(ವಿಶ್ವ ಕನ್ನಡಿಗ ನ್ಯೂಸ್) : ನಮ್ಮ ಸುತ್ತಲೂ ಅನೇಕ ವಿಚಿತ್ರ ಸಂಗತಿಗಳು ನಡೆಯುತ್ತಿವೆ. ಅದೇ ರೀತಿಯ ವಿಚಿತ್ರ ಸಂಗತಿಯೊಂದು ಗುಜರಾತ್ ನ ವಡೋದರಾದಲ್ಲಿ ನಡೆದಿದೆ. ವಿರೋಧದ ನಡುವೆಯೂ ನಿಗದಿತ ದಿನಾಂಕಕ್ಕೆ ಮುಂಚಿತವಾಗಿ ಯುವತಿಯೋರ್ವಳು ತನ್ನನ್ನು ತಾನೇ ಮದುವೆಯಾಗಿಕೊಂಡಿದ್ದಾಳೆ.
24 ವರ್ಷದ ಕ್ಷಮಾ ಬಿಂದು ಎಂಬ ಯುವತಿ ತನ್ನನ್ನು ತಾನೇ ಮದುವೆಯಾಗಿದ್ದಾಳೆ. ಕೆಲವು ದಿನಗಳ ಹಿಂದೆ, ಕ್ಷಮಾ ಬಿಂದು ತನ್ನನು ತಾನು ಮದುವೆಯಾಗುವುದಾಗಿ ಘೋಷಿಸಿದ್ದಳು. ಆದರೆ ಹಲವು ಕಡೆಗಳಿಂದ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಆದ್ದರಿಂದ 11ನೇ ದಿನಾಂಕವನ್ನುಘೋಷಿಸಿದ್ದ ಕ್ಷಮಾ, ಅದಕ್ಕೂ ಮೊದಲೇ ಮದುವೆಯಾಗಿದ್ದಾಳೆ.
ಈ ಮದುವೆಯಲ್ಲಿ, ವಧುವಾಗಲಿ ಅಥವಾ ಪರೋಹಿತರಾಗಲಿ ಇರಲಿಲ್ಲ, ಕ್ಷಮಾ ಸ್ವತಃ ಮದುವೆಯಾಗಿದ್ದಾರೆ. ಮದುವೆ ಸಮಾರಂಭದಲ್ಲಿ ಸಂಪ್ರದಾಯದ ಪ್ರಕಾರ ಮೊದಲು ಮೆಹೆಂದಿ ಮತ್ತು ಹಲ್ದಿ ಸಮಾರಂಭಗಳು ಸಹ ನಡೆದವು. ಮದುವೆಯಲ್ಲಿ ಕ್ಷಮಾ ಅವರ ಆಪ್ತ ಸ್ನೇಹಿತರು ಭಾಗವಹಿಸಿದ್ದರು. ತನ್ನ ಮಧುಚಂದ್ರಕ್ಕಾಗಿ ಕ್ಷಮಾ ಗೋವಾಕ್ಕೆ ಏಕಾಂಗಿಯಾಗಿ ಹೋಗುತ್ತಾಳೆ ಎಂದು ಹೇಳಲಾಗುತ್ತದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.