ಮಲೇಷ್ಯಾ (ವಿಶ್ವ ಕನ್ನಡಿಗ ನ್ಯೂಸ್) : ಬಿಜೆಪಿ ವಕ್ತಾರೆ ಪ್ರವಾದಿಯವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ಪ್ರತಿಕ್ರಿಯಿಸಿರುವ ಮಲೇಷ್ಯಾ, ಶಾಂತಿ, ಸ್ಥಿರತೆಯ ಹಿತಾಸಕ್ತಿಗಳಿಗೆ ಧಕ್ಕೆ ಉಂಟು ಮಾಡುವ ಯಾವುದೇ ಪ್ರಚೋದನಕಾರಿ ನಡೆಯನ್ನು ತಡೆಗಟ್ಟಬೇಕು ಹಾಗೂ ಇಸ್ಲಾಮೋಫೋಬಿಯಾವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಭಾರತ ಕೈ ಜೋಡಿಸಬೇಕು ಎಂದು ಹೇಳಿದೆ.
ಬಿಜೆಪಿ ವಕ್ತಾರೆಯ ಹೇಳಿಕೆಯನ್ನು ಖಂಡಿಸಿರುವ ವಿಶ್ವದ ಹಲವು ದೇಶಗಳೊಂದಿಗೆ ಧ್ವನಿಗೂಡಿಸಿರುವ ಮಲೇಷ್ಯಾದ ವಿದೇಶಾಂಗ ಸಚಿವಾಲಯ, ಭಾರತದ ಹೈಕಮಿಷನರ್ ಗೆ ಸಮನ್ಸ್ ಕಳಿಸಿರುವುದಾಗಿ ಹೇಳಿದೆ. ಇದೇ ವೇಳೆ ನಿಂದನಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ವಕ್ತಾರೆಯನ್ನು ಅಮಾನತುಗೊಳಿಸಿರುವ ಪಕ್ಷದ ಕ್ರಮವನ್ನು ಮಲೇಷ್ಯಾ ಸ್ವಾಗತಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.