ಎಲಿಮಲೆ(ವಿಶ್ವಕನ್ನಡಿಗ ನ್ಯೂಸ್): ನುಸ್ರತುಲ್ ಇಸ್ಲಾಮ್ ಎಸೋಸಿಯೇಶನ್(ರಿ) ಎಲಿಮಲೆ ಇದರ ರೂಬಿ ಜ್ಯುಬಿಲಿ ಪ್ರಯುಕ್ತ ಉಚಿತ ಪುಸ್ತಕ ವಿತರಣೆ ಜರುಗಿತು.
ನೂರುಲ್ ಹುದಾ ಮದ್ರಸ ಎಲಿಮಲೆ ಹಾಗೂ ನೂರುಲ್ ಹುದಾ ಮದ್ರಸ ಮೆತ್ತಡ್ಕ ಇದರ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಲತೀಫ್ ಹರ್ಲಡ್ಕ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಎಲಿಮಲೆ ಮುದರ್ರಿಸ್ ಜೌಹರ್ ಅಹ್ಸನಿ ದುವಾ ನೆರವೇರಿಸಿ ಶುಭಹಾರೈಸಿದರು.
ಅಶ್ರಫ್ ಜೌಹರಿ ಕುಂಭಕ್ಕೋಡು ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಮಾಅತ್ ಕಮಿಟಿ ಅಧ್ಯಕ್ಷರಾದ ಮಹಮ್ಮದ್ ಇಕ್ಬಾಲ್ ಎಲಿಮಲೆಯವರು ಶೈಕ್ಷಣಿಕ ವಾಗಿ ಸಮಾಜವು ಮುಂದುವರೆಯುವಂತಾಗಲು ನುಸ್ರತ್ ಸಂಸ್ಥೆ ಹಮ್ಮಿಕೊಂಡು ಬರುತ್ತಿರುವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮದ್ರಸ ಅಧ್ಯಾಪಕರುಗಳಾದ ಫೈಸಲ್ ಹಿಮಮಿ, ಅಬ್ದುಲ್ ಹಕೀಂ ಅಶ್ಹರಿ, ಕೋಶಾಧಿಕಾರಿ ಮಹಮ್ಮದ್ ಮುಸ್ಲಿಯಾರ್ ದೊಡ್ಡಂಗಡಿ, ನುಸ್ರತ್ ಸಲಹೆಗಾರರಾದ ಮಹಮ್ಮದ್ ಕುಂಞಿ ಮೇಲೆ ಬೈಲು, ಜೀರ್ಮುಕ್ಕಿ ಮಸೀದಿ ಅಧ್ಯಕ್ಷರಾದ ಸಿದ್ದೀಕ್ ತಟ್ಟುಕಡ, ನುಸ್ರತ್ ಉಪಾಧ್ಯಕ್ಷರಾದ ಸೂಫಿ ಮುಸ್ಲಿಯಾರ್ ಪಾಣಾಜೆ ಹಾಗೂಅಬ್ದುಲ್ಲಾ ಜಿ ಎಸ್ ಜೀರ್ಮುಕ್ಕಿ , ಕೋಶಾಧಿಕಾರಿ ಅಬ್ದುಲ್ ಖಾದರ್ ಪಾಣಾಜೆ. ಹಾಗೂ ಪದಾಧಿಕಾರಿಗಳಾದ ಅಶ್ರಫ್ ದಿನಸಿ ಬಜಾರ್, ಸಿದ್ದೀಕ್ ಎಲಿಮಲೆ, ಹಾರಿಸ್ ಪಳ್ಳಿಕಲ್, ಶಿಹಾಬ್ ಎಲಿಮಲೆ, ಸತ್ತಾರ್ ಮೇಲೆ ಬೈಲು, ಮಹಮೂದ್ ಸಖಾಫಿ, ಅಬ್ದುಲ್ ಖಾದರ್ ಅತ್ತಿ ಮಾರಡ್ಕ, ಸುಲೈಮಾನ್ ಮೆತ್ತಡ್ಕ, ಆಸಿಫ್ ಹೊಟ್ಟಚೋಡಿ, ಹೈದರ್ ಹಾಜಿ, ಇಬ್ರಾಹಿಂ ಜೀರ್ಮುಕ್ಕಿ , ನಾಸಿರ್ ದೊಡ್ಡಂಗಡಿ ಸಹಕರಿಸಿದರು ಸೂಫಿ ಎಲಿಮಲೆ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.