ಯಾವುದೇ ಚಾನಲ್, ಪತ್ರಿಕೆಗಳಾಗಲಿ ನನಗೆ ನ್ಯೂಸ್ ಅಂದರೆ ತುಂಬಾ ಅಲರ್ಜಿ. ಒಂದನ್ನೇ ನೂರಾರು ಬಾರಿ ತೋರಿಸಿ ಜನರನ್ನು ಹುಚ್ಚಾಗಿಸುತ್ತಾರೆ. ಇದರಿಂದ ನ್ಯೂಸ್ ನೋಡುವುದಕ್ಕೂ ಮನಸ್ಸು ಬರಲ್ಲ.
ಲಾಕ್ಡೌನ್ ಸಂದರ್ಭಗಳಲ್ಲಿ ಸರಕಾರ ಮನಸ್ಸಿಗೆ ಬಂದಂತೆ ಬಂದ್ ಮಾಡುತ್ತಿದ್ದು ಜನರಿಗೆ ತುಂಬಾ ತೊಂದರೆಗಳಾಗಿವೆ. ಸರಿಯಾದ ಮಾಹಿತಿ ಸಿಗುತ್ತಿರಲಿಲ್ಲ, ಇದರಿಂದ ಕೆಲವೊಂದು ಅತ್ಯಗತ್ಯ ಮಾಹಿತಿಗಳು ನನ್ನ ಸ್ನೆಹಿತ ಇರ್ಶಾದ್ ಮುಖಾಂತರ ವಿಕೆ ನ್ಯೂಸ್ ಲಿಂಕ್ಗಳು ಸಿಗುತ್ತಿತ್ತು. ಇದರಿಂದ ಲಾಕ್ ಡೌನ್ ಸಮಯದಲ್ಲಿ ತುಂಬಾ ಉಪಕಾರಿಯಾಯಿತು. ನನ್ನ ಸ್ನೇಹಿತೆಯರಿಗೂ ಲಿಂಕ್ ಕಳುಹಿಸುತ್ತಿದ್ದೆ, ಅವರಿಗೂ ತುಂಬಾ ಉಪಯೋಗವಾಗುತ್ತಿತ್ತು.
ಸ್ನೇಹಿತನು ಲಿಂಕ್ ಕಳುಹಿಸುತ್ತಿದ್ದರಿಂದ ಕೆಲವೊಂದು ಬರಹಗಳು, ಕವನ, ಲೇಖನ, ಅರೋಗ್ಯ ಮಾಹಿತಿ ಇನ್ನಿತರವುಗಳನ್ನು ಓದುತ್ತಾ ವಿಕೆ ನ್ಯೂಸ್ ನನ್ನ ಅಭಿಮಾನವಾಯಿತು. ಹನ್ನೆರಡನೆಯ ವರ್ಷ ಪೂರೈಸಿದ ವಿಕೆ ನ್ಯೂಸ್ ತಂಡಕ್ಕೆ ಹೃದಯ ಅಂತರಾಳದ ಅಭಿನಂದನೆಗಳು. ಶುಭವಾಗಲಿ..
– ಡಾ| ಸಬ್ರೀನ ಶಮ, ಮಂಗಳೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.