ಕೆಲ ಪತ್ರಿಕೆಗಳು ಹಾಗೂ ಕೆಲ ಟಿವಿ ಮಾಧ್ಯಮಗಳು ಒಂದು ಪಕ್ಷಕ್ಕಾಗಿ ರಾಜಕಾರಣಿಗಳ ಚೀಲಗಳ ತರ ದುಡಿಯುತ್ತಿದ್ದಾರೆ. ಕೆಲ ಇಲಾಖೆಯಲ್ಲಿ ಉನ್ನತ ಮಟ್ಟದಲ್ಲಿ ಇರುವ ಕೆಲ ಅಧಿಕಾರಿಗಳ ಕೈಗೊಂಬೆಯಾಗಿ ಅವರು ಹೇಳಿದಂಥ ವಿಷಯಗಳನ್ನು ಪ್ರಸಾರಮಾಡುವ ಮಾಧ್ಯಮ ಮಿತ್ರರೂ ಕೆಲವರು ಇದ್ದಾರೆ.
ಅವರ ತಾಳಕ್ಕೆ ಕುಣಿಯುತ್ತಾ ಮಾಧ್ಯಮ ಮಿತ್ರರು ಹೇಳುವ ಕೆಲಸವನ್ನು ಮಾಡುವ ಅಧಿಕಾರಿಗಳೇ ಹೆಚ್ಚು, ಅದರಿಂದ ಸಾವಿರಾರುಗಟ್ಟಲೆ ಹಣವನ್ನು ಹೊಡೆಯುವವರೇ ಹೆಚ್ಚು, ಇಂತಹ ಅಧಿಕಾರಿಗಳ ಜೊತೆ ಅವರಂತಹ ಮಿತ್ರರು ಕೂಡಾ ಇರುತ್ತಾರೆ. ಜನಸಾಮಾನ್ಯರು ಯಾರನ್ನು ಮೆಚ್ಚಬೇಕು ಯಾರನ್ನು ನಂಬಬೇಕು ಯಾರ ಬಳಿ ನ್ಯಾಯ ಕೇಳಬೇಕು ಇದು ಜನಸಾಮಾನ್ಯರಿಗೆ ಇರುವ ಪ್ರಶ್ನೆ.
ಕೆಲ ಮಾಧ್ಯಮಗಳು ಯಾವ ಜನರಿಗೂ ಉಪಯುಕ್ತವಾಗುವುದಿಲ್ಲ, ಇದರಿಂದ ಜನಸಾಮಾನ್ಯರ ಸಮಸ್ಯೆಯನ್ನು ಅರಿಯುವುದೇ ಕಮ್ಮಿ, ಆದ್ದರಿಂದ ಮಾಧ್ಯಮ ಮಿತ್ರರು ದೀನದಲಿತರಿಗೆ ಕಡು ಬಡವರಿಗೆ ಮಾಧ್ಯಮಗಳಲ್ಲಿ ನ್ಯಾಯ ದೊರಕಿಸಿಕೊಡುವ ಕೆಲಸವನ್ನು ಮಾಡಬೇಕಾಗಿದೆ.
ಅಧಿಕಾರಿಗಳನ್ನು ರಾಜಕಾರಣಿಗಳ ಭ್ರಷ್ಟಾಚಾರಗಳನ್ನು ಬಯಲಿಗೆ ತರಬಹುದಾದ ಏಕೈಕ ವೇದಿಕೆ ಎಂದರೆ ಅದು ಮಾಧ್ಯಮಗಳು ಎಂಬುವುದು ಜನರಲ್ಲಿ ಇರುವ ನಂಬಿಕೆ . ಆದ್ದರಿಂದ ಆ ಮಾಧ್ಯಮದಲ್ಲಿ ಜನರಿಗೆ ನ್ಯಾಯ ಸಿಗುವಂತೆ ಕೆಲಸವನ್ನು ಮಾಡಬೇಕಾಗಿದೆ.
ಹಾಗಾಗಿ ವಿಕೆ ನ್ಯೂಸ್ ಮಾಧ್ಯಮ ಸಮಸ್ಯೆಯನ್ನು ಸ್ಪಂದಿಸುವ ಮಾಧ್ಯಮವಾಗಲಿ. ಬಡವರ ಪಾಲಿಗೆ ಮಾಧ್ಯಮಗಳು ಇಲ್ಲವಾಗಿದೆ ಹಾಗಾಗಿ ವಿಕೆ ನ್ಯೂಸ್ ಬಡವರ ಪಾಲಿಗಾಗಿ ಮೀಸಲಾಗಿಡಿ ಎಂದು ನಮ್ಮ ಕಳಕಳಿ ಮನವಿ. ವಿಕೆ ನ್ಯೂಸ್ ಗೆ ಹನ್ನೆರಡು ವರ್ಷದ ಸಂಭ್ರಮದ ಶುಭಾಶಯಗಳು !
– ಅರ್ಜುನ್ ಗೌಡ, ಸಕಲೇಶಪುರ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.