ಮೋದಿ ಇದೀಗ ಚಿಕ್ಕ ರಾಷ್ಟ್ರವಾದ ಕತಾರ್ ಮುಂದೆಯೂ ನಮಸ್ಕರಿಸಬೇಕಾಗಿದೆ..
ನವದೆಹಲಿ (ವಿಶ್ವ ಕನ್ನಡಿಗ ನ್ಯೂಸ್) : ನರೇಂದ್ರ ಮೋದಿ ಸರ್ಕಾರದ ಕಳೆದ ಎಂಟು ವರ್ಷಗಳಲ್ಲಿ ದೇಶದ ವಿದೇಶಾಂಗ ನೀತಿ ತೀವ್ರ ಕುಸಿತವನ್ನು ಅನುಭವಿಸಿದೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಶನಿವಾರ ಹೇಳಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಮೋದಿ ಸರ್ಕಾರದ ಕಳೆದ ಎಂಟು ವರ್ಷಗಳಲ್ಲಿ ಭಾರತ ಮಾತೆ ನಾಚಿಕೆಯಿಂದ ತಲೆ ತಗ್ಗಿಸಿ ನಿಂತಿದ್ದಾರೆ. ಪ್ರವಾದಿಯವರ ವಿರುದ್ಧ ಬಿಜೆಪಿ ನಾಯಕರ ಧರ್ಮನಿಂದನೆ ಹೇಳಿಕೆಗಳ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಸಮಯದಲ್ಲಿ ಸ್ವಾಮಿ ಅವರ ಹೇಳಿಕೆಗಳು ಬಂದಿವೆ.
ಮೋದಿ ಅಧಿಕಾರಕ್ಕೆ ಬಂದ ಎಂಟು ವರ್ಷಗಳಲ್ಲಿ, ಭಾರತವು ಲಡಾಖ್ನಲ್ಲಿ ಚೀನಾದ ಮುಂದೆ ತೆವಳುತ್ತಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸ್ವಾಮಿ, ಉಕ್ರೇನ್ ವಿಷಯದಲ್ಲಿ ರಷ್ಯಾದ ಮುಂದೆ ತಲೆಬಾಗಿ, ಕ್ವಾಡ್ ನಲ್ಲಿ ಯುನೈಟೆಡ್ ಸ್ಟೇಟ್ಸ್ ಗೆ ಶರಣಾಗಿ, ಇದೀಗ ಚಿಕ್ಕ ರಾಷ್ಟ್ರವಾದ ಕತಾರ್ ಮುಂದೆಯೂ ನಮಸ್ಕರಿಸಬೇಕಾಗಿದೆ ಎಂದು ಹೇಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.