ಹೊನ್ನಾಳಿ (www.vknews.in) : ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕತ್ತಿಗೆ ಸರಕಾರಿ ಪ್ರೌಡ ಶಾಲೆ ಯಲ್ಲಿ ದಿನಾಂಕ 9/06/2022 ಗುರುವಾರದಂದು ವಿವಿಧ ಮಕ್ಕಳ ಸಂಘಗಳ ಉದ್ಘಾಟನೆ, 8ನೇ ತರಗತಿ ಮಕ್ಕಳಿಗೆ ಸ್ವಾಗತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಶಾಲೆಯ ಮಕ್ಕಳಿಂದ ನಡೆಸಲ್ಪಡುವ ಹಿಂದೂಸ್ತಾನಿ ಸೇವಾದಳ ,ಧನ್ವಂತರಿ ಆರೋಗ್ಯ ಕ್ಲಬ್,ಕುವೆಂಪು ಸಾಂಸ್ಕೃತಿಕ ಸಂಘ,ಸ್ವಾಮಿ ವಿವೇಕಾನಂದ ವಿದ್ಯಾರ್ಥಿ ಸಂಘ,ಜಾಗೃತಿ ಗ್ರಾಹಕ ಸಂಘ, ಡಾ. ಬಿ.ಆರ್. ಅಂಬೇಡ್ಕರ್ ಕಾನೂನು ಸಾಕ್ಷರತಾ ಕ್ಲಬ್,
ಧ್ಯಾನ್ ಚಂದ್ ಕ್ರೀಡಾ ಸಂಘ, ಬಿ.ಆರ್. ಅಂಬೇಡ್ಕರ್ ಚುನಾವಣಾ ಸಾಕ್ಷರತಾ ಕ್ಲಬ್, ವನ ಮಂದಾರ ಇಕೋ ಕ್ಲಬ್, ಸರ್ ಸಿ ವಿ ರಾಮನ್ ವಿಜ್ಞಾನ ಸಂಘ ಗಳ ಉದ್ಘಾಟನೆ ಯನ್ನು ಶಾಲೆಯ ನಿಕಟ ಪೂರ್ವ ಅಧ್ಯಕ್ಷೆ,ಹೊನ್ನಾಳಿ ತಾಲೂಕು ಎಸ್ಡಿಎಂಸಿ ಸಮನ್ವಯ ವೇದಿಕೆ ಯ ಸದಸ್ಯರು ಆಗಿರುವ ಶ್ರೀಮತಿ ಮಮತಾ ರವರು ಉದ್ಘಾಟಿಸಿದರು.
ಕಾರ್ಯ ಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಪ್ರೇಮಬಾಯಿ. ಬಸವರಾಜ್ , ವೀಣ ಪಡುಕೋಣೆ. ರಾಜಶೇಖರ್ ,ಭಾಗಣ್ಣ ಯಾತನೂರ್. ಮಹೇಶ್ ಎಸ್ಡಿಎಂಸಿ ಸದಸ್ಯರಾದ ಚನ್ನೇಶಪ್ಪ,ಬಸವರಾಜ್,ಕುಬೇರಪ್ಪ ಹಾಗೂ ಪೋಷಕರು ,ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.