ಜೆದ್ದಾ(www.vknews.in): ವಿಸಿಟ್ ವೀಸಾದಲ್ಲಿದ್ದ ಮಂಗಳೂರು ಕುಂಬ್ರ ಮೂಲದ ವ್ಯಕ್ತಿಯೊಬ್ಬರು ಮದೀನಾ ಭೇಟಿ ವೇಳೆ ಮೃತಪಟ್ಟಿದ್ದಾರೆ. ಮೃತರನ್ನು ಮಂಗಳೂರಿನ ಪುತ್ತೂರಿನ (ಕುಂಬ್ರ) ಅಬ್ದುರಹ್ಮಾನ್ (72) ಎಂದು ಗುರುತಿಸಲಾಗಿದೆ. ಮದೀನಾಕ್ಕೆ ಭೇಟಿ ನೀಡಲು ಮತ್ತು ಉಮ್ರಾ ಮಾಡಲು ಅವರು ತಮ್ಮ ಮಗನೊಂದಿಗೆ ಜಿಜಾನ್ನಿಂದ ಹೊರಟಿದ್ದರು. ಅವರು ಇಂಡಿಯನ್ ಕಲ್ಚರಲ್ ಫೌಂಡೇಶನ್ (ಐಸಿಎಫ್) ನ ಜೀಸನ್ ಸೆಂಟ್ರಲ್ ಕಮಿಟಿ ಏರ್ಪಡಿಸಿದ ಬಸ್ನಲ್ಲಿ ಮದೀನಾಕ್ಕೆ ಪ್ರಯಾಣಿಸುತ್ತಿದ್ದರು. ಶುಕ್ರವಾರ ಜುಮುಆದಲ್ಲಿ ಪಾಲ್ಗೊಂಡು ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ನಿಧನರಾದರು
ಕೆ.ಸಿ.ಎಫ್ ಮದೀನಾ ಮುನವ್ವರ ಸೆಕ್ಟರ್ ನಾಯಕರಾದ ಅಬ್ದುಲ್ ರಜಾಕ್ ಉಳ್ಳಾಲ್,ತಾಜುದ್ದೀನ್ ಸುಳ್ಯ, ಜಬ್ಬಾರ್ ಉಪ್ಪಿನಂಗಡಿ, ಹುಸೈನರ್ ಮಾಪಲ್ ಹಾಗೂ ಫೈಝಲ್ ಸಂತೋಷ್ ನಗರ ಇವರ ತಂಡದ ಮೂಲಕ ಜನಾಝದ ಅಂತ್ಯಕ್ರಿಯೆಗೆ ಬೇಕಾಗಿರುವ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ಮದೀನದಲ್ಲಿ ಮೃತರ ಅಂತ್ಯಕ್ರಿಯೆ ನಡೆಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.