ಮಂಗಳೂರು (www.vknews.in) : ಅಭಿವ್ರಧ್ಧಿ, ಉದ್ಯೋಗ, ಕ್ರಷಿ ಮತ್ತು ತಾಂತ್ರಿಕತೆಯ ವಿಷಯದಲ್ಲಿ ಚರ್ಚಿಸಿ ಯೋಜನೆಗಳನ್ನು ರೂಪಿಸಬೇಕಾದ ಆಡಳಿತ ಪಕ್ಷವು ಧರ್ಮ, ಮಂದಿರ, ವಸ್ತ್ರ ಸಂಹಿತೆ ಮತ್ತು ಧಾರ್ಮಿಕ ನಂಬಿಕೆಗಳಂತಹ ವಿಚಾರಗಳಲ್ಲಿ ಮೂಗು ತೂರಿಸಿ ದೇಶವನ್ನು ಜಗತ್ತಿನ ಮುಂದೆ ಬೆತ್ತಲಾಗಿಸುತ್ತಿದ್ದಾರೆ. ಮನುಷ್ಯನು ಆಸ್ತಿ ಅಂತಸ್ತು ಗಳಿಗಿಂತ ನೆಮ್ಮದಿಯ ಜೀವನವನ್ನು ಬಯಸುತ್ತಾನೆ ಎಂದು ಜೆ.ಡಿ.ಎಸ್ ನಾಯಕಿ ಸುಮತಿ.ಎಸ್.ಹೆಗ್ಡೆಯವರು ಹೇಳಿದ್ದಾರೆ.
ಆದರೆ ನಾವೀಗ ಆ ನೆಮ್ಮದಿಯನ್ನೇ ಕಳೆದುಕೊಂಡಿದ್ದೇವೆ. ಸರ್ವ ಶ್ರೇಷ್ಠವಾದ ನಮ್ಮ ಸಂವಿಧಾನ ನಮಗೆ ಅಮೂಲ್ಯವಾದ ಹಕ್ಕು ಮತ್ತು ಸ್ವಾತಂತ್ರ್ಯವನ್ನು ನೀಡಿದೆ. ಒಂದು ಧರ್ಮದ ವಿಶ್ವಾಸ, ನಂಬಿಕೆ ಮತ್ತು ಘನತೆಯನ್ನು ಹೀಯಾಳಿಸುವ ಮತ್ತು ನಿಂದಿಸುವುದು ನೀಚ ಕ್ರತ್ಯವಾಗಿದೆ. ನಾಲಗೆಯು ವ್ತಕ್ತಿತ್ವವನ್ನು ಸೂಚಿಸುತ್ತದೆ ಎಂಬಂತೆ ವೇದಿಕೆ ಸಿಕ್ಕಿತೆಂದು ಬಾಯಿಗೆ ಬಂದಂತೆ ಮಾತಾಡುವುದು ನಾಗರಿಕತೆಯ ಲಕ್ಷಣವಲ್ಲ. ತನ್ನ ಧರ್ಮವನ್ನು ಎಷ್ಟು ಪ್ರೀತಿಸುತ್ತೇವೆಯೋ ಅಷ್ಟೇ ಗೌರವವನ್ನು ಇತರ ಧರ್ಮಕ್ಕೂ ನೀಡುವುದೇ ಶ್ರೇಷ್ಠ ಧರ್ಮವಾಗಿದೆ. ಸರ್ವ ಜನಾಂಗದ ಶಾಂತಿಯ ದೋಟವಾದ ಭಾರತದ ನೆಲದಲ್ಲಿ ಈ ರೀತಿಯ ತಾರತಮ್ಯಗಳು ನೋಡುವಾಗ ಅತೀ ನೋವಾಗುತ್ತದೆ. ಸಾಮರಸ್ಯ ಮತ್ತು ಸಹಬಾಳ್ವೆಗೆ ಧಕ್ಕೆ ತರುವಂತ ಕೆಲಸಗಳನ್ನು ನಿಲ್ಲಿಸಬೇಕು ಎಂದು ಸುಮತಿ.ಎಸ್.ಹೆಗ್ಡೆಯವರು ಹೇಳಿದರು.
ರಾಜಕೀಯದ ಲಾಭಕ್ಕೋಸ್ಕರ ಜವಾಬ್ದಾರಿಯುತ ಸ್ಥಾನದಲ್ಲಿರುವವರ ಈ ರೀತಿಯ ವೈಷಮ್ಯ ಹೇಳಿಕೆಗಳು ಖಂಡನೀಯ. ಶ್ರೇಷ್ಠ ಮಾನವತಾವಾದಿ ಪ್ರವಾದಿ ಮುಹಮ್ಮದರನ್ನು ನಿಂದಿಸಿದ ಬಿ.ಜೆ.ಪಿ ನಾಯಕರಾದ ನೂಪೂರ್ ಶರ್ಮಾ ಮತ್ತು ನವೀನ್ ಜಿಂದಾಲ್ ರನ್ನು ಕೂಡಲೇ ಬಂಧಿಸಬೇಕಾಗಿದೆ ಎಂದು ಜೆ.ಡಿ.ಎಸ್ ನಾಯಕಿಯಾದ ಸುಮತಿ.ಎಸ್.ಹೆಗ್ಡೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.