ಕರ್ನಾಟಕದ ವೆಬ್ ತಾಣ ವಿಕೆ ನ್ಯೂಸ್ ಗೆ 12 ರ ಸಂಭ್ರಮ. ಬಹುಶಃ ಎಲ್ಲಾ ವೆಬ್ ತಾಣಗಳಿಗಿಂತ ವಿಕೆ ನ್ಯೂಸ್ ನನಗೆ ಹೆಚ್ಚು ಇಷ್ಟವಾಗಲು ಕಾರಣ ನಮ್ಮ ಸಮುದಾಯದ ಶೈಕ್ಷಣಿಕ ಸಾಧನೆಗೆ ಮುನ್ನುಡಿ ಬರೆದ ಕಾರಣಕ್ಕಾಗಿ. ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಹಿಜಾಬ್ ಧರಿಸಿದ ವಿಧ್ಯಾರ್ಥಿನಿಗಳು ಗಮನಾರ್ಹ ಸಾಧನೆ ಮಾಡಿದ್ದರು. ಅಂತಹ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮೊದಲ ಪ್ರಾಶಸ್ತ್ಯ ನೀಡಿ ವರದಿ ಪ್ರಕಟಿಸಿ ರಾಜ್ಯ ದೇಶ ವಿದೇಶಗಳಿಗೂ ಅವರ ಸಾಧನೆಗಳನ್ನು ಪರಿಚಯಿಸಿದ ಕೀರ್ತಿ ವಿಕೆ ನ್ಯೂಸ್ ಬಳಗಕ್ಕೆ ಸಲ್ಲುತ್ತದೆ.
ಬಹುಶಃ ನಮ್ಮ ನಡುವೆ ಇರುವ ಬೇರೆ ಯಾವುದೇ ವೆಬ್ ತಾಣಗಳು ಇಂತಹ ಪ್ರಯತ್ನಕ್ಕೆ ಕೈ ಹಾಕಲಿಲ್ಲ. ವಿಕೆ ನ್ಯೂಸ್ ಈ ಮೂಲಕ ನಮ್ಮ ಸಮುದಾಯದ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದಿದೆ. ಇಂದು ನಮ್ಮ ಸಮುದಾಯ ಶೈಕ್ಷಣಿಕವಾಗಿ ಬಹಳ ಹಿಂದಿದೆ ಎಂದು ಬಾಯಿ ಮಾತಿನಲ್ಲಿ ಚಪ್ಪರಿಸುವ ಸಂಖ್ಯೆ ಹೆಚ್ಚು. ಆದರೆ ಪ್ರೋತ್ಸಾಹ ನೀಡುವ ಸಂಖ್ಯೆ ಬಹಳ ಕಡಿಮೆ.
ಆದರೆ ವಿಕೆ ನ್ಯೂಸ್ ಶೈಕ್ಷಣಿಕ ಸಾಧಕರನ್ನು ಸರಣಿಯಾಗಿ ಪ್ರಕಟಿಸಿ ಸಮುದಾಯದ ಶೈಕ್ಷಣಿಕ ಸಾಧಕರ ಬೆನ್ನು ತಟ್ಟುವ ಪ್ರಯತ್ನ ಮಾಡಿರುವುದನ್ನು ನಾವೆಲ್ಲ ಮುಕ್ತ ಕಂಠದಿಂದ ಶ್ಲಾಘಿಸಬೇಕಿದೆ. ಮುಂದಿನ ದಿನಗಳಲ್ಲೂ ಇಂತಹ ಕೆಲಸ ಮುಂದುವರಿಸಲಿ. ವಿಕೆ ನ್ಯೂಸ್ ಬಳಗಕ್ಕೆ ಅಭಿನಂದನೆಗಳು
ಜಬ್ಬಾರ್ ಮಲ್ಲೂರು ಸಾಮಾಜಿಕ ಕಾರ್ಯಕರ್ತ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.