ಬರ್ತಡೇ ಆಚರಣೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್; ಪ್ರಕರಣ ದಾಖಲು..
ಉಡುಪಿ (www.vknews.in) : ಉಡುಪಿ ಜಿಲ್ಲೆಯ ಪಡುಬಿದ್ರೆ ಎಂಬಲ್ಲಿ ತಲವಾರು ಹಿಡಿದು ಬರ್ತ್ ಡೇ ಆಚರಣೆ ಹಿನ್ನೆಲೆ ಏಳು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಬರ್ತಡೇ ಆಚರಣೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಸ್ಪಿ ಆದೇಶದಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪಡುಬಿದ್ರಿ ನಿವಾಸಿಗಳಾದ ಜೀತೇಂದ್ರ ಶೆಟ್ಟಿ, ಗಣೇಶ್ ಪೂಜಾರಿ ಹಾಗೂ ಶರತ್ ಶೆಟ್ಟಿ ಅವರನ್ನು ಪೋಲಿಸರ ವಶಕ್ಕೆ ಪಡೆಯಲಾಗಿದೆ. ಬರ್ತ್ ಡೇ ಯುವಕ ನಿರಂಜನ್ ಶೆಟ್ಟಿಗಾರ್, ತನುಜ್, ಸೂರಜ್ ಹಾಗೂ ಅನಿಶ್ ತಲೆ ಮರೆಸಿಕೊಂಡಿದ್ದು, ಇವರ ಬಂಧನಕ್ಕೆ ಕಾಪು ಸರ್ಕಲ್ ಇನ್ಸ್ ಪೆಕ್ಟರ್ ಪ್ರಕಾಶ್ ಹಾಗೂ ಪಡುಬಿದ್ರಿ ಎಸ್ ಐ ಪುರುಷೋತ್ತಮ್ ತಂಡ ರಚಿಸಲಾಗಿದೆ. ಉಡುಪಿ ಎಸ್ಪಿ ವಿಷ್ಣುವರ್ಧನ್ ಆದೇಶದಂತೆ ಕಾರ್ಯಚರಣೆ ನೆಡೆಯುತ್ತಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.