ದೇಶ ವಿದೇಶಗಳಲ್ಲಿರುವ ಕನ್ನಡಿಗರ ಜನಪ್ರಿಯ ಅಂತರ್ಜಾಲ ಸುದ್ದಿ ತಾಣ ವಿಶ್ವ ಕನ್ನಡಿಗ ನ್ಯೂಸ್ ದಿನೇ ದಿನೇ ಹೊಸ ಹೊಸ ಚಿಂತನೆಗಳೊಂದಿಗೆ ದೇಶ ವಿದೇಶದ ಕನ್ನಡಿಗರ ಕಣ್ಮಣಿಯಾಗಿ ಅಪಾರ ಓದುಗರ ಮನ ಸೆಳೆದಿದೆ.
ನೇರ ದಿಟ್ಟ ನಡೆ ನುಡಿಯ ಮೂಲಕ ಓದುಗ ಅಭಿಮಾನಿಗಳ ಬಳಗದಲ್ಲಿ ತನ್ನ ಸ್ಥಾನವನ್ನು ಗಟ್ಟಿಯಾಗಿಸಿದ ವಿಶ್ವ ಕನ್ನಡಿಗ ನ್ಯೂಸ್ ಯಶಸ್ವಿ ಹನ್ನೆರಡನೇ ವರ್ಷವನ್ನು ಪೂರೈಸಿ 13ನೇ ವರ್ಷಕ್ಕೆ ಸಾಗುತ್ತಿರುವ ವಿಶ್ವ ಕನ್ನಡಿಗ ನ್ಯೂಸ್ ನಮ್ಮ ನಿಮ್ಮೆಲ್ಲರ ಹೆಮ್ಮೆಯ ಪ್ರತೀಕ. ವಿಶ್ವ ಕನ್ನಡಿಗ ನ್ಯೂಸ್ ಕಳೆದ ಹನ್ನೆರಡು ವರುಷದ ಹಾದಿಯಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿರಬಹುದು. ಅದೆಲ್ಲವನ್ನು ಮೆಟ್ಟಿ ನಿಂತು ತನ್ನ ಜವಾಬ್ದಾರಿಯನ್ನು ಮುನ್ನೆಡೆಸುತ್ತಾ ಬಂದಿದೆ.
ಮಾಧ್ಯಮ ಕ್ಷೇತ್ರದಲ್ಲಿ ಹನ್ನೆರಡು ವರುಷದ ಹಾದಿ ಅಂದರೆ ಅಷ್ಟೊಂದು ಸುಲಭವಾದ ಮಾರ್ಗವಲ್ಲ. ಸಮಾಜದ ಹೊಣೆಗಾರಿಕೆ ಅರಿತು ಕೊಂಡು ಮುಲಾಜಿಲ್ಲದೆ ತನ್ನ ಹೆಜ್ಜೆಯನ್ನು ಮುಂದಿಟ್ಟು ಕೊಂಡು ಬಂದಿದೆ. ದೇಶ ವಿದೇಶದ ಕನ್ನಡಿಗರ ಧ್ವನಿಯಾಗಿ, ಯಾವುದೇ ಆಮಿಷಕ್ಕೆ ಒಳಗಾಗದೆ, ಮಾಧ್ಯಮ ರಂಗದ ಪಾವಿತ್ರ್ಯತೆಯನ್ನು ಎತ್ತಿ ಹಿಡಿದ ವಿಶ್ವ ಕನ್ನಡಿಗ ನ್ಯೂಸ್ ಈಗ ಎಲ್ಲರ ಮನೆ ಮಾತಾಗಿದೆ. ದೇಶ ವಿದೇಶಗಳಲ್ಲಿ ಓದುಗ ಅಭಿಮಾನಿ ಬಳಗವನ್ನು ಸ್ರಷ್ಟಿಸಿಕೊಂಡಿದೆ.
ವಿಶ್ವ ಕನ್ನಡಿಗ ನ್ಯೂಸ್ ಇನ್ನೂ ಹೆಚ್ಚಿನ ಅಪಾರ ಓದುಗರ ಸಂಖ್ಯೆಯನ್ನು ದಾಟಲಿ. ಅದು ತನ್ನ ಯಶಸ್ಸಿನ ಚೈತ್ರ ಯಾತ್ರೆಯನ್ನು ಮುಂದುವರಿಸಲು ನಾವು ನೀವು ಕೈ ಜೋಡಿಸೋಣ. ಓದುಗರ ಅಭಿರುಚಿಗೆ ತಕ್ಕಂತೆ ಸುದ್ದಿ ಮಾಡುವ ವಿಶ್ವ ಕನ್ನಡಿಗ ನ್ಯೂಸ್ ಸಂಪಾದಕ ಮಂಡಳಿಯ ಕಾರ್ಯದಕ್ಷತೆ ಶ್ಲಾಘನೀಯ.
✍️ ಮುಹಮ್ಮದ್ ಉಳ್ಳಾಲ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.