ, ಅರಿಯಡ್ಕ ಅಬ್ದುಲ್ ರಹಿಮಾನ್ ಹಾಜಿ, ಸಮೀರ್ ಯುನಿಟಿ ಸಹಿತ ಉಲಮಾಗಳು, ಅನೇಕ ಉಮಾರಾ ನೇತಾರರು, ರಾಜಕೀಯ ಮುಖಂಡರು, ಪುತ್ತೂರಿನ ವರ್ತಕರು ಮತ್ತು ಯುವಕರು ಅನೇಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಇ-ಫೌಂಡೇಶನ್ ಅಧ್ಯಕ್ಷ ಹೈದರ್ ಚೊಯ್ಸ್ ಬಂದವರನ್ನು ಸ್ವಾಗತಿಸಿ, ಪ್ರ.ಕಾರ್ಯದರ್ಶಿ ಆರಿಫ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.