ಕೋಲಾರ ( ವಿಶ್ವಕನ್ನಡಿಗ ನ್ಯೂಸ್ ) : ಸಾರ್ವಜನಿಕರು ತಾಲ್ಲೂಕು ಕಚೇರಿ ಮತ್ತು ಗ್ರಾಮದ ನಾಡ ಕಚೇರಿಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಅವರ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ಅಧಿಕಾರಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ ಅವರು ತಿಳಿಸಿದರು .
ಇಂದು ಮುಳಬಾಗಿಲು ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ , ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಮುಂದುವರೆದ ಭಾಗವಾಗಿ ಜಿಲ್ಲಾಧಿಕಾರಿಗಳು ಪ್ರತಿ ಮಂಗಳವಾರ ತಾಲ್ಲೂಕು ಕಛೇರಿಗಳಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು , ಕಂದಾಯ ಇಲಾಖೆಯು ಸ್ವಾವಲಂಬನೆ ಎಂಬ ಆ್ಯಪ್ ಅನ್ನು ಜಾರಿಗೆ ತಂದಿದ್ದು , ಇದನ್ನು ಯಾವ ರೀತಿ ಬಳಸಬೇಕೆಂದು ಅಧಿಕಾರಿಗಳಿಗೆ ವಿಡಿಯೋ ಮೂಲಕ ತಿಳಿಸಲಾಯಿತು ಮತ್ತು ರೈತರು ಭೂ ದಾಖಲೆ ಮುಟೇಶನ್ ಅಟ್ಲಾಸ್ ಪ್ರತಿ ಮುಂತಾದವುಗಳನ್ನು ಈ ಆ್ಯಪ್ ಮುಖಾಂತರ ಅರ್ಜಿ ಸಲ್ಲಿಸಬಹುದು . ಅಧಿಕಾರಿಗಳು ಸಾವಲಂಬನೆ ಆ್ಯಪ್ ಅನ್ನು ಯಾವ ರೀತಿ ಬಳಸಬೇಕೆಂದು ರೈತರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು . ಸಮಯಕ್ಕೆ ಸರಿಯಾಗಿ ಅಧಿಕಾರಿಗಳು ಕಛೇರಿಗಳಿಗೆ ಬರಬೇಕು ಮತ್ತು ಸಮಸ್ಯೆಗಳನ್ನು ಬೇಗನೆ ವಿಲೇವಾರಿ ಮಾಡಿ ಸಾರ್ವಜನಿಕರಿಗೆ ನಿಮ್ಮ ಸೇವೆಯನ್ನು ನಿರ್ವಹಿಸಿ ಮತ್ತು ಸರ್ಕಾರದಿಂದ ಬರುವ ಎಲ್ಲಾ ಸುತ್ತೋಲೆಗಳನ್ನು ಎಲ್ಲರೂ ಅನುಸರಿಸಿ ಅಧಿಕಾರಿಗಳಿಗೆ ನಿರ್ವಹಿಸಿದ ಕೆಲಸಗಳನ್ನು ನಿಷ್ಠೆಯಿಂದ ಮಾಡಬೇಕು ಎಂದು ತಿಳಿಸಿದರು . ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಅವರ ಸಮಸ್ಯೆಗಳಿಗೆ ಶೀಘ್ರದಲ್ಲೇ ಪರಿಹಾರ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು . ಮುಳಬಾಗಿಲು ತಾಲ್ಲೂಕು ತಹಶೀಲ್ದಾರರಾದ ಶೋಭಿತಾ ಅವರು ಮಾತನಾಡಿ ಗ್ರಾಮೀಣ ಜನರ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ಹೆಚ್ಚಾಗಿ ಕಾರ್ಯನಿರ್ವಹಿಸಬೇಕು . ಅವರನ್ನು ಕಛೇರಿಗಳಿಗೆ ಅಲೆದಾಡುವಂತೆ ಮಾಡಬಾರದು .
ಸರ್ಕಾರಿ ಕೆಲಸ ದೇವರ ಕೆಲಸ ಎಂಬಂತೆ ಕಾರ್ಯನಿರ್ವಹಿಸಬೇಕು ಹಾಗೂ ಮೇ ತಿಂಗಳಿನಿಂದ ಸಾಧಿಸಿರುವ ಪ್ರಗತಿಯನ್ನು ಜಿಲ್ಲಾಧಿಕಾರಿಗಳಿಗೆ ವಿವರವಾಗಿ ತಿಳಿಸಿದರು . ಸಭೆಯಲ್ಲಿ ಮುಳಬಾಗಿಲು ನಗರಸಭೆಯ ಆಯುಕ್ತರಾದ ಶ್ರೀಧರ್ , ಮುಳಬಾಗಲು ತಾಲ್ಲೂಕು ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.