ಕಳೆದ 12 ಸಂವತ್ಸರಗಳಿಂದ ಮರುಭೂಮಿಯಲ್ಲಿ ಬರಹದ ಕಂಪನ್ನು ಸೂಸಿ ಜನ ಮನಸ್ಸನ್ನು ಸೂರೆಗೊಂಡ ವಿಕೆ ನ್ಯೂಸ್ ಅಂತರ್ಜಾಲ ಪತ್ರಿಕೆಗೆ ಮನದಾಳದ ಅಭಿನಂದನೆಗಳು.
ಆರಂಭದಿಂದಲೂ ನಾನು ಇದರ ಸಹ ಯಾತ್ರಿಯಾಗಿದ್ದು ಇದರ ಸಂಪಾದಕೀಯ ಮಂಡಳಿಯೊಂದಿಗೆ ಆತ್ಮೀಯತೆಯ ಸಂಬಂಧವನ್ನು ಇಟ್ಟುಕೊಂಡಿರುತ್ತೇನೆ. ಪ್ರಧಾನ ಸಂಪಾದಕ ಸಿ.ಹೆಚ್ ಹಮೀದ್ ಕಾವು ರವರು ಬರಹಗಾರರಿಗೆ ಪ್ರೋತ್ಸಾಹ ನೀಡಿ, ವಿಕೆ ನ್ಯೂಸ್ ಕಡೆಗೆ ಆಕರ್ಷಿಸುವಲ್ಲಿ ಸಫಲರಾಗಿದ್ದು, ಪತ್ರಿಕೆಯ ಪ್ರಸಿದ್ಧಿಗೆ ಕೈಗನ್ನಡಿಯಾಗಿದೆ. 2010 ರಲ್ಲಿ ವಾರದ ವ್ಯಕ್ತಿ ವಿಭಾಗದಲ್ಲಿ ನನ್ನನ್ನು ಆರಿಸಿ ಪ್ರೋತ್ಸಾಹಿಸಿದ್ದು ಅದಕ್ಕೆ ನಾನು ಎಂದಿಗೂ ಚಿರಋಣಿಯಾಗಿರುತ್ತೇನೆ.
ಹೆಚ್ಚಾಗಿ ಸಂಘಸಂಸ್ಥೆಗಳ ಪ್ರಚಾರ ಮತ್ತು ಕಾರ್ಯವೈಖರಿಗಳನ್ನು ಜನರ ಕೆಡೆಗೆ ಒಯ್ಯಲು ಮಾದ್ಯಮದ ಸಹಾಯ ಅನಿವಾರ್ಯವಾಗಿದ್ದು, ಈ ಕೆಲಸವನ್ನು ಜಾತಿ, ಮತ, ಪಕ್ಷ, ವಿಭಾಗ , ಮುಂತಾದ ಯಾವುದೇ ಭೇದಭಾವ ಇಲ್ಲದೆ ಅಚ್ಚುಕಟ್ಟಾಗಿ ರವಾನಿಸುವಲ್ಲಿ ವಿಕೆ ನ್ಯೂಸ್ ಯಶಸ್ವಿಯಾಗಿರುತ್ತದೆ. ಕೊಲ್ಲಿ ರಾಷ್ಟ್ರಗಳಲ್ಲಿ ನೂರಾರು ಸಂಘ ಸಂಸ್ಥೆಗಳು ಕಾರ್ಯಾಚರಿಸಿ ತಾಯ್ನಾಡ ವಿದ್ಯಾ ಕೇಂದ್ರಗಳ ನಿರ್ಮಾಣ ಮತ್ತು ಅಭಿವೃದ್ದಿ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವುದನ್ನು ಜನತೆಗೆ ಪರಿಚಯಿಸುವ ಕಾರ್ಯದೊಂದಿಗೆ ತಾಯ್ನಾಡಿನಲ್ಲೂ ನಡೆಯುವ ಎಲ್ಲಾ ಸಾಮಾಜಿಕ , ರಾಜಕೀಯ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಜನರ ಕಡೆ ಒಯ್ಯಲು ವಿಕೆ ನ್ಯೂಸ್ ಸಂಪೂರ್ಣ ಯಶಸ್ವಿಯಾಗಿದ್ದು, ಆ ಕಾರಣಕ್ಕಾಗಿ ಎಲ್ಲಾ ಅನಿವಾಸಿ ಸಂಘ ಸಂಸ್ಥೆಗಳ ಪರವಾಗಿ ಅಭಿನಂದನೆಯನ್ನು ಅರ್ಪಿಸಲು ಸಂತೋಷಪಡುತ್ತೇನೆ.
ಮಾರಕ ಸಾಂಕ್ರಾಮಿಕ ರೋಗ ಕೊರೋನಾ ಉತ್ತುಂಗಕ್ಕೇರಿ ಭೀಕರವಾಗಿ ನರ್ತಿಸುತ್ತಿರುವಾಗಲೂ ಪತ್ರಿಕೆಯ ಪರಿಶ್ರಮದಲ್ಲಿ ಒಂದಿಂಚೂ ಕಡಿಮೆಯಾಗದೆ ಮುಂದುವರಿಸಿ ವರದಿಯನ್ನು ಸಮಯಕ್ಕೆ ಸರಿಯಾಗಿ ತಲುಪಿಸುವಲ್ಲಿ ಯಶಸ್ವಿಯಾಗಿದ್ದ ವಿಕೆ ನ್ಯೂಸ್ ನ ಶ್ರಮ ಅಭಿನಂದನೀಯ ಕಾರ್ಯವಾಗಿರುತ್ತದೆ. ಇದೇ ಕಾರಣಕ್ಕಾಗಿ ಮರುಭೂಮಿಯ ಮಾಣಿಕ್ಯ ಎಂಬ ಬಿರುದಿಗೆ ವಿಕೆ ನ್ಯೂಸ್ ಎಷ್ಟು ಮಾತ್ರಕ್ಕೂ ಅರ್ಹ ಎಂದು ಹೇಳಲು ಹೆಮ್ಮೆ ಎನಿಸುತ್ತದೆ.
ವಿಕೆ ನ್ಯೂಸ್ ಇದರ ಭವಿಷ್ಯ ಉಜ್ವಲವಾಗಿರಲಿ, ನಿಸ್ವಾರ್ಥ ಸಂಪಾದಕ ಮಂಡಳಿಯ ಪರಿಶ್ರಮವು ಫಲಪ್ರಧವಾಗಲಿ. ನೂರಾರು ವರ್ಷ ಉತ್ಸಾಹದಿಂದ ಮುಂದುವರಿಯಲಿ. ಸಕಲೈಶ್ವರ್ಯವನ್ನು ಪರಮಾತ್ಮನು ಕರುಣಿಸಲಿ, ದಿಟ್ಟತೆಯೊಂದಿಗೆ ಪತ್ರಿಕಾ ಮಾದ್ಯಮವನ್ನು ಕೊಂಡೊಯ್ಯಲು ಸಾದ್ಯವಾಗಲಿ ಎಂದು ಹಾರೈಸುತ್ತೇನೆ..
– ಬದ್ರುದ್ದೀನ್ ಹೆಂತಾರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.